ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ, ಓಲಗ ಸೌಂಡ್ ಕೇಳಲು ರೆಡಿಯಾಗಿ. ಲಿಸ್ಟ್‌ನಲ್ಲಿ ಶುಭ ಪೂಂಜಾ ಮಾತ್ರವಲ್ಲ ಮಂಜು ಪಾವಗಡ, ವೈಷ್ಣವಿ ಕೂಡ ಸಪ್ತಪದಿ ತುಳಿಯಲು ರೆಡಿಯಾಗಿ ನಿಂತಿದ್ದಾರೆ.
ಕನ್ನಡ ಚಿತ್ರರಂಗದ ಮೊಗ್ಗಿನ ಮನಸ್ಸಿನ ಹುಡುಗಿ ಶುಭಾ ಪೂಂಜಾ ಕಳೆದ ವರ್ಷ ತಮ್ಮ ಭಾವಿ ಪತಿ ಸುಮಂತ್ ಅವರನ್ನು ಅಭಿಮಾನಿಗಳಿಗೆ ಪರಿಚಯಿಸಿಕೊಟ್ಟರು. 2020ರ ಕೊನೆಯಲ್ಲಿ ಮದುವೆ ಆಗುವುದಾಗಿಯೂ ತಿಳಿಸಿದ್ದರು. ಆದರೆ ಕೊರೋನಾ ಲಾಕ್‌ಡೌನ್‌ನಿಂದ ಮದುವೆ ಮುಂದೂಡಿದ್ದರು. ಅಷ್ಟರಲ್ಲಿ ಬಿಗ್ ಬಾಸ್ ಸೀಸನ್ 8ರಲ್ಲಿ ಶುಭಾ ಕಾಣಿಸಿಕೊಂಡರು.
ನನಗೆ ಮದುವೆ ಆಗಿದೆ, ನಾಲ್ಕು ತಿಂಗಳ ಗರ್ಭಿಣಿ: ನಟಿ ಶುಭಾ ಪೂಂಜಾನೀವು ಬಿಗ್ ಬಾಸ್ ಫಾಲೋವರ್ ಆಗಿದ್ದರೆ ಚಿನ್ನಿ ಬಾಂಬ್ ಅಂದ್ರೆ ಯಾರು ಅಂತ ನಿಮಗೆ ಈಗಾಗಲೇ ಗೊತ್ತಿರುತ್ತದೆ. ದಿನವೂ ತಪ್ಪದೇ ಚಿನ್ನಿ ಬಾಂಬ್, ಚಿನ್ನಿ ಬಾಂಬ್ ಅಂತ ಹೇಳಿ ಇಡೀ ಕರ್ನಾಟಕದಲ್ಲಿಯೇ ಅವರ ಬಾಯ್‌ಫ್ರೆಂಡ್ ಸುಮಂತ್ ಅವರನ್ನು ಫೇಮಸ್ ಮಾಡಿದ್ದಾರೆ. ಎಲಿಮಿನೇಟ್ ಆಗಿ ಹೊರ ಬಂದ ತಕ್ಷಣವೇ ಸುಮಂತ್ ಅವರ ಜೊತೆ ಗೋವಾ ಟ್ರಿಪ್ ಹೊರಟು ಅಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
undefined
ಕೆಲವು ಮೂಲಗಳಿಂದ ತಿಳಿದು ಬಂದ ಮಾಹಿತಿ ಪ್ರಕಾರ ಶುಭಾ ಈ ವರ್ಷದೊಳಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗುತ್ತಿದ್ದಾರೆ. ಈ ಹಿಂದೆ ತಮ್ಮ ಭಾವಿ ಪತಿ ಬಗ್ಗೆ ಮಾತನಾಡಿದ ಶುಭಾ ಸುಮಂತ್ ತುಂಬಾ ಕ್ವೈಟ್ ಹಾಗೂ introverted ವ್ಯಕ್ತಿ. ಆದರೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ವಿಚಾರಕ್ಕೆ ಅವರು ನನ್ನ ಜೊತೆ ಕನೆಕ್ಟ್ ಆಗಿದ್ದು. ನನಗೆ ಬೇರೆ ವೃತ್ತಿಯಲ್ಲಿರುವ ವ್ಯಕ್ತಿ ಬೇಕಿತ್ತು. ಸುಮಂತ್ ನನ್ನ ಕೆಲಸ ಅರ್ಥ ಮಾಡಿಕೊಳ್ಳುತ್ತಾರೆ, ನಾನು ಕೆಲಸ ಮುಂದುವರೆಸಲು ಅವರಿಂದ ಯಾವ ಅಬ್ಜೆಕ್ಷನ್ ಇಲ್ಲ. ನಾನು ಜೀವನದ ಬಗ್ಗೆ ನಿರ್ಧಾರ ಮಾಡಿದ ನಂತರ ಪೋಷಕರ ಒಪ್ಪಿಗೆ ಪಡೆದುಕೊಂಡೆವು,' ಎಂದು ಹೇಳಿದ್ದರು.
ಬ್ಯಾಂಕಲ್ಲಿ ಒಂದು ರೂಪಾಯಿ ಇರಲಿಲ್ಲ, ಚೌಡೇಶ್ವರಿ ದೇವಿ ಕಾಪಾಡಿದಳು: ಶುಭಾ ಪೂಂಜಾವೈಷ್ಣವಿ ಹಾಗೂ ಮಂಡು ಪಾವಗಡ ಸಹ ಮದುವೆಯಾಗಲು ಸಿದ್ಧರಿದ್ದಾರೆ ಎಂಬ ಮಾತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಆದರೆ, ಇನ್ನೂ ಹೆಚ್ಚಿನ ಮಾಹಿತಿಯನ್ನು ಅವರಿಬ್ಬರೇ ರಿವೀಲ್ ಮಾಡಬೇಕು ಅಷ್ಟೇ.