ನಮ್ಮ ಹಾಗೂ ಸರ್ ಸಂಬಂಧ ನಿನ್ನೆ, ಇವತ್ತಿಂದು ಅಲ್ಲ; ನಟ ದರ್ಶನ್ ಬಗ್ಗೆ ನಂದ ಕಿಶೋರ್ ಇನ್ನೇನಂದ್ರು?

By Shriram Bhat  |  First Published Aug 11, 2024, 8:57 PM IST

'ತುಂಬಾನೇ ಖುಷಿಯಿದೆ. ನಮ್ಮನೆನಲ್ಲಿ ಬಹಳಷ್ಟು ವರ್ಷಗಳಾದ ಮೇಲೆ ನಡಿತಾ ಇರೋ ಒಂದು ಫಂಕ್ಷನ್ ಇದು. ಇಂಥ ವಿಜೃಂಭಣೆ ನಮ್ಮನೆನಲ್ಲಿ ಬಹಳಷ್ಟು ವರ್ಷಗಳಾದ ಮೇಲೆ ನಡಿತಾ ಇದೆ. ಇದಕ್ಕೆ ಪೂರಕವಾಗಿ ಇರೋರು ಅಂದ್ರೆ ನಮ್..


ಕನ್ನಡ ಸಿನಿಮಾ ನಿರ್ದೇಶಕ ನಂದ ಕಿಶೋರ್ (Nanda Kishore) ಅವರ ಬಳಿ ಪ್ರಶ್ನೆ ಕೇಳಲಾಗಿದೆ. 'ನಿಮ್ಮ ಅಮ್ಮ ನನ್ನ ಎರಡನೇ ಮಗನಿಗೆ (ತರುಣ್ ಸುಧೀರ್) ಅವರಿಗೆ ಹೆಣ್ಣು ಸಿಗ್ತಿಲ್ಲ ಮದುವೆ ಆಗೋದಕ್ಕೆ ಅಂತಿದ್ರು. ಆದ್ರೆ ಈಗ ನಿಮ್ಮ ತಮ್ಮನ ಮದುವೆ ರಿಸೆಪ್ಶನ್ ನಡಿತಾ ಇದೆ. ನಿಮಗೆ ಎಷ್ಟು ಸಂತೋಷ ಆಗ್ತಿದೆ?' ಅದಕ್ಕೆ ಸ್ಯಾಂಡಲ್‌ವುಡ್ ನಿರ್ದೇಶಕರು ಹಾಗೂ ಸದ್ಯ ಮದುಮಗ ಆಗಿರುವ ತರುಣ್ ಸುಧೀರ್ ಅಣ್ಣ ನಂದ ಕೀಶೋರ್ ಮಾತನಾಡಿದ್ದಾರೆ. 

'ತುಂಬಾನೇ ಖುಷಿಯಿದೆ. ನಮ್ಮನೆನಲ್ಲಿ ಬಹಳಷ್ಟು ವರ್ಷಗಳಾದ ಮೇಲೆ ನಡಿತಾ ಇರೋ ಒಂದು ಫಂಕ್ಷನ್ ಇದು. ಇಂಥ ವಿಜೃಂಭಣೆ ನಮ್ಮನೆನಲ್ಲಿ ಬಹಳಷ್ಟು ವರ್ಷಗಳಾದ ಮೇಲೆ ನಡಿತಾ ಇದೆ. ಇದಕ್ಕೆ ಪೂರಕವಾಗಿ ಇರೋರು ಅಂದ್ರೆ ನಮ್ ರಾಜಣ್ಣ, ಜಿಮ್ಮಿ, ದಯಾನಂದ್ ಸರ್, ಶರಣ್, ಪ್ರೇಮ್, ಹಾಗೂ ಬಹಳಷ್ಟು ಸ್ನೇಹಿತರು. ಇಂಥ ಒಂದು ಫಂಕ್ಷನ್ ಗ್ರಾಂಡ್ ಆಗಿ ನಡಿಬೇಕು ಅನ್ನೋದು ನಮ್ಮ ರಾಜಣ್ಣ ಅವ್ರ ಕನಸು, ಅದನ್ನು ನನಸು ಮಾಡಿದಾರೆ ಅವ್ರು. 

Tap to resize

Latest Videos

ಸೋನಲ್ ಯಾಕೆ ನಟ ದರ್ಶನ್‌ ನೋಡಲು ಇನ್ನೂ ಜೈಲಿಗೆ ಹೋಗಿಲ್ಲ? ಕಾರಣ ಬಿಚ್ಚಿಟ್ಟ ನಟಿ !

ಪ್ರಶ್ನೆಗೆ ಉತ್ತರಿಸುತ್ತ ನಂದ ಕಿಶೋರ್ ಅವರು 'ಫಸ್ಟ್ ಆಫ್ ಆಲ್, ಅವ್ನು ನನ್ನ ತಮ್ಮ ಅನ್ನೋದೇ ನಂಗೆ ತುಂಬಾ ಇಷ್ಟ. ನಾನು ನನ್ ತಮ್ಮನ ತುಂಬಾ ಪ್ರೀತಿಸ್ತೀನಿ.. ಸೋನಲ್ ಕೂಡ ಅಷ್ಟೇ, ತುಂಬಾ ಸಾಫ್ಟ್, ತುಂಬಾ ಹಂಬಲ್. ಅವರಿಬ್ಬರೂ ಒಳ್ಳೇ ಜೋಡಿ... ಅವರಿಬ್ಬರಲ್ಲಿ ಬಹಳಷ್ಟು ಅನ್ಯೋನ್ಯತೆ ಇದೆ ಅಂತಾನೇ ಹೇಳೋಕ ಇಷ್ಟ ಪಡ್ತೀನಿ.. ಇದಕ್ಕೆಲ್ಲಾ ಸೂತ್ರಧಾರ ಆಗಿರೋ ರಾಜಣ್ಣ ಅವ್ರನ್ನ ಕೇಳಿದ್ರೆ ನಿಮ್ಗೆ ಎಲ್ಲಾನೂ ಕರೆಕ್ಟ್ ಆಗಿ ಹೇಳ್ತಾರೆ. 

ಇನ್ನು ಅಮ್ಮನ ಖುಷಿ ಬಗ್ಗೆ ಪ್ರತ್ಯೇಕವಾಗಿ ಹೇಳ್ಬೇಕಾಗಿಯೇ ಇಲ್ಲ. ಇನ್ನು ದರ್ಶನ್ ಸರ್ ಬಗ್ಗೆ ಹೇಳ್ಭೇಕು ಅಂದ್ರೆ, ನನ್ನ ಹಾಗೂ ದರ್ಶನ್ ಸರ್ ಸಂಬಂಧ ಆಗಿರ್ಬಹುದು, ಅಥವಾ ತಮ್ಮ ತರುಣ್ ಹಾಗೂ ದರ್ಶನ್ ಸರ್ ಸಂಬಂಧ ಆಗಿರ್ಬಹುದು, ಅಥವಾ ನಮ್ಮ ಅಮ್ಮನ ಜೊತೆ ದರ್ಶನ್ ಸಂಬಂಧ ಇರ್ಬಹುದು, ಇವೆಲ್ಲಾ ಇವತ್ತು, ನಿನ್ನೆದು ಅಲ್ಲ.. ದರ್ಶನ್ ಸರ್ ಅವ್ರ 'ಕರಿಯ' ಸಿನಿಮಾಗಿಂತ್ಲೂ ಮೊದಲಿನಿಂದ ಇರೋದು. ಅವ್ರು ನಮ್ಮ ಲೈಫ್‌ನ ಒಂದು ಪಾರ್ಟ್ ಆಗಿದಾರೆ. 

ದರ್ಶನ್ ಸರ್ (Darshan) ನಮ್ಮ ಅಮ್ಮಂಗೆ ಮದರ್ ಇಂಡಿಯಾ ಅಂತನೇ ಹೇಳೋದು. ಇವತ್ತು ಅವ್ರಿಗೆ ಹಾಗೆ ಆಗಿರೋದು ತುಂಬಾನೇ ಹರ್ಟ್ ಆಗುತ್ತೆ.. ಅವ್ರು ಈ ಮದುವೆಗೆ ಇದ್ದಿದ್ದರೆ ಆ ಕಥೆನೇ ಬೇರೆ ಇತ್ತು. ನಾವು ಅವ್ರನ್ನ ತುಂಬಾ ಮಿಸ್ ಮಾಡ್ಕೊತಾ ಇದೀವಿ.. ಆದ್ರೆ, ಅವ್ರು ಆದಷ್ಟು ಬೇಗ ಬರ್ತಾರೆ. ನಾವು ಇನ್ನೊಇನ್ನೊಮ್ಮೆ ಸಮಾರಂಭ ಮಾಡ್ತೀವಿ' ಅಂದಿದ್ದಾರೆ ನಿರ್ದೇಶಕ ನಂದ ಕಿಶೋರ್. 

ಪ್ರಶಾಂತ್‌ ನೀಲ್ ಇಲ್ಲದ ಟಾಕ್ಸಿಕ್, ಯಶ್‌ಗೆ ಅಗ್ನಿ ಪರೀಕ್ಷೆ; ಪ್ರತ್ಯೇಕ ದಾರಿಯಲ್ಲಿ ಹೊರಟ ರಾಕಿಂಗ್ ಸ್ಟಾರ್!

'ನೀವು ತುಂಬಾ ಸಿಂಪಲ್ ಆಗಿ ಕಾಣ್ತೀರಲ್ಲಾ ತಮ್ಮ ಮದುವೆಯಲ್ಲಿ?' ಎಂಬ ಪ್ರಶ್ನೆಗೆ, 'ನಾನು ಇರೋದೇ ಹೀಗೆ, ಆದ್ರೆ ತರುಣ ಬಟ್ಟೆ ಹೊಲಿಸಿದಾನೆ ನಂಗೆ.. ಏನು ಅಂತ ಹೋಗಿ ನೋಡ್ಬೇಕು' ಎಂದು ಹೇಳಿ ಅಕ್ಕರೆಯ ಸಕ್ಕರೆಯ ನಗು ಬೀರಿದ್ದಾರೆ ನಿರ್ದೇಶಕ ನಂದ ಕೀಶೋರ್. ಒಟ್ಟಿನಲ್ಲಿ, ಅವರಿಗೆ ನಟ ದರ್ಶನ್ ಕೊಲೆ ಕೇಸ್ ಆರೋಪಿಯಾಗಿ ಜೈಲಿನ್ಲಿ ಇರುವುದು ತುಂಬಾ ನೋವನ್ನು ಉಂಟುಮಾಡಿದೆ ಎನ್ನಬಹುದು. 

click me!