ಅನುಶ್ರೀ ಅಂತ ಹೆಸ್ರು ಬದಲಾಯಿಸ್ತೇನೆ ಅಂದ್ರು ಪಾರ್ವತಮ್ಮಾ... ಪ್ಲೀಸ್​ ಬೇಡಮ್ಮಾ ಎಂದು ರಿಕ್ವೆಸ್ಟ್​ ಮಾಡಿದೆ...

Published : Jul 30, 2024, 09:52 PM IST
 ಅನುಶ್ರೀ ಅಂತ ಹೆಸ್ರು ಬದಲಾಯಿಸ್ತೇನೆ ಅಂದ್ರು ಪಾರ್ವತಮ್ಮಾ... ಪ್ಲೀಸ್​ ಬೇಡಮ್ಮಾ ಎಂದು ರಿಕ್ವೆಸ್ಟ್​ ಮಾಡಿದೆ...

ಸಾರಾಂಶ

ನಾಯಕಿಯಾಗಿ ಪದಾರ್ಪಣೆ ಮಾಡಿದ್ದು ಹೇಗೆ, ಪಾರ್ವತಮ್ಮನವರು ಹೆಸರು ಬದಲಾಯಿಸುವಂತೆ ಒತ್ತಾಯಿಸಿದ್ದೇಕೆ ಎನ್ನುವ ಕುರಿತು ಅನು ಪ್ರಭಾಕರ್​ ಮಾತನಾಡಿದ್ದಾರೆ.  

ಚಿತ್ರರಂಗದಲ್ಲಿ ಬರೋ ಕನಸೂ ಇರಲಿಲ್ಲ. ಇದದ್ದು ಗಗನ ಸಖಿ ಆಗುವ ಆಸೆ. ಆದರೆ ಡೆಸ್ಟಿನಿ ಅಂತಾರಲ್ಲ. ಹಾಗೆ ಚಿತ್ರರಂಗಕ್ಕೆ ಬಂದೆ. ನನ್ನ ಅಮ್ಮ ಗಾಯತ್ರಿ  ಪ್ರಭಾಕರ್​ ಅವರು, ಗೃಹ ಪ್ರವೇಶಕ್ಕೆ ಹೋದಾಗ ಅವರ ಬಳಿ ಇದ್ದ ನನ್ನ ಫೋಟೋ ಅಲ್ಲಿದ್ದವರ ಕಣ್ಣಿಗೆ ಬಿತ್ತು. ದೊಡ್ಮನೆ ಬ್ಯಾನರ್‌ನಲ್ಲೇ ರೆಡಿ ಆಗ್ತಿರೋ ಹೊಸ ಚಿತ್ರಕ್ಕೆ ಹೊಸ ಮುಖವನ್ನು ಪರಿಚಯ ಮಾಡ್ಬೇಕಿತ್ತು. ನನ್ನ ಫೋಟೋ ನೋಡಿ, ಎಲ್ಲರನ್ನೂ ವಿಚಾರಿಸಿದ ಬಳಿಕ ಅಮ್ಮನಿಗೆ ವಿಷಯ ತಿಳಿಸಿದರು. ನನ್ನ ಅಪ್ಪನಿಗೆ ಫೋಟೋಗ್ರಫಿ ಹುಚ್ಚು. ನನ್ನ ಫೋಟೋಗಳನ್ನು ಕ್ಲಿಕ್ಕಿಸಿದ್ದರು. ಅದನ್ನೇ ನೋಡಿ ನನ್ನನ್ನು ಸೆಲೆಕ್ಟ್​ ಮಾಡಿ ಬಿಟ್ಟಿದ್ರು. ನನ್ನ ಅಮ್ಮನೂ ಒಪ್ಪಿಕೋ ಎಂದರು. ಅದಕ್ಕಾಗಿ ಒಪ್ಪಿಕೊಂಡೆ. ಹೀಗೆ ಮೊದಲಿಗೆ ಹೃದಯ ಹೃದಯ ಚಿತ್ರದಲ್ಲಿ ಸೆಲೆಕ್ಟ್​ ಆದೆ ಎಂದು ನಟಿ ಅನು ಪ್ರಭಾಕರ್​ ತಮ್ಮ ಸಿನಿ ಪಯಣದ ಕುರಿತು ಹೇಳಿಕೊಂಡಿದ್ದಾರೆ.

ರ್ಯಾಪಿಡ್​ ರಶ್ಮಿ ಷೋನಲ್ಲಿ  ಮಾತನಾಡಿದ ಅವರು, ತಮ್ಮ ಜೀವನದ ಹಲವು ವಿಷಯಗಳನ್ನು ತೆರೆದಿಟ್ಟಿದ್ದಾರೆ. ಪಲ ಚೆನ್ನಿಗರಾಯ, ಶಾಂತಿ ಕ್ರಾಂತಿ ಹಾಗೂ ಇಂಗ್ಲಿಷ್‌ನ್ ಡಾರ್ಕ್ ಜಂಗಲ್ ಚಿತ್ರಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದವರು ಹೃದಯ ಹೃದಯದ ಮೂಲಕ ನಾಯಕಿಯಾಗಿ ಪ್ರವೇಶ ಪಡೆದರು. ಇವರ ಅಕ್ಕ ರಥಸಪ್ತಮಿ ನಾಯಕಿ ಆಶಾರಾಣಿ. ಆಶಾರಾಣಿ  ಅವರ ಹೆಸರು ನಿವೇದಿತಾ. ಇವರ ಹೆಸರನ್ನು ಬದಲಾಯಿಸಿದ್ದು, ಪಾರ್ವತಮ್ಮ ರಾಜ್​ಕುಮಾರ್​ ಅವರೇ. ರಥಸಪ್ತಮಿ ಮಾಡಿದ ಇಡೀ ತಂಡವೇ ಹೃದಯ ಹೃದಯದಲ್ಲಿಯೂ ಇತ್ತು ಎನ್ನುತ್ತಲೇ ಪಾರ್ವತಮ್ಮನವರು ತಮ್ಮ ಹೆಸರನ್ನೂ ಬದಲಾಯಿಸಲು ಹೇಗೆ ಒತ್ತಾಯ ಮಾಡಿದರು ಎಂದು ಅನು ಪ್ರಭಾಕರ್​ ತಿಳಿಸಿದ್ದಾರೆ. 

ವಿಷ್ಣುವರ್ಧನ್​ ಬಾಬಾ ರೀತಿ ಬಟ್ಟೆ ಕಟ್ಟಿಕೊಳ್ತಿದ್ಯಾಕೆ? ಅವರ ಒಡನಾಟ ಹೇಗಿತ್ತು? ಅನು ಪ್ರಭಾಕರ್ ಮನದಾಳದ ಮಾತು...

ನನ್ನ ಅಕ್ಕನನ್ನು ಲಾಂಚ್ ಮಾಡಿದ ದೊಡ್ಮನೆ ಬ್ಯಾನರ್‌ನಲ್ಲೇ ನಾನು ಚಿತ್ರರಂಗಕ್ಕೆ ಬಂದೆ. ಆಗ ನನ್ನ ಹೆಸರು ಅನ್ನಪೂರ್ಣ ಎಂದು ಇತ್ತು. ಪಾರ್ವತಮ್ಮನವರು ನಿನ್ನ ಅಕ್ಕನ ಹಾಗೆ ನಿನ್ನ ಹೆಸರನ್ನೂ ಬದಲಿಸುತ್ತೇನೆ.  ನಿವೇದಿತಾಗೆ  ಆಶಾರಾಣಿ ಅಂತ ಹೆಸರಿಟ್ಟೆ. ಜಯಶ್ರೀಗೆ ಸುಧಾರಾಣಿ ಅಂತ ಇಟ್ಟೆ. ಮಾಲಾಶ್ರೀ ಆಗಿದೆ. ಈಗ ನಿನಗೆ ಅನುಶ್ರೀ ಎಂದು ಇಡುತ್ತೇನೆ ಎಂದರು. ಆದರೆ ನನಗೆ ಅದು ಇಷ್ಟವಾಗಲಿಲ್ಲ. ನನ್ನ ಅಮ್ಮ ಗಾಯತ್ರಿ ಪ್ರಭಾಕರ್​ ಅಂತಲೇ ಫೇಮಸ್​.ಅದಕ್ಕೆ  ನಾನು ಅನು ಪ್ರಭಾಕರ್​ ಎಂದೇ ಫೇಮಸ್ ಆಗಬೇಕು ಎಂದು ಹೇಳಿದೆ. ಅವರು ತುಂಬಾ ಒತ್ತಾಯ ಮಾಡಿದ್ರು.  ಟೈಟಲ್ ಕಾರ್ಡ್ ಮಾಡಿಸುವ ದಿನ ಕೂಡ ಕೇಳಿದ್ರು, ಆದರೆ ನಾನು ಒಪ್ಪಲಿಲ್ಲ.  ಅಮ್ಮ ಪ್ಲೀಸ್ ಬೇಡ ಎಂದೆ.  ಅಲ್ಲಿಯವರೆಗೆ ಅನ್ನಪೂರ್ಣ ಆಗಿದ್ದವಳು ಕೂಡಲೇ ಅಧಿಕೃತವಾಗಿ ನನ್ನ ಹೆಸರನ್ನು ಅನು ಪ್ರಭಾಕರ್​ ಎಂದು ಬದಲಾಯಿಸಿದೆ ಎಂದಿದ್ದಾರೆ. 
 
  
ಇನ್ನು ಅನು ಪ್ರಭಾಕರ್ ಕುರಿತು ಹೇಳುವುದಾದರೆ, ಇವರು 1999ರಲ್ಲಿ ತೆರೆಕಂಡ ಶಿವರಾಜ್‌ಕುಮಾರ್ ಅಭಿನಯದ 'ಹೃದಯ ಹೃದಯ' ಸಿನಿಮಾದಲ್ಲಿ ನಾಯಕಿಯಾಗಿ ಪದಾರ್ಪಣೆ ಮಾಡಿದರು.  ನಂತರ ರಮೇಶ್ ಅರವಿಂದ್ ಕೆಲ ಸಿನಿಮಾಗಳಲ್ಲಿ ನಟಿಸಿ ಗುರುತಿಸಿಕೊಂಡರು.  ಸಾಹಸಿಂಹ ಡಾ.ವಿಷ್ಣುವರ್ಧನ್ ಅವರ ಜೊತೆ ಸೂರಪ್ಪ, ಹೃದಯವಂತ, ಸಾಹುಕಾರ, ವರ್ಷ ಹೀಗೆ ಹಲವು ಅಭಿನಯಿಸಿದರು.  2002ರಲ್ಲಿ ಹಿರಿಯ ನಟಿ ಜಯಂತಿ ಅವರ ಮಗ ಕೃಷ್ಣಕುಮಾರ್ ಅವರ ಜೊತೆ ಅನು ಮದುವೆಯಾಯಿತು,  2014ರಲ್ಲಿ ಅವರಿಂದ ವಿಚ್ಛೇದನ ಪಡೆದುಕೊಂಡರು.  2016ರಲ್ಲಿ ನಟ ಕಮ್ ಮಾಡೆಲ್ ರಘು ಮುಖರ್ಜಿ ಅವರನ್ನು ಮದುವೆಯಾದರು. ನಟಿ ಅನು ಪ್ರಭಾಕರ್ ಅವರಿಗೆ ಇದು ಎರಡನೇ ಮದುವೆಯಾದರೆ, ನಟ ರಘು ಮುಖರ್ಜಿ ಅವರಿಗೆ ಇದು ಮೂರನೇ ಮದುವೆ. ಈ ಜೋಡಿಗೆ ಮಗಳಿದ್ದಾಳೆ. 

ಡ್ರೋನ್​ ಪ್ರತಾಪ್​ನಿಂದ ನಾನು ಕೋಟ್ಯಧೀಶ್ವರೆ ಆದೆ: ಭಾವುಕರಾಗಿ ಕಣ್ಣೀರಾದ ಅಜ್ಜಿಯ ವಿಡಿಯೋ ವೈರಲ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್