ಮೈಸೂರು ಲೋಕೇಶ್‌ ನಿಗೂಢ ಸಾವು; ತಂದೆಯ 'ಆ' ಸಂಬಂಧ ಬಿಚ್ಚಿಟ್ಟ ಪುತ್ರ ಆದಿ ಲೋಕೇಶ್

Published : Aug 21, 2023, 02:47 PM ISTUpdated : Aug 21, 2023, 04:01 PM IST
ಮೈಸೂರು ಲೋಕೇಶ್‌ ನಿಗೂಢ ಸಾವು; ತಂದೆಯ 'ಆ' ಸಂಬಂಧ ಬಿಚ್ಚಿಟ್ಟ ಪುತ್ರ ಆದಿ ಲೋಕೇಶ್

ಸಾರಾಂಶ

ತಂದೆ ಪ್ರೀತಿ ತಿಳಿದುಕೊಳ್ಳುವ ಸಮಯದಲ್ಲಿ ತಂದೆಯನ್ನು ಕಳೆದುಕೊಂಡು ಆದಿ ಲೋಕೇಶ್ ಮತ್ತು ಪವಿತ್ರಾ ಲೋಕೇಶ್. ನಿಜಕ್ಕೂ ಆಗಿದ್ದೇನು?  

ಜನರ ಮನಸ್ಸಿನಲ್ಲಿ ಉಳಿಯುವಂತ ಪಾತ್ರಗಳಲ್ಲಿ ಮಿಂಚಿ ಹೆಸರು ಮಾಡಿರುವ ನಟ ಮೈಸೂರು ಲೋಕೇಶ್‌ ಸಾವು ನಿಜಕ್ಕೂ ನಿಗೂಢ. ಎಲ್ಲೋ ಹೋಗಿದ್ದರು ವಿಷ ಕುಡಿದಿದ್ದರೂ ಕೊಲೆ ಮಾಡಲಾಗಿದೆ ಹೀಗೇ ಸಾವಿನ ಸುತ್ತ ಪ್ರಶ್ನೆಗಳಲ್ಲಿತ್ತು. ಆದರೆ ನಿಜಕ್ಕೂ ಆಗಿದ್ದೇನು ಎಂದು ಪುತ್ರ ಆದಿ ಲೋಕೇಶ್ ಬಿಚ್ಚಿಟ್ಟಿದ್ದಾರೆ.

' ನನ್ನ ತಂದೆ ಅಗಲಿಕೆ ದುರಂತ ಅಂತ್ಯಗಿಂತ ಒಂದು ಜೀವ ತೆಗೆದ ವಿಚಾರ ಅದು. ತಮ್ಮ ಸಹೋದ್ಯೋಗಿ ಜೊತೆ ನನ್ನ ತಂದೆ ಮೈಸೂರು ಲೋಕೇಶ್ ಸಂಬಂಧ ಬೆಳೆಸಿಕೊಳ್ಳುತ್ತಾರೆ. ಈ ಕ್ಷಣಕ್ಕೆ ಕಳೆದು ಹೋಗಿರುವ ಹೆಸರುಗಳನ್ನು ಬಳಸಿಕೊಳ್ಳುವ ಅಗತ್ಯವಿಲ್ಲ ಗೊತ್ತಿರುವವರಿಗೆ ಗೊತ್ತಾಗುತ್ತದೆ ಗೊತ್ತಿಲ್ಲದವರಿಗೆ ಹಾಗೆ ಉಳಿದು ಬಿಡಲಿ. ತಂದೆ ಹೊಸ ಸಂಬಂಧ ತುಂಬಾ ದೊಡ್ಡದಾಗುತ್ತದೆ ಎಲ್ಲರಿಗೂ ಗೊತ್ತಾಗುತ್ತದೆ ಮುಖ್ಯವಾಗಿ ನನ್ನ ತಾಯಿಗೆ ಈ ವಿಚಾರ ಗೊತ್ತಾಗುತ್ತದೆ. ತಕ್ಷಣವೇ ಈ ಸಂಬಂಧವನ್ನು ಹಿಡಿತಕ್ಕೆ ತೆಗೆದುಕೊಂಡು ಬರುತ್ತಾರೆ, ಹೇಗೆ ತರುತ್ತಾರೆ ಅಂದ್ರೆ ತನ್ನ ಗಂಡ ದಾರಿ ತಪ್ಪಿದಾಗ ಹೇಗಿರಬೇಕು ಹಾಗೆ ಇರಲು ಶುರು ಮಾಡುತ್ತಾರೆ ಹಿಡಿತಕ್ಕೆ ತರುತ್ತಾರೆ ಆದರೆ ಆ ಹಿಡಿತ ನನ್ನ ತಂದೆಗೆ ಆಗಿ ಬರೋಲ್ಲ ಇದರಿಂದ ಹಿಂದೆ ಪಡುತ್ತಾರೆ ಇದರಿಂದ ಹೊರ ಬರಲು ಸಾಕಷ್ಟು ಪ್ರಯತ್ನ ಪಡುತ್ತಾರೆ. ಆ ಸಂಬಂಧದಲ್ಲಿದ್ದ ವ್ಯಕ್ತಿ ಒಟ್ಟಿಗೆ ಸಾಯೋಣ ಎಂದು ಹೇಳಿ ಇಬ್ಬರು ಒಟ್ಟಿಗೆ ಸಾಯಲು ಮುಂದಾಗುತ್ತಾರೆ ಆದರೆ ಆ ವ್ಯಕ್ತಿ ನನ್ನ ತಂದೆಗೆ ಮಾತ್ರ ವಿಷ ಕುಡಿದು ತಾನು ಕುಡಿಯದೆ ನನ್ನ ತಂದೆ ಪ್ರಾಣ ತೆಗೆಯುತ್ತಾರೆ. ಇದು ನಮ್ಮ ತಂದೆ ಅವರ ಜೀವನದ ದುರಂತ' ಎಂದು ಆದಿ ಲೋಕೇಶ್ ಕನ್ನಡ ಖಾಸಗಿ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. 

ಪವಿತ್ರಾ ಲೋಕೇಶ್‌ 'ಮತ್ತೆ ಮದುವೆ' ನೋಡಿಲ್ಲ: ಸಹೋದರ ಆದಿ ಲೋಕೇಶ್ ಮನದಾಳ

'ಈ ಘಟನೆ ಬಳ್ಳಾರಿ ಹೊಸಪೇಟೆಯಲ್ಲಿ ನಡೆಯುತ್ತದೆ. ಬೇರೆ ಬೇರೆ ರೀತಿಯಲ್ಲಿ ಸಂಬಂಧವಿದೆ ಎಂದು ಸುದ್ದಿ ಆಗಿದ್ದು ಸುಳ್ಳು ಏಕೆಂದರೆ ಈ ವಿಚಾರದಲ್ಲಿ  ಸಿಬಿಐ ಇತ್ತು. ಆ ಸಮಯದಲ್ಲಿ ಬಂಗಾರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದರು ಅವರೇ ವೈಯಕ್ತಿಕವಾಗಿ ಈ ಕೇಸ್‌ನ ಸಿಬಿಐಗೆ  ಕೊಡುತ್ತಾರೆ ರೇವಣ್ ಸಿದ್ಧಯ್ಯ ನವರು ಕಮೀಷನರ್ ಆಗಿರುತ್ತಾರೆ ತನಿಖೆ ಮಾಡಿ ಎಲ್ಲಾ ಮಾಹಿತಿ ಕಲೆ ಹಾಕಿ ಕೊನೆಗೆ ಶಿಕ್ಷೆನೂ ಆಗುತ್ತೆ. ಸಂಬಂಧದಲ್ಲಿದ್ದ ಮತ್ತೊಬ್ಬ ವ್ಯಕ್ತಿಗೆ ಶಿಕ್ಷೆನೂ ಆಗುತ್ತೆ ಜೈಲಿನಲ್ಲಿರುತ್ತಾರೆ ಮತ್ತೊಂದು ದೊಡ್ಡ ಶಿಕ್ಷೆ ಆಗುವ ಸಮಯ ಬರುವಷ್ಟರಲ್ಲಿ ಜಾಂಡೀಸ್‌ ಇತ್ತು ಜೈಲಿನಲ್ಲಿ ಮಧ್ಯಪಾನ ಮಾಡಿ ಪ್ರಾಣ ಬಿಡುತ್ತಾರೆ' ಎಂದು ಆದಿ ಲೋಕೇಶ್ ಹೇಳಿದ್ದಾರೆ. 

Phd ಪ್ರವೇಶ ಪರೀಕ್ಷೆಯಲ್ಲಿ ನಟಿ ಪವಿತ್ರಾ ಲೋಕೇಶ್ ಪಾಸ್‌!

'ಈ ಘಟನೆ ಮತ್ತು ಸಾವು ಪ್ರತಿಯೊಬ್ಬರಿಗೂ ಅನಿರೀಕ್ಷಿತ. ತಂದೆ ತಾಯಿ ಅವರ ಪ್ರೀತಿ ಅವರಿಬ್ಬರ ಸಂಬಂಧ ಅರ್ಥ ಮಾಡಿಕೊಳ್ಳುವ ಸಮಯದಲ್ಲಿ ಅವರನ್ನು ಕಳೆದುಕೊಳ್ಳುತ್ತೀನಿ. ತಂದೆ ಅನ್ನೋ ವ್ಯಕ್ತಿ ಮಕ್ಕಳ ಜೀವನದಲ್ಲಿ ಎಷ್ಟು ಪ್ರಭಾವ ಬೀರುತ್ತಾರೆ ಎಂದು ತಿಳಿದುಕೊಳ್ಳುವ ಸಮಯದಲ್ಲಿ ಅವರಿರಲಿಲ್ಲ. ಅವರನ್ನು ಕಳೆದುಕೊಂಡಿದ್ದು ನಮಗೆ ತುಂಬಾ ದೊಡ್ಡ ಲಾಸ್ ಆಗಿತ್ತು ಅದನ್ನು ಬ್ಯಾಲೆನ್ಸ್ ಮಾಡಿ ಕೊರತೆ ಇಲ್ಲದಂತೆ ನೋಡಿಕೊಂಡಿತ್ತು ನಮ್ಮ ತಾಯಿ' ಎಂದಿದ್ದಾರೆ ಆದಿ ಲೋಕೇಶ್. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ