
U-Turn ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ರದ್ಧಾ ಶ್ರೀನಾಥ್ ಈಗ ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಈ ಕಾರಣಕ್ಕೆ ಹೆಚ್ಚಾಗಿ ಚೆನ್ನೈ, ಹೈದರಾಬಾದ್, ಬೆಂಗಳೂರು ಅಂತ ವಿಮಾನದಲ್ಲಿ ಓಡಾಡುತ್ತಲೇ ಇರುತ್ತಾರೆ.
ಇದನ್ನು ಗಮನಿಸಿದ ನೆಟ್ಟಿಗರು ಶ್ರದ್ಧಾ ಕೊರೋನಾ ಪೀಡಿತರು ಇರುವ ವಿಮಾನ ಬಳಸಿರುವ ಕಾರಣ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದು ಸೋಷಿಯಲ್ ಮಿಡಿಯಾದಲ್ಲಿ ಹರಿ ಬಿಡುತ್ತಿದ್ದಾರೆ. ಇದಕ್ಕೆ ಬ್ರೇಕ್ ಹಾಕಬೇಕೆಂದು ಶ್ರದ್ಧಾ ಟ್ಟಿಟ್ಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ವಿಕ್ರಾಂತ್ ರೋಣನಿಗೆ ಜೋಡಿಯಾದ 'ಅಲಮೇಲಮ್ಮ'?
'ಚಿತ್ರರಂಗದಲ್ಲಿ ಯಾವ ಹೊಸ ವಿಚಾರಗಳು ಇಲ್ಲ ಎಂದು ನನಗೆ ತಿಳಿಯುತ್ತದೆ. ಹಾಗಂತ ಫೇಕ್ ನ್ಯೂಸ್ ಮಾಡಬೇಡಿ. ನಾನು ಸ್ವಯಂ ಪ್ರೇರಿತವಾಗಿ ಹೋಂ ಕ್ವಾರಂಟೈನ್ ಆಗಿದ್ದೆ. ಅದು ನನ್ನ ಪರ್ಸನಲ್ ವೈದ್ಯರ ಸಲಹೆ ಮೇರೆಗೆ. ಮಾರ್ಚ್ 29ಕ್ಕೆ ನನ್ನ ಗೃಹ ಬಂಧನ ಮುಕ್ತಾಯವಾಗಿದೆ. ಈಗ ನಾನು ಅದರಿಂದ ಹೊರ ಬಂದು ತಾಯಿ ಜೊತೆ ಅಡುಗೆ ಮನೆಯಲ್ಲಿ ಸಮಯ ಕಳೆಯುತ್ತಿರುವೆ. ಕೊರೋನಾ ವೈರಸ್ ಬಗ್ಗೆ ಅಥವಾ ಸೋಂಕಿನ ವಿಚಾರದ ಬಗ್ಗೆ ಎಲ್ಲಿಯೋ ಫೇಕ್ ನ್ಯೂಸ್ ಹರಡಬೇಡಿ' ಎಂದು ನೆಟ್ಟಿಗರನ್ನು ಕೈ ಮುಗಿದು ಆಗ್ರಹಿಸಿದ್ದಾರೆ.
ಶ್ರದ್ಧಾಗೆ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡ ಕಾರಣ ಕ್ವಾರಂಟೈನ್ ಆಗಿದ್ದಾರೆ ಎಂದು ವೆಬ್‌ಸೈಟ್‌ವೊಂದು ವರದಿ ಮಾಡಿತ್ತು. ಇದಕ್ಕೆ ಗರಂ ಆದ ಶ್ರದ್ಧಾ 'ನಾನು ಬಳಸಿರುವ ವಿಮಾನದಲ್ಲಿ ಯಾರಿಗೂ ಸೋಂಕು ಕಾಣಿಸಿಕೊಂಡಿಲ್ಲ. ಯಾವ ಕರ್ನಾಟಕ ವೈದ್ಯರೂ ಅಥವಾ ಅಧಿಕಾರಿಗಳು ನನ್ನ ಮನೆಗೆ ಬಂದಿಲ್ಲ. ಇದರ ಬಗ್ಗೆ ನಾನು ಯಾವ ಸೋಷಿಯಲ್ ಮೀಡಿಯಾದಲ್ಲೂ ಮಾತನಾಡಿಲ್ಲ,' ಎಂದು ಗರಂ ಆಗಿ ಪ್ರತ್ರಿಕ್ರಿಯಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.