ಪುಷ್ಪ 2 ವಿಶೇಷ ಸಾಂಗ್‌ನಲ್ಲಿ ಕನ್ನಡದ ನಟಿ; ಈಕೆಯಿಂದ ರಶ್ಮಿಕಾ ಮಂದಣ್ಣನನ್ನು ಹೊರ ಹಾಕಿದ್ರ ಅಲ್ಲು ಅರ್ಜುನ್?

By Vaishnavi Chandrashekar  |  First Published Aug 12, 2024, 11:43 AM IST

ಸ್ಟಾರ್ ನಟಿಯ ಮನೆ ಬಾಗಿಳಿಗೆ ಹುಡುಕಿ ಬಂದು ಬಂಪರ್ ಆಫರ್....ಏನ್ ಅಂತಾರೆ ಅಲ್ಲು ಅರ್ಜುನ್? 


ಭಾರತೀಯ ಸಿನಿಮಾ ವೀಕ್ಷಕರ ಸದ್ಯದ ನಿರೀಕ್ಷೆ ಇರುವುದು ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಪುಷ್ಪ 2 ಚಿತ್ರದ ಮೇಲೆ. ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ 1 ದೊಡ್ಡ ಮಟ್ಟದಲ್ಲಿ ಹೆಸರು ಮತ್ತು ಗಳಿಕೆ ಮಾಡಿಟ್ಟಿದೆ, ಹೀಗಾಗಿ ಪುಷ್ಪ 2 ಮೇಲೆ ಒತ್ತಡ ಹೆಚ್ಚಾಗಿದೆ. ಊ ಅಂಟಾವಾ ಮಾವ ಅಂತ ಸಮಂತಾ ಹೆಜ್ಜೆ ಹಾಕಿಬಿಟ್ಟರು.....ಈಗ ಯಾರು ಹಾಕುತ್ತಾರೆ? ಸಮಂತಾ ಮತ್ತೆ ಮಾಡಿದರೆ ಆ ಹಾಡಿನ ಡಿಮ್ಯಾಂಡ್ ಕಡಿಮೆ ಆಗಿ ಬಿಡುತ್ತದೆ ಅನ್ನೋ ಲೆಕ್ಕಾಚಾರದಲ್ಲಿ ಇರುವ ಚಿತ್ರತಂಡ ಸದ್ಯ ಮತ್ತೊಬ್ಬ ನಾಯಕಿಯನ್ನು ಸಂಪರ್ಕ ಮಾಡಿದ್ದಾರಂತೆ.

ಹೌದು! ಪುಷ್ಪ 2 ಚಿತ್ರದಲ್ಲಿ ಐಟಂ ಅಥವಾ ವಿಶೇಷ ಹಾಡೊಂದನ್ನು ರಚಿಸಲಾಗಿದೆ. ಈ ಹಾಡು ಕೂಡ ದೊಡ್ಡ ದಾಖಲೆ ಮಾಡುವ ಸಾಧ್ಯತೆ ಇರುವ ಕಾರಣ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವ ನಾಯಕಿಯನ್ನು ಅಯ್ಕೆ ಮಾಡಬೇಕು ಅನ್ನೋದು ತಂಡದ ಆಸೆ. ಹೀಗಾಗಿ ಕನ್ನಡದ ಕಿಸ್ ಮತ್ತು ಬೈಟು ಲವ್ ಚಿತ್ರದಲ್ಲಿ ನಟಿಸಿರುವ ಶ್ರೀಲೀಲಾರನ್ನು ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ. ಇದವರೆಗೂ ಬಬ್ಲಿ ಹುಡುಗಿ, ಮನೆ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಶ್ರೀಲೀಲಾ ವಿಶೇಷ ಹಾಡನ್ನು ಒಪ್ಪಿಕೊಂಡಿದ್ದಾರಾ ಅನ್ನೋದು ಎಲ್ಲರ ಪ್ರಶ್ನೆ. ಚಿತ್ರತಂಡ ಇದರ ಬಗ್ಗೆ ಸ್ಪಷ್ಟನೆ ನೀಡಿಲ್ಲ. 

Tap to resize

Latest Videos

ನಾಗ ಚೈತನ್ಯ ನಿಶ್ಚಿತಾರ್ಥ ಬೆನ್ನಲೆ ಸಮಂತಾಗೆ ಪ್ರಪೋಸ್ ಮಾಡಿದ ಯೂಟ್ಯೂಬರ್; ಜಿಮ್‌ ಇದೆ ಎಂದು

ಇನ್ನು ರಶ್ಮಿಕಾ ಮಂದಣ್ಣ ಈ ವಿಶೇಷ ಹಾಡಿನಲ್ಲಿ ಇರಲ್ವಾ ಅಂತ ಕೇಳಿದ್ರೆ ಅದಕ್ಕೂ ಉತ್ತರ ಇಲ್ಲ. ಊ ಅಂಟಾವಾ ಮಾವ ಹಾಡಿನಲ್ಲಿ ಸಮಂತಾ ಮಾತ್ರ ಇದ್ದರು ರಶ್ಮಿ ಇರಲಿಲ್ಲ. ಈ ವಿಶೇಷ ಹಾಡಿನಲ್ಲಿ ರಶ್ಮಿಕಾಳನ್ನು ಹೊರ ಹಾಕಿ ಶ್ರೀಲೀಲಾರನ್ನು ಬರ ಮಾಡಿಕೊಳ್ಳಲಿದ್ದಾರೆ. ವಿದ್ಯಾಭ್ಯಾಸದ ಜೊತೆ ಸಿನಿಮಾ ಮಾಡುತ್ತಿರುವ ಶ್ರೀಲೀಲಾ ಅಪ್ಪಿತ್ತಪ್ಪಿ ಐಟಂ ಡ್ಯಾನ್ಸ್ ಮಾಡಿಬಿಟ್ಟರೆ ಮುಂದಿನ ಭವಿಷ್ಯ ಹೇಗಿರಲಿದೆ? ಅದೇ ರೀತಿ ಆಫರ್‌ ಬಂದುಬಿಟ್ಟರೆ ಏನ್ ಮಾಡುತ್ತಾರೆ ಅನ್ನೋದು ಪ್ರಶ್ನೆಯಾಗಿ  ಉಳಿದುಬಿಟ್ಟಿದೆ. 

ಏನೇ ಆಗಲಿ ಜೊತೆಯಾಗಿರಿ ಸಾಕು; ಗಂಡನಿಲ್ಲದೆ ನಾನಿಲ್ಲ ಎಂದ ಕವಿತಾ ಗೌಡ ಪೋಸ್ಟ್‌ಗೆ ನೆಟ್ಟಿಗರ ಕಾಮೆಂಟ್!

ಪುಷ್ಪ 2 ಸಿನಿಮಾ ಡಿಸೆಂಬರ್ 6ರಂದು ದೇಶಾದ್ಯಂತ ಬಿಡುಗಡೆ ಕಾಣಲಿದೆ. ಅಷ್ಟರಲ್ಲಿ ಚಿತ್ರೀಕರಣ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಶುರು ಮಾಡಬೇಕಿದೆ.

click me!