LockDown ಇದ್ದರೂ ಮನೆಯಿಂದ ಹೊರ ಬಂದು ಕಾರು ಚಲಾಯಿಸಿದ ನಟಿಯ ಪುತ್ರಿ?

Suvarna News   | Asianet News
Published : Apr 03, 2020, 03:05 PM ISTUpdated : Apr 03, 2020, 03:15 PM IST
LockDown ಇದ್ದರೂ ಮನೆಯಿಂದ ಹೊರ ಬಂದು ಕಾರು ಚಲಾಯಿಸಿದ ನಟಿಯ ಪುತ್ರಿ?

ಸಾರಾಂಶ

ದಿನದ ಅಗತ್ಯ ವಸ್ತಗಳನ್ನು ಕೊಳ್ಳಲು ಹೊರತು ಪಡಿಸಿ, ಯಾವ ಕಾರಣಕ್ಕೂ ಮನೆಯಿಂದ ಹೊರ ಬಾರದಂತೆ ಭಾರತ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದೆ. ಈ ನಡುವೆಯೂ ಖ್ಯಾತ ನಟಿಯ ಪುತ್ರಿ ಕಾರು ಚಲಾಯಿಸುತ್ತಿರುವ ಫೋಟೋ ವೈರಲ್‌ ಆಗುತ್ತಿದೆ. ಇದಕ್ಕೆ ಆ ನಟಿ ಕೊಟ್ಟ ಸ್ಪಷ್ಟನೆ ನೋಡಿ....

ಮಹಾಮಾರಿ ಕೊರೋನಾ ವೈರಸ್‌‌ ತನ್ನ ಅಟ್ಟಹಾಸ ಮುಂದುವರಿಸುತ್ತಲೇ ಇದೆ. ಭಾರತ ಸರ್ಕಾರ ಏಪ್ರಿಲ್‌ 14ವರೆಗೂ ಲಾಕ್‌ಡೌನ್‌ ಘೋಷಣೆ ಮಾಡಿದೆ.  ಜನ ಸಾಮಾನ್ಯರು ಅಗತ್ಯ ವಸ್ತುಗಳನ್ನು ಕೊಳ್ಳಲು ಮಾತ್ರ ಅವಕಾಶ ನೀಡಿದೆ. ಅನಿವಾರ್ಯವಾಗಿ ಹೊರ ಬರುವ ಜನರು ಸುರಕ್ಷಿತವಾಗಿ ಮಾಸ್ಕ್‌ ಹಾಗೂ ಗ್ಲೌಸ್‌ ಧರಿಸಿಯೇ ಹೊ ಬರಬೇಕು ಎಂದು ಕಡ್ಡಾಯ ನಿಯಮಗಳನ್ನು ಹಾಕಿದೆ.

ಸುಧಾರಾಣಿ ಹೆಸರಿಗೆ ತಕ್ಕಂತೆ ರಾಣಿಯಂತೆಯೇ ಇದ್ದಾರೆ ನೋಡಿ! ..

ಈ ಸಮಯದಲ್ಲಿ ಕನ್ನಡ ಚಿತ್ರರಂಗ ಖ್ಯಾತ ನಟಿ ಸುಧಾರಾಣಿ ತಮ್ಮ ಪುತ್ರಿ ಜೊತೆ ಅಗತ್ಯ ವಸ್ತುಗಳನ್ನು ಕೊಳ್ಳಲು ಹೊರ ಬಂದಿದ್ದಾರೆ. ಈ ವೇಳೆ ತನ್ನ ಪುತ್ರಿ ಕಾರು ಚಲಾಯಿಸುತ್ತಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 'ನಿಮ್ಮೆಲ್ಲಾ ಕನ್ಸರ್ನ್‌ಗೆ ತುಂಬಾ ಥ್ಯಾಂಕ್ಸ್. ಲಾಕ್‌ಡೌನ್‌ ಘೋಷಣೆ ಮಾಡಿದ ದಿನದಂದಲೂ ನಾವು ಹೊರಗಡೆ ಕಾಲಿಟ್ಟಿಲ್ಲ. ತರಕಾರಿ ಹಾಗೂ ದಿನಸಿ ಸಾಮಾನು ಖಾಲಿಯಾಗಿರುವ ಕಾರಣಕ್ಕೆ ಹೊರಗೆ ಬರುವ ಅನಿವಾರ್ಯತೆ ಬಂದಿದೆ.  ನನ್ನ ಮಗಳಿಗೆ License ಇದೆ. ಹಾಗಂತ ಈ ಫೋಟೋ ನೋಡಿ ನೀವು ಹೊರ ಹೋಗಬೇಕು ಎಂದೇನೂ ಇಲ್ಲ, ' ಎಂದು ಬರೆದುಕೊಂಡಿದ್ದಾರೆ. 

 

ಲಾಕ್‌ಡೌನ್‌ನಿಂದ ಮನೆಯಲ್ಲೇ ತಮ್ಮ ಮಗಳು, ಪತಿ ಹಾಗೂ ಮುದ್ದಿನ ನಾಯಿಗಳ ಜೊತೆ ಕಾಲ ಕಳೆಯುತ್ತಿರುವ ಸುಧಾರಾಣೆ.  ಕೆಲವು ದಿನಗಳ ಹಿಂದೆ ಲ್ಯಾಪ್‌ಟಾಪ್‌ ಮುಂದೆ ಕುಳಿತು ಯಾವ ವಿಭಿನ್ನ ರೆಸಿಪಿ ಮಾಡಬೇಕೆಂದು ಹುಡುಕುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು.  ಅಷ್ಟೇ ಅಲ್ಲದೆ ತಮ್ಮ ಆಲೋಚನೆಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

CBSE ಪರೀಕ್ಷೆಯಲ್ಲಿ ಸುಧಾರಾಣಿ ಮಗಳು ಟಾಪರ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದರ್ಶನ್‌ ಡೆವಿಲ್‌ ಸಿನಿಮಾದ ಫಸ್ಟ್ ಡೇ ಫಸ್ಟ್‌ ಶೋ ಹೌಸ್‌ಫುಲ್‌: ಎಷ್ಟು ಕೋಟಿ ಕಲೆಕ್ಷನ್ ಆಗಿದೆ ಗೊತ್ತಾ?
ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!