
ಕಿರಿಕ್ ಪಾರ್ಟಿ (Kirik Party) ಹುಡುಗಿ ಎಂದೇ ಫೇಮಸ್ ಆಗಿರೋ ನಟಿ ಸಂಯುಕ್ತಾ ಹೆಗ್ಡೆ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳಿಂದಲೇ ಹೆಸರಾದವರು. ಇತ್ತೀಚೆಗಂತೂ ಬಿಕಿನಿ ಡ್ರೆಸ್ನಲ್ಲಿ ಸಕತ್ ಹಾಟ್ ಆಗಿ ಕಾಣಿಸಿಕೊಂಡರೂ ಟ್ರೋಲ್ ಆಗಿದ್ದೇ ಹೆಚ್ಚು. ಅಷ್ಟೇ ಅಲ್ಲದೇ ಕಿರಿಕ್ ಬೆಡಗಿ ಎಂದೇ ಫೇಮಸ್ ಆಗಿರೋ ಸಂಯುಕ್ತಾ ಅವರು ಹೋದಲ್ಲೆಲ್ಲಾ ಏನಾದರೊಂದು ಕಿರಿಕ್ ಇದೆ ಅಂತಾನೇ ಅರ್ಥ ಅನ್ನುವಷ್ಟರ ಮಟ್ಟಿಗೆ ಫೇಮಸ್. ಇತ್ತೀಚೆಗೆ ಫಾರಿನ್ ಹುಡುಗನ ಜೊತೆಗಿನ ಡೇಟಿಂಗ್ ಸಕತ್ ಸೌಂಡ್ ಮಾಡಿತ್ತು. ಚೆರಿಸ್ ಎನ್ನುವ ಯುವಕನ ಜೊತೆ ಡೇಟಿಂಗ್ನಲ್ಲಿಯೋ ಸಂಯುಕ್ತಾ ಆಗಾಗ್ಗೆ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದರ ಜೊತೆ ಮೇಲಿಂದ ಮೇಲೆ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಾರೆ. ಸ್ಯಾಂಡಲ್ವುಡ್ನಲ್ಲಿ ಅವಕಾಶಗಳು ಕಡಿಮೆಯಾಗಿರೋ ಕಾರಣ ಸದ್ಯ ತಮಿಳು ಚಿತ್ರರಂಗದಲ್ಲಿ ಬೀಡು ಬಿಟ್ಟಿದ್ದಾರೆ ನಟಿ. ಬೋಲ್ಡ್ ಪಾತ್ರಗಳ ಮೂಲಕ ಅಲ್ಲಿಯೂ ಸದ್ದು ಮಾಡ್ತಿರೋ ನಟಿಯ ಜೀವನದಲ್ಲಿ ಒಂದು ದೊಡ್ಡ ಆಘಾತವಾಗಿದ್ದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಕಳೆದೊಂದು ವರ್ಷದಲ್ಲಿ ತಾವು ಅನುಭವಿಸಿರುವ ಈ ನೋವಿನ ಕುರಿತು ಈಗ ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕಳೆದ ವರ್ಷದಲ್ಲಿ ನಾನು ಜೀವನದ ಅತಿದೊಡ್ಡ ಹೋರಾಟವನ್ನು ಎದುರಿಸಬೇಕಾಗಿತ್ತು ಎಂದು ನಟಿ (Samyuktha Hegde) ಬರೆದುಕೊಂಡಿದ್ದಾರೆ. ಅದು ನನ್ನ ಜೀವನದ ಅತಿದೊಡ್ಡ ಹೋರಾಟ. ಆ ಹೋರಾಟ ನನ್ನನ್ನು ದೈಹಿಕ ಮತ್ತು ಮಾನಸಿಕ ಘಾಸಿಗೊಳಿಸಿದೆ ಎಂದಿದ್ದಾರೆ ನಟಿ ಸಂಯುಕ್ತಾ. ಸಹಿಸಿಕೊಳ್ಳುವ ಮಿತಿಗಳನ್ನೂ ಮೀರಿ ನೋವನ್ನು ಅನುಭವಿಸಿದೆ. ನಾನು ಜೀವನದ ಅತಿದೊಡ್ಡ ಆಘಾತವನ್ನು ಎದುರಿಸಿದ್ದೇನೆ ಎಂದಿದ್ದಾರೆ. ಅವರು ಹೀಗೆ ಹೇಳಿಕೊಳ್ಳಲು ಕಾರಣ, ಶೂಟಿಂಗ್ ನಡುವೆ ಅವರಿಗೆ ಆಗಿದ್ದ ಗಾಯದಿಂದಾಗಿ ಅನುಭವಿಸಿರುವ ನೋವು. ಶೂಟಿಂಗ್ ಸಮಯದಲ್ಲಿ ನನ್ನ ಕಾಲಿಗೆ ಗಾಯವಾಗಿ ಜೀವನದ ಅತಿ ದೊಡ್ಡ ಹಿನ್ನಡೆಯಾಯಿತು ಎಂದಿದ್ದಾರೆ.
ಮತ್ತೆಂಥಾ ಇದು ಕಿರಿಕ್ ಬೆಡಗಿ ಸಂಯುಕ್ತಾ ಹೆಗಡೆಯದ್ದು?
ನನ್ನ ಜೀವನದಲ್ಲಿ ಅನಿಶ್ಚಿತೆ ಮೂಡಿತು. ಅದರಲ್ಲಿಯೂ ನನ್ನ ನೃತ್ಯದ (Dance) ಬಗ್ಗೆ ಹೆಚ್ಚಿನ ಅನಿಶ್ಚಿತತೆ ಉಂಟಾಗಿತ್ತು. ನಾನು ಸುಲಭವಾಗಿ ಚೇತರಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಆದರೂ ಇದ್ದ ಎಲ್ಲಾ ಧೈರ್ಯವನ್ನು ಒಟ್ಟುಗೂಡಿಸಿಕೊಂಡಿದ್ದೆ. ಬೇಗನೇ ಹುಷಾರಾಗಲು ಅಚಲವಾದ ಬದ್ಧತೆ ತೋರಿ ಮುನ್ನುಗ್ಗುವ ಇಚ್ಛೆಯನ್ನು ಹೊಂದಿದ್ದೆ. ಆದರೂ ಹುಷಾರಾಗುತ್ತೇನೋ ಇಲ್ಲವೋ ಎನ್ನುವ ನೋವು ಕಾಡಿತ್ತು. ಆದ್ದರಿಂದ ಈ ಸಮಯದಲ್ಲಿ ಸಾಕಷ್ಟು ರೋಗಿಗಳನ್ನು ಭೇಟಿಯಾದೆ. ಅಲ್ಲಿದ್ದ ರೋಗಿಗಳಲ್ಲಿ ಒಬ್ಬರೂ ಸಂಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ. ಇದನ್ನು ನೋಡಿ ನನಗೆ ತುಂಬಾ ನಿರಾಸೆಯಾಯಿತು. ಆದರೆ ನಿರಾಸೆಗೊಳ್ಳಲು ನನಗೆ ಇಷ್ಟವಿರಲಿಲ್ಲ. ಛಲವನ್ನು ಬಿಡಲಿಲ್ಲ ಎಂದು ನಟಿ ಹೇಳಿದ್ದಾರೆ.
ನೋವನ್ನು ಒಪ್ಪಿಕೊಳ್ಳುವುದರಿಂದ ದುಬರ್ಲತೆ ಆವರಿಸುತ್ತದೆ ಎಂದು ನನಗೆ ಅರಿವಾಯಿತು. ಆದ್ದರಿಂದ ಸವಾಲನ್ನು ಮೆಟ್ಟಿನಿಂತು ಅದರಿಂದ ಹೊರಬರುವ ಆತ್ಮಬಲವನ್ನು ಅಳವಡಿಸಿಕೊಂಡೆ. ನನಗಾಗುತ್ತಿರುವ ಪ್ರತಿ ಹಿನ್ನಡೆಯನ್ನು ಬೆಳವಣಿಗೆಯ ಅವಕಾಶ ಎಂದೇ ಅಂದುಕೊಂಡು ಜೀವನವನ್ನು ಇದ್ದಹಾಗೆ ಸ್ವೀಕರಿಸಿದೆ. ವಿಜಯ ನನ್ನ ಪಾಲಾಗುತ್ತಾ ಬಂತು. ಹಂತ ಹಂತವಾಗಿ ನಾನು ಮತ್ತೆ ಮೇಲೆದ್ದೆ. ದಿನಗಳು ವಾರಗಳಾಗಿ ಮತ್ತು ವಾರಗಳು ತಿಂಗಳುಗಳಾಗಿ ಮಾರ್ಪಟ್ಟಂತೆ, ನನ್ನೊಳಗೆ ನಡೆಯುತ್ತಿರುವ ಬದಲಾವಣೆಯನ್ನು ನಾನು ನೋಡಲಾರಂಭಿಸಿದೆ. ಈಗ ವರ್ಷಗಳೇ ಉರುಳಿವೆ. ಇಷ್ಟೆಲ್ಲ ಪ್ರಯತ್ನದಿಂದಾಗಿ ಹಿಂದೆಂದಿಗಿಂತಲೂ ವಿಜಯಶಾಲಿ ಮತ್ತು ಬಲಶಾಲಿಯಾಗಿ ನಾನಿಂದ ನಿಮ್ಮ ಮುಂದೆ ನಿಂತಿದ್ದೇನೆ ಎಂದಿದ್ದಾರೆ ಸಂಯುಕ್ತಾ. ಆದರೂ ತಮ್ಮ ದೇಹ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದಿದ್ದಾರೆ. ನನ್ನ ಆತ್ಮಬಲದಿಂದ ಮಹತ್ವದ ಬದಲಾವಣೆ ಆಗಿದೆ. ಈಗ ನಾನು ಯಾವುದೇ ಸವಾಲುಗಳನ್ನು ಎದುರಿಸಲು ಸಿದ್ಧಳಾಗಿದ್ದೇನೆ. ಅಂತಹ ನಂಬಿಕೆ ನನ್ನಲ್ಲಿ ಬೆಳೆದಿದೆ. ಇನ್ನು ಕೆಲವೇ ದಿನಗಳಲ್ಲಿ ಸಂಪೂರ್ಣ ಗುಣವಾಗುತ್ತೇನೆ ಎಂಬ ನಂಬಿಕೆ ಇದೆ ಎಂದಿದ್ದಾರೆ.
ಕೊನೆಯಲ್ಲಿ, ನಾನು ನನ್ನ ಈ ಕಥೆಯನ್ನು (Story) ಹಂಚಿಕೊಳ್ಳುವುದು ನನ್ನ ಹೆಗ್ಗಳಿಕೆಗಾಗಿ ಅಲ್ಲ. ಇದರ ಬದಲಾಗಿ ತಮ್ಮದೇ ಆದ ಜೀವನದ ಹೋರಾಟಗಳನ್ನು ಎದುರಿಸುತ್ತಿರುವ ಯಾರನ್ನಾದರೂ ಪ್ರೇರೇಪಿಸಲು ನಾನಿದನ್ನು ಹೇಳುತ್ತಿದ್ದೇನೆ ಎಂದಿದ್ದಾರೆ ನಟಿ ಸಂಯುಕ್ತಾ. ನನ್ನಂತೆ ಜೀವನದಲ್ಲಿ ನಿರಾಸೆ ಹೊಂದಿರುವವರು ಪ್ರತಿಕೂಲತೆಯನ್ನು ವಿಜಯವಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಲಿ ಎನ್ನುವ ಆಶಯದಿಂದ ಇದನ್ನು ಬರೆದುಕೊಂಡಿರುವುದಾಗಿ ಹೇಳೀರುವ ನಟಿ, ಸಂಕಷ್ಟದ ಸಮಯದಲ್ಲಿ ನನಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.