ದರ್ಶನ್, ಪವಿತ್ರಾ ಸೇರಿದಂತೆ ಒಟ್ಟೂ ಹದಿನೇಳು ಮಂದಿ ಈಗ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ನಟ ದರ್ಶನ್ ಆಪ್ತರು ಹಾಗೂ ಚಿತ್ರರಂಗದ ಹಲವರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಅವರಲ್ಲಿ ಕೆಲವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದರೆ ಕೆಲವರು ಅವರಾಗಿಯೇ ತಮ್ಮತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ...
ಕನ್ನಡದ ಕಿರುತೆರೆ, ಸಿನಿಮಾ ಹಾಗು ಬಿಗ್ ಬಾಸ್ ಖ್ಯಾತಿಯ ನಟಿ ತನಿಷಾ ಕುಪ್ಪಂಡ (Tanisha Kuppanda) ಅವರು ಸದ್ಯದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಸಂಗತಿ ಬಗ್ಗೆ ಮಾತನಾಡಿದ್ದಾರೆ. ಖಾಸಗಿ ಯೂಟ್ಯೂಬ್ ಸಂದರ್ಶನದಲ್ಲಿ ಭಾಗಿಯಾಗಿ ಮಾತನಾಡಿದ ತನಿಷಾ ನಟ ದರ್ಶನ್ ಆರೋಪಿ ಎನ್ನಲಾಗುತ್ತಿರುವ ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ಮಾತನಾಡಿದ್ದಾರೆ. ನಟ ದರ್ಶನ್ ಅವರ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಕಳುಹಿಸಿರುವ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯಾಗಿದ್ದಾರೆ.
ದರ್ಶನ್, ಪವಿತ್ರಾ ಸೇರಿದಂತೆ ಒಟ್ಟೂ ಹದಿನೇಳು ಮಂದಿ ಈಗ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ನಟ ದರ್ಶನ್ ಆಪ್ತರು ಹಾಗೂ ಚಿತ್ರರಂಗದ ಹಲವರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಅವರಲ್ಲಿ ಕೆಲವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದರೆ ಕೆಲವರು ಅವರಾಗಿಯೇ ತಮ್ಮತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ನಟಿ ತನಿಷಾ ಕೂಡ ಕ್ಯಾಮೆರಾ ಮುಂದೆ, ಮೈಕ್ ಮುಂದೆ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಈ ಕೆಳಗಿನಂತೆ ಹೇಳಿಕೊಂಡಿದ್ದಾರೆ.
ಶ್!..ಹುಶಾರಾಗಿರಿ, ಶ್ರಾವಣ ಮಾಸದಲ್ಲಿ ತಲೆಯೊಳಗೆ ಹುಳ ಬಿಡಲು ಪ್ಲಾನ್ ಮಾಡಿದೆ ಉಪೇಂದ್ರ & ಟೀಮ್!
ನಟಿ ತನಿಷಾ 'ನಾನು ಮನೆನಲ್ಲಿ ಮಮ್ಮಿ ಹತ್ರ ಮಾತಾಡ್ತಾ ಇರ್ಬೇಕಾದ್ರೆ ಈ ಒಂದು ವಿಚಾರನಾ ನಾನು ಶೇರ್ ಮಾಡ್ಕೊಂಡಿದ್ದೆ.. ಒಮ್ಮೆ, ಈ ಕೇಸ್‌ನಲ್ಲಿ ದರ್ಶನ್ ಸರ್ ಅಲ್ದೇ ಇದ್ರೆ, ಯಾರು, ಎಲ್ಲಿ ಏನಾಯ್ತು.. ಇಂಥವ್ನೊಬ್ಬ ವ್ಯಕ್ತಿ ಇದ್ದ, ಅಶ್ಲೀಲವಾಗಿ ಮೆಸೇಜ್ ಮಾಡ್ತಿದ್ದ ಅನ್ನೋ ಒಂದು ಪ್ರಕರಣ ಹೊರಗಡೆ ಬರ್ತಾನೇ ಇರ್ಲಿಲ್ಲ.. ಇದು ನನ್ನ ಅನಿಸಿಕೆ. ದರ್ಶನ್ ಸರ್ ಇನ್‌ವಾಲ್ವ್ ಆಗಿದಾರೋ ಇಲ್ವೋ ಅನ್ನೋದನ್ನ ಅವ್ರೇ ಹೇಳ್ಬೇಕು, ಕಾನೂನು ಕೇಳ್ಬೇಕು.. ಅದು ಬಿಟ್ಟರೆ ನಮಗೆ ಅದ್ರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ..
ಮಾಧ್ಯಮಗಳಲ್ಲಿ ಏನೇನೋ ಒಂದಿಷ್ಟು ನೋಡ್ತಾ ಇರ್ತೀವಿ, ನೋಡಿದ್ಮೇಲೆ ಹೌದಂತೆ, ಇರ್ಬಹುದಂತೆ, ಇಲ್ವಂತೆ ಅನ್ನೋ ವಿಚಾರಾನಾ ಅಂತೆ, ಕಂತೆನಲ್ಲಿ ನಾವು ಕೇಳ್ತಾ ಇರ್ತೀವಿ... ಅವ್ರೇನು ತೋರಿಸ್ತೀರ್ತಾರೋ ಅದನ್ನೆಲ್ಲಾ ನಾವು ನೋಡ್ತಾ ಇರ್ತೀವಿ.. ಕೆಲವೊಂದು ಸಾರಿ ಏನಾಗುತ್ತೆ ಅಂದ್ರೆ, ಸ್ವಲ್ಪ ಓವರ್ ಆಗಿ ತೋರಿಸ್ತಿದೀರ ಅನ್ಸಿಬಿಡುತ್ತೆ..
ಕೊಲ್ಲೂರು ಪ್ರಸಾದಕ್ಕೂ ಮನೆಯೂಟ ಅರ್ಜಿ ವಾಪಸಾತಿಗೂ ಏನಿದೆ ಲಿಂಕ್? ಯಾಕೆ ಚರ್ಚೆಯಾಗ್ತಿದೆ..?
ಇನ್ನು ಕೆಲವೊಂದು ಸರ್ತಿ, ಇರೋ ವಿಷ್ಯಾನಾ ಮಾತಾಡ್ತಾ ಇಲ್ವಲ್ಲಾ ಅನ್ನಿಸಿಬಿಡುತ್ತೆ.. ಈ ಕೇಸಲ್ಲಿ, ಅವ್ರೆಲ್ಲೋ ಅಪರಾಧ ಮಾಡಿರ್ಬಹುದು ಅನ್ನೋದು ಸ್ವಲ್ಪ ಜಾಸ್ತಿ ಹೈಲೈಟ್ ಆಯ್ತು.. ಈ ವ್ಯಕ್ತಿ, ರೇಣುಕಾಸ್ವಾಮಿ ಮಾಡಿದ್ದು ತಪ್ಪು ಅನ್ನೋದನ್ನ ಯಾರೂ ಮಾತಾಡ್ಲಿಲ್ಲ ಅನ್ನೋದು ನನ್ನ ಒಂದು ಪರ್ಸನಲ್ ಫೀಲಿಂಗ್' ಎಂದಿದ್ದಾರೆ, ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ.