ಯುಐ ಸ್ಯಾಂಪಲ್ಸ್ಗಳು ಉಪೇಂದ್ರ ಅಭಿಮಾನಿ ಬಳಗಕ್ಕೆ ಮತ್ತೇರಿಸಿವೆ. ಉಪೇಂದ್ರ ಕಲ್ಕಿ ಕಥೆಯನ್ನ ಹೇಳುತ್ತಿದ್ದಾರಾ ಅನ್ನೋ ಡೌಟ್ ಶುರುವಾಗಿದೆ. ವಿಎಫ್ಎಕ್ಸ್ ಕೆಲಸ ಹೆಚ್ಚಾಗಿದ್ದಿದ್ರಿಂದ ಆ ಕೆಲಸದಲ್ಲೇ ಉಪೇಂದ್ರ ಅವರು ಬ್ಯುಸಿ ಆಗಿದ್ರು. ಆದರೆ, ಈಗ ನೋಡಿದ್ರೆ ಕಥೆ...
ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ (Actor Upendra) ಡೈರೆಕ್ಷನ್ ಸಿನಿಮಾ ಅಂದ್ರೆ ಬಿಡಿಸಿ ಹೇಳಬೇಕಿಲ್ಲ. ಕ್ರೇಜ್ಕಾ ಕಮಾಲ್ಗೆ ಇವರೇ ಬ್ರ್ಯಾಂಡ್. ಈಗ ಯುಐ ಕ್ರೇಜ್ ಪೀಕ್ನಲ್ಲಿದೆ. ಆದ್ರೂ ಸೈಲೆಂಟ್ ಆಗಿದ್ದರು ಉಪೇಂದ್ರ. ಆಗಸ್ಟ್ ಮೊದಲ ವಾರ ಬಿಗ್ ಬ್ಯಾಂಗ್ ಮಾಡೋದು ಪಕ್ಕಾ ಎನ್ನಲಾಗ್ತಿದೆ. ಯಾಕಂದ್ರೆ, ಯುಐ ನಿರ್ಮಾಪಕ ಕೆಪಿ ಶ್ರೀಕಾಂತ್ ಆಗಸ್ಟ್ ಮೊದಲ ವಾರದಲ್ಲಿ ತಮ್ಮ ಸಿನಿಮಾದ ಭರ್ಜರಿ ಸುದ್ದಿಯೊಂದನ್ನ ಕೊಟ್ಟೇ ಕೊಡುತ್ತೇವೆ ಎಂದಿದ್ದಾರೆ.
ಶ್ರಾವಣ ಮಾಸದಲ್ಲಿ 'UI' ಶುಭ ಸಮಾಚಾರ ಫಿಕ್ಸ್, ಉಪ್ಪಿ ಹುಟ್ಟುಹಬ್ಬಕ್ಕೆ ಬರುತ್ತೆ ಪ್ಯಾನ್ ಇಂಡಿಯಾ 'UI' ಎನ್ನಲಾಗ್ತಿದೆ. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಸೂಪರ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬ. ಈ ವರ್ಷ ಅದನ್ನು ಯುಐ ಮೂಲಕ ಸ್ಪೆಷಲ್ ಆಗಿ ಆಚರಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ ಎನ್ನಲಾಗ್ತಿದೆ. ಅದೇನು ವಿಶೇಷ ರೀತಿ, ಏನೆಲ್ಲಾ ಇರುತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ!
ಯುಐ ಸ್ಯಾಂಪಲ್ಸ್ಗಳು ಉಪೇಂದ್ರ ಅಭಿಮಾನಿ ಬಳಗಕ್ಕೆ ಮತ್ತೇರಿಸಿವೆ. ಉಪೇಂದ್ರ ಕಲ್ಕಿ ಕಥೆಯನ್ನ ಹೇಳುತ್ತಿದ್ದಾರಾ ಅನ್ನೋ ಡೌಟ್ ಶುರುವಾಗಿದೆ. ಈ ಸಿನಿಮಾದಲ್ಲಿ ವಿಎಫ್ಎಕ್ಸ್ ಕೆಲಸ ಹೆಚ್ಚಾಗಿದ್ದಿದ್ರಿಂದ ಆ ಕೆಲಸದಲ್ಲೇ ಉಪೇಂದ್ರ ಅವರು ಬ್ಯುಸಿ ಆಗಿದ್ರು. ಈಗ ಚನ್ನೈನಲ್ಲಿ ಸಿನಿಮಾದ ಫೈನಲ್ ಬಿಜಿಎಂ ಕೆಲಸ ಕೊನೆ ಹಂತಕ್ಕೆ ಬಂದಿದೆ. ಹೀಗಾಗಿ ಶ್ರಾವಣ ಮಾಸದಲ್ಲಿ ಯುಐ ಶುಭ ಸಮಾಚಾರ ಇದೆ ಅಂತ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಹೇಳಿದ್ದಾರೆ.
ಅದೇನು ಅಂತ ಹುಡುಕ್ತಾ ಹೋದ್ರೆ ಈ ಶ್ರಾವಣ ಮಾಸದಲ್ಲಿ ಉಪೇಂದ್ರ ಹುಟ್ಟುಹಬ್ಬ ಬರುತ್ತೆ. ಉಪೇಂದ್ರ ಜನ್ಮದಿನಕ್ಕೆ ಯುಐ ಸಿನಿಮಾ ರಿಲೀಸ್ ಆಗಲಿದೆ ಅನ್ನೋದು ಈ ಶ್ರಾವಣ ಮಾಸದ ಶುಭ ಸಮಾಚಾರ ಅಂತ ಹೇಳಲಾಗ್ತಿದೆ. ಒಟ್ಟಿನಲ್ಲಿ ಯುಐ ಸಿನಿಮಾ ಮೇಲೆ ಸಿನಿ ಜಗತ್ತಿನ ಕಣ್ಣಿದೆ. ಅದರಲ್ಲೂ ಸ್ಯಾಂಡಲ್‌ವುಡ್ ಸಿನಿರಂಗಕ್ಕೆ ಭಾರೀ ಸಕ್ಸಸ್ ಮೂಲಕ ದೊಡ್ಡ ಬ್ರೇಕ್ ಬೇಕಾಗಿದೆ. ಅದನ್ನು ಯುಐ ಕೊಡುತ್ತೆ ಅನ್ನೋದು ಸ್ಯಾಂಡಲ್‌ವುಡ್ ಪ್ರೇಕ್ಷಕರು ಹಾಗೂ ಉದ್ಯಮದ ಲೆಕ್ಕಾಚಾರ!