ಲೇಟಾಗಿ ಕಾರಣ ತಿಳಿಸಿ ರಶ್ಮಿಕಾ ಮಂದಣ್ಣ ಪೋಸ್ಟ್; ಪ್ರಾಬ್ಲಂ ಏನಾಗಿತ್ತು ನಟಿಗೆ ಕಳೆದ ತಿಂಗಳು?

By Shriram Bhat  |  First Published Sep 9, 2024, 8:03 PM IST

ರಶ್ಮಿಕಾ ಮಂದಣ್ಣ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಅವರು ಪೋಸ್ಟ್ ಮಾಡುವುದು ಹೊಸ ಸಂಗತಿಯೇನೂ ಅಲ್ಲ, ಆದರೆ ಇದು ವಿಶೇಷ ಪೋಸ್ಟ್. ಕಾರಣ, ಈ ಪೋಸ್ಟ್ ನಲ್ಲಿ ಅವರು ತಾವು ಯಾಕೆ ಕಳೆದ ತಿಂಗಳು ಯಾವುದೇ ಸಾರ್ವಜನಿಕ ಸಭೆ ಅಥವಾ ಸಮಾರಂಭಗಳಲ್ಲಿ..


ನ್ಯಾಷನಲ್ ಕ್ರಷ್ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಅವರು ಪೋಸ್ಟ್ ಮಾಡುವುದು ಹೊಸ ಸಂಗತಿಯೇನೂ ಅಲ್ಲ, ಆದರೆ ಇದು ವಿಶೇಷ ಪೋಸ್ಟ್. ಕಾರಣ, ಈ ಪೋಸ್ಟ್ ನಲ್ಲಿ ಅವರು ತಾವು ಯಾಕೆ ಕಳೆದ ತಿಂಗಳು ಯಾವುದೇ ಸಾರ್ವಜನಿಕ ಸಭೆ ಅಥವಾ ಸಮಾರಂಭಗಳಲ್ಲಿ ಕಾಣಿಸಿಕೊಂಡಿಲ್ಲ ಎಂಬ ಸಂಗತಿಯನ್ನು ಬಹಿರಂಗಗೊಳಿಸಿದ್ದಾರೆ. 

ಹಾಗಿದ್ದರೆ ನಟಿ ರಶ್ಮಿಕಾಗೆ ಏನಾಗಿತ್ತು? ಇಲ್ಲಿದೆ ನೋಡಿ ವಿಷಯ.. 'ಕಳೆದ ತಿಂಗಳು ನಾನು ಯಾವುದೇ ಪಬ್ಲಿಕ್ ಈವೆಂಟ್‌ ಅಥವಾ ಹೊರಗಡೆ ಕಾಣಿಸಿಕೊಳ್ಳದೇ ಇರುವುದಕ್ಕೆ ಕಾರಣ, ನನಗೆ ಚಿಕ್ಕ ಅಪಘಾತ ಆಗಿತ್ತು. ನನಗೆ ನನ್ನ ವೈದ್ಯರು ಸೂಚಿಸಿದ ಪ್ರಕಾರ ರೆಸ್ಟ್ ತೆಗೆದುಕೊಳ್ಳಬೇಕಿತ್ತು. ಆ ಕಾರಣಕ್ಕೆ ನಾನು ಮನೆಯಲ್ಲೇ ಉಳಿಯಬೇಕಾಯ್ತು. ಹೀಗಾಗಿ ನಾನು ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ' ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ. 

Tap to resize

Latest Videos

undefined

ಬ್ಯೂಟಿ ಸೀಕ್ರೆಟ್ ಬಿಚ್ಚಿಟ್ಟ ಕನ್ನಡದ ಸ್ವೀಟಿ, ಅಂತೂ ಇಂತೂ ಬಾಯ್ಬಿಟ್ರು ರಾಧಿಕಾ ಕುಮಾರಸ್ವಾಮಿ!

ಹೌದು, ನಟಿ ರಶ್ಮಿಕಾ ಮಂದಣ್ಣ ಅವರು ಕಳೆದ ಒಂದು ತಿಂಗಳಿನಿಂದ ಎಲ್ಲೂ ಹೊರಗಡೆ ಕಾಣಿಸಿಕೊಂಡಿಲ್ಲ. ಜೊತೆಗೆ, ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿದ್ದು ಕೂಡ ಕಡಿಮೆ. ತಿಂಗಳ ಹಿಂದೆ ನಟಿ ರಶ್ಮಿಕಾ ಅವರು ಒಂದು ಪೋಸ್ಟ್ ಮಾಡಿ ಚಿಕ್ಕ ಅಪಘಾತ ಆಗಿದೆ ಎಂದಿದ್ದರು. ಸ್ವಲ್ಪ ದಿನಗಳ ರೆಸ್ಟ್ ಹೇಳಿದ್ದಾರೆ ಎಂದೂ ಕೂಡ ಪೋಸ್ಟ್ ಮೂಲಕ ತಿಳಿಸಿದ್ದರು. ಆದರೆ, ಒಂದು ತಿಂಗಳು ಹೊರ ಪ್ರಪಂಚದಿಂದ ದೂರವೇ ಉಳಿಯುವಷ್ಟು ರೆಸ್ಟ್ ಅವರಿಗೆ ಅಗತ್ಯವಿತ್ತು ಎಂಬುದು ಈಗಲೇ ಗೊತ್ತಾಗಿದ್ದು!

ಏಕೆಂದರೆ, ನಟಿ ರಶ್ಮಿಕಾ ಅವರು ಬಹುಶಃ ತಮ್ಮ ಅಭಿಮಾನಿಗಳ ಮನಸ್ಸಿಗೆ ಬೇಸರ ಉಂಟಾಗಬಾರದು, ಅವರು ನೊಂದುಕೊಳ್ಳಬಾರದು ಎಂದು ಗಾಯ ದೊಡ್ಡದೇ ಆಗಿದ್ದರೂ ಚಿಕ್ಕದೆಂದು ಹೇಳಿರಬಹುದು. ಈಗ ರೆಸ್ಟ್ ಮುಗಿದು ಮತ್ತೆ ಸಾರ್ವಜನಿಕ ಬದುಕಿಗೆ, ಶೂಟಿಂಗ್ ಹಾಗೂ ತಮ್ಮ ದಿನನಿತ್ಯದ ಲೈಫ್ ಲೀಡ್ ಮಾಡಲು ಮತ್ತೆ ತೊಡಗಿಸಿಕೊಂಡಿದ್ದಾರೆ ಎನ್ನಬಹುದು. ಈ ಹಿನ್ನೆಲೆಯಲ್ಲಿ ರಶ್ಮಿಕಾ ಈಗ ಪೋಸ್ಟ್ ಮಾಡಿ ತಮ್ಮ ಕಳೆದ ತಿಂಗಳ ಪರಿಸ್ಥಿತಿ ಹೇಳಿಕೊಂಡಿದ್ದಾರೆ ಎನ್ನಬಹುದು. 

ರಶ್ಮಿಕಾ-ರಕ್ಷಿತ್ ಮ್ಯಾಟರ್ ಬಗ್ಗೆ ಪ್ರಮೋದ್ ಶೆಟ್ಟಿ ಏನಂದ್ರು? ಅವ್ರು ಯಾರನ್ನ ಫಾಲೋ ಮಾಡ್ತಿದಾರಂತೆ..?

ಒಟ್ಟಿನಲ್ಲಿ, ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಅವರು ಈಗ ಬಾಲಿವುಡ್ ಸೇರಿದಂತೆ ಹಲವು ಸಿನಿಮಾರಂಗಗಳಲ್ಲಿ ತುಂಬಾ ಬ್ಯುಸಿ ಆಗಿದ್ದಾರೆ. 'ಪುಷ್ಪ 2' ಸೇರಿದಂತೆ, ಬಾಲಿವುಡ್ ಎರಡು, ಮರಾಠಿ ಒಂದು, ತೆಲುಗಿನಲ್ಲಿ ಇನ್ನೊಂದು ಹೀಗೆ ರಶ್ಮಿಕಾ ಕೈನಲ್ಲಿ ಬಹಳಷ್ಟು ಸಿನಿಮಾಗಳಿವೆ. ಅಂದಹಾಗೆ, ನಟಿ ರಶ್ಮಿಕಾಈಗ ಹುಶಾರು ಆಗಿದ್ದಾರೆ ಆಯ್ತಾ? ಡೋಂಟ್ ವರೀ ರೀ..!

 

 

click me!