ನಟಿ ರಾಗಿಣಿ ದ್ವಿವೇದಿ ಅವರು ಮೈಸೂರಿಗೆ ಭೇಟಿ ಕೊಟ್ಟಿದ್ದು, ತಮಗೆ ಸ್ಟ್ರೀಟ್ಫುಡ್ ತುಂಬಾ ಇಷ್ಟ ಎಂದು ಅಲ್ಲಿಯ ದೋಸೆಯನ್ನೂ ಹೊಗಳಿದ್ದಾರೆ.
ಸ್ಯಾಂಡಲ್ವುಡ್ ತುಪ್ಪದ ಬೆಡಗಿ ಎಂದೇ ಫೇಮಸ್ ಆಗಿರೋ ನಟಿ ರಾಗಿಣಿ ದ್ವಿವೇದಿ (Ragini Dwivedi). 2009 ರಲ್ಲಿ `ವೀರ ಮದಕರಿ' ಚಿತ್ರದಿಂದ ಸಿನಿಪಯಣ ಆರಂಭಿಸಿದ ರಾಗಿಣಿ ಸುಮಾರು 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಬಹುಭಾಷಾ ನಟಿಯಾಗಿರುವ ಈಕೆ, ಕನ್ನಡ ಮಾತ್ರವಲ್ಲದೇ, ಹಿಂದಿ, ಮಲಯಾಳಂ, ತೆಲಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ರಾಗಿಣಿ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ ಆದರೂ ಅವರದ್ದು ಪಂಜಾಬಿ ಕುಟುಂಬ. ತಂದೆ ಸೈನ್ಯದ ಜನರಲ್ ಆಗಿದ್ದರು. 2008 ರಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಇಳಿದ ರಾಗಿಣಿ ಹೈದಾರಾಬಾದಿನಲ್ಲಿ ಜರುಗಿದ ಫೆಮಿನಾ ಮಿಸ್ ಇಂಡಿಯಾ ಸ್ಫರ್ಧೆಯಲ್ಲಿ ಭಾಗವಹಿಸಿ ರನ್ನರ್-ಅಪ್ ಆದವರು. 2009 ರಲ್ಲಿ ಮುಂಬೈನಲ್ಲಿ ಜರುಗಿದ ಫೆಮಿನಾ ಮಿಸ್ ಬ್ಯೂಟಿಪುಲ್ ಹೇರ್ ಸ್ಪರ್ಧೆ ಗೆದ್ದವರು. ಹಲವಾರು ಚಿತ್ರಗಳಲ್ಲಿ ನಟಿಸಿದರೂ ಕನ್ನಡ ಇವರಿಗೆ ಹೆಸರು ತಂದುಕೊಟ್ಟಿತು. ಶಿವ ರಾಜ್ಕುಮಾರ್ ಜೊತೆ ನಟಿಸಿದ `ಶಿವ' ಚಿತ್ರಕ್ಕೆ ಸೈಮಾ ಪ್ರಶಸ್ತಿ ಕೂಡ ಪಡೆದಿದ್ದಾರೆ. 2011 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ನಂದಿನಿ ಹಾಲು ನಿಯಮಿತದ ರಾಯಭಾರಿಯಾಗಿರುವ ರಾಗಿಣಿ ನೋಂದಾಯಿತ ಅಭಿಮಾನಿಗಳ ಸಂಘವನ್ನು ಹೊಂದಿರುವ ಕನ್ನಡದ ಏಕೈಕ ನಟಿ ಎಂದೂ ಗುರುತಿಸಿಕೊಂಡಿದ್ದಾರೆ. ಹೀಗೆ 15 ವರ್ಷಗಳ ಸಿನಿ ಜರ್ನಿಯಲ್ಲಿ 40 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿಯೂ (Social Media) ಸಕತ್ ಆ್ಯಕ್ಟೀವ್ ಆಗಿರುವ ನಟಿ ಆಗಾಗ್ಗೆ ಫೋಟೊ, ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವುದು ಉಂಟು. ಆರೋಗ್ಯದ ಕುರಿತು ಟಿಪ್ಸ್ ಕೊಡುವುದೂ ಉಂಟು. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಅವರು ಆರೋಗ್ಯಕ್ಕೂ ಸಾಕಷ್ಟು ಸಮಯ ಕೊಡುತ್ತಾರೆ. ರಾಗಿಣಿ ಬ್ಯೂಟಿಗೆ ಮತ್ತು ಫಿಟ್‌ನೆಸ್‌ಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಫಿಟ್ ಆಗಿರಬೇಕು ಎಂದು ಅವರು ಪ್ರತಿದಿನ ವ್ಯಾಯಾಮ ಮಾಡುತ್ತಾರೆ. ಯೋಗದ ಬಗ್ಗೆ ಅಪಾರ ಒಲವು ಬೆಳೆಸಿಕೊಂಡಿರುವ ಅವರು, ಫಿಟ್ ನೆಸ್ ಗೆ ಯೋಗವೂ ಒಂದು ಕಾರಣ ಎನ್ನುತ್ತಾರೆ. ರಾಗಿಣಿ ದ್ವಿವೇದಿ ಈಚೆಗಷ್ಟೆ ಜೀರೋ ಫಿಗರ್ ಮಾಡಿಕೊಂಡು ಅದರ ಫೋಟೋಗಳನ್ನು ಶೇರ್ ಮಾಡಿದ್ದರು. ಇವರು ಆಗಾಗ ಫ್ಯಾಷನ್ ಶೋದಲ್ಲೂ ಭಾಗಿ ಆಗುತ್ತಾರೆ. ಶೋ ಟಾಪರ್ ಆಗಿಯೂ ಹೊಳೆಯುತ್ತಾರೆ.
3 ನಿಮಿಷ ಐಸ್ ನೀರಲ್ಲಿ ಮುಖವಿರಿಸಿ; ನಟಿ ರಾಗಿಣಿ ದ್ವಿವೇದಿ ಕೊಟ್ಟ ಬ್ಯೂಟಿ ಟಿಪ್ಸ್ ಏನು?
ಕೆಲ ದಿನಗಳ ಹಿಂದೆ ಅವರು ಈಚೆಗೆ ತಮ್ಮ ಫಿಟ್‌ನೆಸ್ (Fitness) ಸೀಕ್ರೆಟ್ ಬಿಚ್ಚಿಟ್ಟಿದ್ದರು. ಯೋಗ ಮಾಡ್ತಿರುವ ವೀಡಿಯೋ ಶೇರ್ ಮಾಡುವ ಮೂಲಕ ತಾವೆಷ್ಟು ಫಿಟ್ ಎಂಬುದನ್ನ ನಟಿ ತಿಳಿಸಿದ್ದರು. ಜೊತೆಗೆ ಇತರರು ಯೋಗ ಮಾಡಲು ಅವರು ಪ್ರೇರೇಪಿಸುತ್ತಿದ್ದಾರೆ. ಇದಾದ ಬಳಿಕ ನಟಿ ಐಸ್ ನೀರಿನಲ್ಲಿ ಪ್ರತಿದಿನ ಮೂರು ನಿಮಿಷ ಮುಖವನ್ನಿಟ್ಟುಕೊಳ್ಳಿ ಎಂದು ಹೇಳಿದ್ದರು. ಹೀಗೆ ಮಾಡುವುದು ಸ್ವಲ್ಪ ಕಷ್ಟವೇ. ಆದರೆ ಪ್ರತಿದಿನವೂ ಹೀಗೆ ಮಾಡಿದರೆ ಆಗುವ ಅಭೂತಪೂರ್ವ ಬದಲಾವಣೆಯನ್ನು ನೀವು ನೋಡಬಹುದು ಎಂದಿದ್ದರು.
ಇದೀಗ ನಟಿ ಇಡ್ಲಿ ತಿನ್ನುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಮೈಸೂರಿಗೆ (Mysore) ಭೇಟಿ ನೀಡಿರುವ ತಮಗೆ ಸ್ಟ್ರೀಟ್ಫುಡ್ ಎಂದರೆ ಸಕತ್ ಇಷ್ಟ ಎಂದಿರುವ ರಾಗಿಣಿ, ಮೈಸೂರಿನ ಸುತ್ತಲೂ ಚೆನ್ನಾಗಿರುವ ಆಹಾರ ಸಿಗುತ್ತದೆ ಎಂದಿದ್ದಾರೆ. ಇಲ್ಲಿಯ ದೋಸೆ ಸಕತ್ ಇಷ್ಟ ಎಂದಿರುವ ನಟಿ, ಉಪ್ಪಿಟ್ಟು ಮತ್ತು ಇಡ್ಲಿ ಅಷ್ಟು ಇಷ್ಟ ಆಗಲ್ಲ ಎಂದಿದ್ದಾರೆ. ಇಡ್ಲಿ, ದೋಸೆ, ಉಪ್ಪಿಟ್ಟು ಎಲ್ಲವನ್ನೂ ತಿನ್ನುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇವೆಲ್ಲಾ ತಿಂದಾದ ಮೇಲೆ ನನಗೆ ದೋಸೆ ಸೂಪರ್ ಎನ್ನಿಸಿತು, ಇಡ್ಲಿ, ಉಪ್ಪಿಟ್ಟು ಅಷ್ಟಾಗಿ ಸೇರಲಿಲ್ಲ ಎಂದಿದ್ದಾರೆ. ದಕ್ಷಿಣ ಭಾರತದ ಅಡುಗೆಗಳೆಂದರೆ ಸೂಪರ್ ಎಂದಿರುವ ನಟಿ, ತಮಗೆ ಸ್ಟ್ರೀಟ್ ಫುಡ್ ಇಷ್ಟವಾಗುತ್ತದೆ ಎಂದಿದ್ದಾರೆ. ಇವರ ವಿಡಿಯೋಗೆ ಥಹರೇವಾರಿ ಕಮೆಂಟ್ಸ್ಗಳು ಬರುತ್ತಿವೆ. ಮೈಸೂರು ರಿಫ್ರೆಷ್ಮೆಂಟ್ ಸೆಂಟರ್ನಲ್ಲಿ ಭೋಜನ ಸವಿದು 10ಕ್ಕೆ ಏಳು ಅಂಕ ಕೊಟ್ಟಿದ್ದಾರೆ.
90 ದಿನ ಪೊಲೀಸರ ಕಸ್ಟಡಿಯಲ್ಲಿ ಏನಾಯ್ತು ಎಂದು ಬರೆದಿಟ್ಟ ನಟಿ ರಾಗಿಣಿ ದ್ವಿವೇದಿ; ಪುಸ್ತಕ ಬರೋದು ನಿಜವೇ?