
ನಟ ಗಣೇಶ್ ಅವರ ಪುತ್ರ ವಿಹಾನ್ ಮತ್ತೆ ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ನಿಂತಿದ್ದಾರೆ. ಈ ಬಾರಿ ಸಿಂಪಲ್ ಸುನಿ ನಿರ್ದೇಶನದ ‘ಸಖತ್’ ಚಿತ್ರದಲ್ಲಿ ಬಾಲ ನಟನ ಪಾತ್ರ ಮಾಡುತ್ತಿದ್ದಾರೆ. ಚಿತ್ರದ ನಾಯಕ ಗಣೇಶ್ ಅವರ ಬಾಲ್ಯದ ದಿನಗಳ ಪಾತ್ರವನ್ನು ವಿಹಾನ್ ಮಾಡುತ್ತಿದ್ದಾರೆ. ಈಗಾಗಲೇ ವಿಹಾನ್ ಪಾತ್ರದ ಚಿತ್ರೀಕರಣ ಆರಂಭವಾಗಿದೆ.
ಈ ಚಿತ್ರದಲ್ಲಿ ನಟ ಗಣೇಶ್ ಅವರದ್ದು ಕಣ್ಣು ಕಾಣದ ವ್ಯಕ್ತಿ ಪಾತ್ರ. ‘ಕಳೆದ ಎರಡ್ಮೂರು ದಿನಗಳಿಂದ ನನ್ನ ಮಗನ ಸಂಭ್ರಮ ಶೂಟಿಂಗ್ ಸೆಟ್‌ನಲ್ಲಿ ನೋಡುತ್ತಿದ್ದೇನೆ. ಅವನಿಗೆ ನಟನೆ ಮೇಲೆ ತುಂಬಾ ಆಸಕ್ತಿ ಇದೆ. ದೊಡ್ಡ ಪಾತ್ರ ಆಗಿರುವುದರಿಂದ ನಾನೇ ಖುದ್ದಾಗಿ ಸೆಟ್‌ಗೆ ಕರೆದುಕೊಂಡು ಬಂದು ಚಿತ್ರೀಕರಣಕ್ಕೆ ತಯಾರಿ ಮಾಡುತ್ತಿದ್ದೇನೆ. ನಿರ್ದೇಶಕರು ದೃಶ್ಯವನ್ನು ಹೇಳುವಾಗ ಕೇಳಿಸಿಕೊಳ್ಳುವ ಅವನ ತಾಳ್ಮೆ, ಮುಗ್ಧತೆಯನ್ನು ನೋಡಿ ಖುಷಿ ಆಗುತ್ತಿದೆ. ಒಳ್ಳೆಯ ಕತೆ ಹಾಗೂ ಉತ್ತಮ ಪಾತ್ರದ ಮೂಲಕ ನನ್ನ ಮಗ ವಿಹಾನ್ ಪ್ರೇಕ್ಷಕರ ಮುಂದೆ ಬರುತ್ತಿರುವುದಕ್ಕೆ ಹೆಮ್ಮೆ ಇದೆ’ ಎನ್ನುತ್ತಾರೆ ನಟ ಗಣೇಶ್.
ಗಣೇಶ್ ಪುತ್ರಿ ಚಾರಿತ್ರ್ಯ ಈ ಹಿಂದೆ ‘ಚಮಕ್’ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದರು. ‘ಗೀತಾ’ ಚಿತ್ರದಲ್ಲಿ ವಿಹಾನ್ ನಟಿಸಿದ್ದರು. ಅಪ್ಪನ ಚಿತ್ರಗಳ ಮೂಲಕ ಮಕ್ಕಳು ಬಣ್ಣದ ಲೋಕಕ್ಕೆ ಪ್ರವೇಶ ಮಾಡುತ್ತಿರುವುದು ವಿಶೇಷ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.