ನನ್ನ ಮಗನಿಗೆ ಒಂದೇ ಒಂದು ಕೆಟ್ಟ ಚಟವಿಲ್ಲ. ಆದರೂ ಅವನಿಗೇಕೆ ಹೆಣ್ಣು ಸಿಕ್ತಿಲ್ಲವೆಂದು ಕಣ್ಣೀರು ಹಾಕಿದ್ದ ನಿರ್ದೇಶಕ ತರುಣ್ ತಾಯಿ ಮಾಲತಿ ಅವರು, ಮಗನಿಗೆ ಮದುವೆ ಆಗ್ತಿದ್ದಂತೆ ಕುಣಿದು ಕುಪ್ಪಳಿಸಿದ್ದಾರೆ.
ಬೆಂಗಳೂರು (ಆ.11): ನನ್ನ ಮಗನಿಗೆ ಯಾವುದೇ ಕೆಟ್ಟ ಚಟಗಳು ಇರಲಿಲ್ಲ. ಒಂದು ಅಡಿಕೆಯನ್ನು ಕೈಯಿಂದ ಬಾಯಿಗೆ ಹಾಕಿಲ್ಲ, ಕೈಯಿಂದ ಸಿಗರೇಟ್‌ಗಳನ್ನು ಮುಟ್ಟಲ್ಲ. ಆದರೂ ನನ್ನ ಮಗನಿಗೆ ಏಕೆ ಹೆಣ್ಣು ಸಿಕ್ತಿಲ್ಲವೆಂದು ನಟ ಗೋಲ್ಡನ್ ಸ್ಟಾರ್ ಗಣೇಶ್ ಮುಂದೆ ನಿರ್ದೇಶಕ ತರುಣ್ ಸುಧೀರ್ ಅವರ ತಾಯಿ ಕಣ್ಣೀರು ಹಾಕಿದ್ದರು. ಈ ಘಟನೆ ನಡೆದು ಕೆಲವೇ ತಿಂಗಳಲ್ಲಿ ಬೊಂಬೆಯಂಥಾ ಬೆಡಗಿ ಸೋನೆಲ್ ಮೊಂಟೆರೋ ಅವರನ್ನು ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಈ ವೇಳೆ ಮಾಲತಿ ಅವರು ಕುಣಿದು ಕುಪ್ಪಳಿಸಿದ್ದಾರೆ.
ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಡೆಸಿಕೊಡುತ್ತಿದ್ದ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ನಿರ್ದೇಶಕ ತರುಣ್ ಬಗ್ಗೆ ಮಾತನಾಡಿದ್ದ ಅವರ ತಾಯಿ ಮಾಲತಿ ಸುಧೀರ್ ಅವರು, ನನ್ನ ಮಗ ತರುಣ್ ಜೊತೆಗೆ ಈಗ ಯಾರೂ ಇಲ್ಲ. ಅವರ ಅಣ್ಣ ಮತ್ತು ಅತ್ತಿಗೆ ಅವರ ಪಾಡಿಗೆ ಅವರಿದ್ದಾರೆ. ತರುಣ್‌ಗೆ ಊಟ ಮಾಡಿದ್ಯಾ, ಇಲ್ಲವೋ ಎಂದು ಕೇಳಲೂ ಯಾರಿಲ್ಲ. ನೀವೆಲ್ಲಾ ಅವನಿಗೆ ಎಷ್ಟು ಒಳ್ಳೆಯ ಸ್ನೇಹಿತರಿದ್ದೀರಿ, ನೀವೇ ಅವನಿಗೆ ತಂದೆ ತಾಯಿಗಳು ಇವಾಗ. ಅವನಿಗೆ ಒಬ್ಬ ಸಂಗಾತಿ ಅಂದ ಬಂದರೆ ತುಂಬಾ ಒಳ್ಳೆಯದು ಅಲ್ವಾ. ನಂಗೆ ಅವನ ಬಗ್ಗೆ ತುಂಬಾ ಯೋಚನೆ ಆಗುತ್ತಿತ್ತು. ಇವನೇನು ಸುಂದರ ಇಲ್ವಾ..? ಇವನು ರೂಪವಂತ ಇಲ್ವಾ..? ಇವನಿಗೆ ಒಳ್ಳೆಯ ಗುಣ ಇಲ್ವಾ.? ಇವತ್ತಿನವರೆಗೂ ಒಂದು ಅಡಿಕೆ ಹೋಳು ಕೈಯಲ್ಲಿ ಹಾಕುವುದಿಲ್ಲ. ಒಂದು ಸಿಗರೇಟ ಕೂಡ ಕೈಯಲ್ಲಿ ಹಿಡಿದುಕೊಂಡಿಲ್ಲ. ಇಷ್ಟು ಒಳ್ಳೆಯ ಗುಣ ಇರುವ ನನ್ನ ಮಗನಿಗೆ ಒಂದು ಹೆಣ್ಣು ಯಾಕೆ ಸಿಗ್ತಿಲ್ಲ. ಅಥವಾ ಇವನಿಗೆ ಯಾಕೆ ಹೆಣ್ಣು ಸೆಟ್ ಆಗ್ತಿಲ್ಲ..? ಇದೇ ನನಗೆ ದಿನ ಹಗಲು ರಾತ್ರಿ ಯೋಚನೆ ಮಾಡುತ್ತಾ ಕೂರುವಂತಾಗಿತ್ತು. ಈ ಬಗ್ಗೆ ದೇವರಲ್ಲಿ ಪ್ರತಿದಿನ ಬೇಡಿಕೊಳ್ಳುತ್ತೇನೆ. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ನಟ ಗೋಲ್ಡನ್ ಸ್ಟಾರ್ ಗಣೇಶ್ ಈ ಸಾರಿ ಮಾಡಿಬಿಡೋಣ ಅಮ್ಮಾ.. ಎಂದು ಹೇಳಿ ಸಮಾಧಾನ ಮಾಡಿದ್ದರು.
ಸದ್ಯ ಸೋನಲ್ ಎಂಬ ಗೊಂಬೆ ನಮ್ ಕೈಯಲ್ಲಿದ್ದಾಳಷ್ಟೇ... ಸೊಸೆ ಕುರಿತು ತರುಣ್ ಅಮ್ಮ ಹೇಳಿದ್ದೇನು?
ನಟ, ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನೆಮ್ ಮೊಂಥೆರೋ ಅದ್ಧೂರಿ ವಿವಾಹ ಕಾರ್ಯಕ್ರಮಗಳು ಆರಂಭವಾಗುತ್ತಿದ್ದಂತೆಯೇ ತರುಣ್ ಅವರ ತಾಯಿ ಮಾಲತಿ ಸುಧೀರ್ ಕುಣಿದು ಕುಪ್ಪಳಿಸಿದ್ದಾರೆ. ಮಗ ಹಿಂದೂ ಆಗಿದ್ದು, ಸೊಸೆ ಕ್ರಿಶ್ಚಿಯನ್ ಆಗಿದ್ದಾಳೆ. ಆದರೆ, ಹಲವು ವರ್ಷಗಳಿಂದ ಮಗನಿಗೆ ಮದುವೆ ಆದರೆ ಸಾಕು ಎಂದು ದೇವರ ಮುಂದೆ ಹಾಗೂ ತರುಣ್ ಸ್ನೇಹಿತರ ಮುಂದೆ ಕಣ್ಣೀರು ಹಾಕುತ್ತಿದ್ದ ಮಾಲತಿ ಅವರು ಅಂತರ್ಧರ್ಮೀಯ ಮದುವೆ ಆಗುತ್ತಿದ್ದರೂ ಯಾವುದೇ ಕೊಂಕನ್ನಾಡದೇ ಖುಷಿಯಿಂದಲೇ ಒಪ್ಪಿಗೆ ಸೂಚಿಸಿದ್ದಾರೆ. ಇನ್ನು ಹಿಂದೂ ಸಂಪ್ರದಾಯದಂತೆ ಬೆಂಗಳೂರಿನಲ್ಲಿ ತರುಣ್ ಹಾಗೂ ಸೋನಲ್ ಮದುವೆ ಮಾಡಿಕೊಂಡಿದ್ದಾರೆ. ಇನ್ನು ಹರಿಶಿಣ ಶಾಸ್ತ್ರ ನೆರವೇರುತ್ತಿದ್ದಂತೆ ತರುಣ್ ಅವರ ತಾಯಿ ಕುಣಿದು ಕುಪ್ಪಳಿಸಿದ್ದಾರೆ. ತನ್ನ ಮಗ ಮದುವೆ ಆಗುತ್ತಿರುವ ಖುಷಿಯನ್ನು ಸಂಭ್ರಮಿಸಿದ್ದಾರೆ.
ಮಗನ ಮದುವೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ನಿರ್ದೇಶಕ ತರುಣ್ ತಾಯಿ ಮಾಲತಿ ಸುಧೀರ್ ಅವರು, ಚಿತ್ರರಂಗವೇ ನನ್ನ ಉಸಿರು, ಸಿನಿಮಾನೇ ನನ್ನ ಜೀವನ ಅಂತಿದ್ದ ಮಗ ತರುಣ್ ಮದುವೆ ಬಗ್ಗೆ ಮಾತನಾಡುತ್ತಲೇ ಇರಲಿಲ್ಲ. ಅವನು ಮನೆಯಲ್ಲಿಯೂ ಜಾಸ್ತಿ ಮಾತನಾಡುವವನಲ್ಲ. ಊಟ ಆಯ್ತಾ.? ಊಟ ಹಾಕು. ಊಟ ಮುಗೀತು ಇಷ್ಟೇ ಹೇಳುತ್ತಿದ್ದನು. ಇನ್ನು ಹೆಚ್ಚಿನ ಏನಾದರೂ ಮಾತನಾಡಿಸಲು ಹೋದರೆ ಸಿನಿಮಾಗಳಲ್ಲಿ ವಿಲನ್‌ಗಳಿಗೆ ಹೆಚ್ಚು ಡೈಲಾಗ್‌ಗಳು ಇರುವುದಿಲ್ಲ, ಎಸ್ ಬಾಸ್, ನೋ ಬಾಸ್ ಹಾಗೂ ಓಕೆಬಾಸ್ ಈ ಮೂರೇ ಡೈಲಾಗ್‌ಗಳು ಇತ್ತುವೆ ಎಂದು ಹೇಳುತ್ತಿದ್ದನು. ಆಗ ನನಗೆ ಇವನು ಮದುವೆ ಆಗುವುದೇ ಇಲ್ಲವೆಂದು ಭಾರಿ ಬೇಸರವಾಗಿತ್ತು. ಈಗ ಮದುವೆಯಾಗಬೇಕು, ಸಂಸಾರ ಮಾಡಬೇಕು ಎನ್ನುವ ಜವಾಬ್ದಾರಿ ಬಂದಿರುವುದು ನೋಡಿ ತುಂಬಾ ಖುಷಿಯಾಗಿದೆ. ಒಂದೇ ಒಂದು ನೋವೆಂದರೆ ಈ ಎಲ್ಲ ಸಂಭ್ರಮವನ್ನು ನೋಡಲು ನಮ್ಮ ಯಜಮಾನರು ಇಲ್ಲವಲ್ಲಾ ಎಂದು ಹೇಳುತ್ತಾ ಕಣ್ಣೀರೊರೆಸಿಕೊಂಡರು.
ದರ್ಶನ್ ನೆನೆದು ಕಣ್ಣೀರಾದ ತರುಣ್ ಸುಧೀರ್: ಜೈಲಿಗೆ ಹೋಗ್ತೇವೆ ಎಂದ ಸೋನಲ್ ಹೇಳಿದ್ದೇನು?
ಮಂಗಳೂರಿನಲ್ಲಿ ಕ್ರೈಸ್ತ ಸಂಪ್ರದಾಯದಂತೆ ಮದುವೆ:
ಇಂದು ಆ.11ರ ಹಿಂದೂ ಸಂಪ್ರದಾಯದಂತೆ ಬೆಳಗ್ಗೆ 10:30 ರಿಂದ11:00 ಗಂಟೆಗೆ ನಡೆದ ಧಾರೆ ಮುಹೂರ್ತದಲ್ಲಿ ನಿರ್ದೇಶಕ ತರುಣ್ ಅವರು ಸೋನೆಲ್‌ಗೆ ತಾಳಿ ಕಟ್ಟುವ ಮೂಲಕ 4 ವರ್ಷ ಪ್ರೀತಿಸಿದ ಹುಡುಗಿಯನ್ನು ಬಾಳ ಸಂಗಾತಿಯನ್ನು ಸ್ವೀಕರಿಸಿದರು. ಆದರೆ, ಸೋನೆಲ್ ಅವರು ಕ್ರೈಸ್ತ ಸಮುದಾಯದವರು ಆಗಿರುವುದರಿಂದ ಸೋನೆಲ್ ಹುಟ್ಟೂರು ಮಂಗಳೂರಿನಲ್ಲಿ ಕ್ರೈಸ್ತ ಸಂಪ್ರದಾಯದಂತೆ ಮುಂದಿನ ತಿಂಗಳು ಮದುವೆ ನಡೆಯಲಿದೆ.