33 ವರ್ಷ ಆಯ್ತು ಶಂಕರ್ ನೆನಪಾಗಲ್ಲ, ಅವನು ನಾನ್‌ವೆಜ್‌ ನಾನು ಫುಲ್ ವೆಜ್: ನಟ ಅನಂತ್ ನಾಗ್

By Vaishnavi ChandrashekarFirst Published Aug 21, 2023, 12:26 PM IST
Highlights

ಎಷ್ಟೋ ಪ್ರಯತ್ನ ಪಟ್ಟರೂ ನನಗೆ ನಾನ್‌ ವೆಜ್‌ ರುಚಿ ಸಿಕ್ಕಿಲ್ಲ ಹೋಗಾಗಿ ಸಸ್ಯಹಾರಿ. ಶಂಕರ್ ನಾಗ ಬಗ್ಗೆ ಅನಂತ್ ಮಾತು.... 

ಕನ್ನಡ ಚಿತ್ರರಂಗದ ವರ್ಸಟೈಲ್‌ ವೆಟರನ್ ಆಕ್ಟರ್ ಅನಂತ್ ನಾಗ್‌ ದೇವರ ಕೊಟ್ಟಿರುವ ಮರೆವು ಜೀವನದಲ್ಲಿ ಎಷ್ಟು ಮುಖ್ಯ ಎಂದು ಹೇಳಿದ್ದಾರೆ. ಅಲ್ಲದೆ ದೇಹದ ಸ್ಥಿತಿ ಆಹಾರ ಎಷ್ಟು ಮುಖ್ಯ ಎಂದು ಹಂಚಿಕೊಂಡಿದ್ದಾರೆ. 

'ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಆಹಾರ ಪದ್ಧತಿ ತುಂಬಾ ಮುಖ್ಯವಾಗುತ್ತದೆ ರುಚಿ ಅವರವರಿಗೆ ಬಿಟ್ಟಿದ್ದು ಅದಿಕ್ಕೆ ಲೋಕೋಭಿನ್ನ ರುಚಿ ಎನ್ನುತ್ತಾರೆ. ಯಾರಿಗೆ ಯಾವುದು ಇಷ್ಟ ಅದನ್ನು ಸೇವಿಸಬಹುದು ಅವರಿಗೆ ಇಷ್ಟವಾದದ್ದು. ನಾನು ನಾನ್‌ ವೆಜ್‌ ತಿನ್ನುವುದಿಲ್ಲ ನನ್ನ ತಮ್ಮ ಶಂಕರ್ ನಾಆಗ್ ನಾನ್‌ವೆಜ್‌ ತಿನ್ನುತ್ತಿದ್ದ...ನನಗೆ ತಿನ್ನಿಸುವ ಪ್ರಯತ್ನ ಮಾಡಿದ ಆದರೆ ಆಗಲಿಲ್ಲ. ಎಲ್ಲಾದರೂ ಹೋದಾಗ ಮತ್ತೊಬ್ಬರು ತಿನ್ನುತ್ತಿದ್ದರೆ ನನಗೂ ಅದೇ ಹಾಕಿ ಎಂದಿರುವ ಆದರೆ ಅಗಲಿಲ್ಲ. ನನ್ನ ತಮ್ಮ ಬಾಲ್ಯದಿಂದಲೇ ತಿನ್ನುವುದು ಕಲಿತ. ನಾನು ಕೂಡ ರುಚಿ ನೋಡಿರುವೆ ಪ್ರಯತ್ನ ಮಾಡಿರುವೆ ರುಚಿ ಸಿಗುವುದಿಲ್ಲ ಹೀಗಾಗಿ ನಮ್ಮ ದೇಸಿ ಶೈಲಿಯಲ್ಲಿ ಊಟ ಸೇವಿಸುತ್ತೀನಿ' ಎಂದು ಕನ್ನಡ ಖಾಸಗಿ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. 

ಅನಂತ್ ನಾಗ್‌ ಏರು ಪೇರು ತೇರು; ಚಿತ್ರರಂಗಕ್ಕೆ ಬರಲು ಕಾರಣ ಏನು, ಇಂಟ್ರೆಸ್ಟಿಗ್ ಸ್ಟೋರಿ!

'ದಿನ ಜೊತೆಗಿದ್ದಾಗ ಜೀವನ ಒಂದು ರೀತಿ ಇರುತ್ತಿತ್ತು ಈಗ ಅವನಿಲ್ಲ 33 ವರ್ಷ ಆಗಿದೆ ಮಿಸ್ ಮಾಡಿಕೊಳ್ಳುವುದಿಲ್ಲ ಪ್ರಾರಂಭದಲ್ಲಿ ಶಂಕರ್ ಇದ್ರೆ ಚೆನ್ನಾಗಿರುತ್ತಿತ್ತು...ಈಗ ಮಾನಸಿನಲ್ಲಿ ಅವನಿಲ್ಲ ಎಂದು ಒಪ್ಪಿಕೊಳ್ಳಬೇಕು. ರಮೇಶ್ ಅರವಿಂದ್ ಹೇಳಿದರು ದೇವರು ಮರವು ಕೊಟ್ಟು ಒಳ್ಳೆಯದು ಮಾಡಿ ಇಲ್ಲದಿದ್ದರೆ ಕಷ್ಟ ನೋವು ಮರೆಯುವುದಕ್ಕೆ ಕಷ್ಟ ಆಗುತ್ತಿತ್ತು. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ರೀತಿಯಲ್ಲಿರುವ ಮರವು ಕೆಟ್ಟದು' ಎಂದು ಅನಂತ್ ಹೇಳಿದ್ದಾರೆ. 

'ಸಣ್ಣ ವಯಸ್ಸಿನಲ್ಲಿ ಹೃದಯಾಘಾತ ಆಗುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಎಲ್ಲಾ ಕಡೆ ಆಗುತ್ತಿದೆ ಎಲ್ಲಾ ಕ್ಷೇತ್ರಲ್ಲೂ ಈ ರೀತಿ ಇದೆ ನಾವು ಸಿನಿಮಾದವರು ಆಗಿರುವ ಕಾರಣ ದೊಡ್ಡ ಸುದ್ದಿಯಾಗುತ್ತಿದೆ. ಅದನ್ನೇ ಯೋಚನೆ ಮಾಡಿಕೊಂಡು ಕುಳಿತರ ಜೀವನ ನಡೆಯುವುದಿಲ್ಲ'ಎಂದಿದ್ದಾರೆ ಅನಂತ್.  

90ರ ಇಳಿವಯಸ್ಸಲ್ಲೂ ವೇಗವಾಗಿ ಕಾರು ಓಡಿಸುತ್ತಿದ್ದ ಭಗವಾನ್ ಪಾಸಿಟಿವ್‌ ಮನುಷ್ಯ: ಅನಂತ್ ನಾಗ್

ಅನಂತ್‌ನಾಗ್ ಚಿತ್ರರಂಗಕ್ಕೆ ಕಾಲಿಟ್ಟು ಐವತ್ತು ವರ್ಷ. ಅವರಿಗೆ ಸೆಪ್ಟೆಂಬರ್ ತಿಂಗಳಿಗೆ ಎಪ್ಪತ್ತೈದು ತುಂಬುತ್ತದೆ. ಈ ಐವತ್ತು ವರ್ಷಗಳಲ್ಲಿ ಅನಂತ್ ಕನ್ನಡದ ಪ್ರಜ್ಞೆ ಮತ್ತು ಪರಿಸರವನ್ನು ಅನೇಕ ಆಯಾಮಗಳಿಂದ ಶ್ರೀಮಂತಗೊಳಿಸಿದ್ದಾರೆ. ತಮ್ಮ ಶಂಕರನ ಜತೆ ಸೇರಿ ಕಟ್ಟಿದ ಸಂಕೇತ್, ನಿರ್ಮಿಸಿದ ಸಿನಿಮಾಗಳು, ರಂಗಕ್ಕೆ ತಂದ ನಾಟಕಗಳು, ರಾಜಕಾರಣದಲ್ಲಿ ಮಾಡಿದ ಸಾಧನೆ, ಸಾಂಸ್ಕೃತಿಕ ಕೊಡುಗೆ, ಕನ್ನಡ ಚಲನಚಿತ್ರಕ್ಕೆ ಅವರ ಕಾಣಿಕೆ, ಕಿರುತರೆಯ ಪಾತ್ರಗಳು- ಎಲ್ಲವೂ ಅವಿಸ್ಮರಣೀಯ.ಮಧ್ಯಮ ವರ್ಗದ ಡಾರ್ಲಿಂಗ್ ಅಂತಲೇ ಕರೆಸಿಕೊಂಡ ಅನಂತನಾಗ್, ಬುದ್ಧಿವಂತ ನಟ ಎಂದೂ ಹೆಸರು ಮಾಡಿದವರು. ಅವರ ಜತೆ ಮಾತಾಡುವುದು ಅಪೂರ್ವ ಅನುಭೂತಿ ಅನ್ನುವುದನ್ನು ಅವರ ಸಂಸರ್ಗಕ್ಕೆ ಬಂದವರೆಲ್ಲವೂ ಒಪ್ಪುತ್ತಾರೆ. ಸರಳ, ಸಜ್ಜನ, ನಿಗರ್ವಿ ಹೇಗೋ ಸಿಟ್ಟು ಬಂದರೆ ರುದ್ರಭಯಂಕರ ಕೂಡ. ಅವರ ನೆನಪಿನ ಶಕ್ತಿಯೂ ಅಗಾಧ. ಬಾಲ್ಯದಲ್ಲಿ ಕಲಿತ ಶ್ಲೋಕಗಳು ಅವರಿಗೆ ಕರತಲಾಮಲಕ. ಬ್ಯಾರಿಸ್ಟರ್ ನಾಟಕದಲ್ಲಿ ಹತ್ತಾರು ಪುಟಗಳ ಸಂಭಾಷಣೆ ಹೇಳಿದ್ದು ಆ ಕಾಲದ ಸಾಧನೆಯಾದರೆ, ರಿಷಬ್ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದಲ್ಲಿ 17 ನಿಮಿಷಗಳ ಸುದೀರ್ಘ ದೃಶ್ಯವನ್ನು ''ಸಿಂಗಲ್ ಶಾಟ್''''ನಲ್ಲಿ ನಿರ್ವಹಿಸಿದ್ದು ಅವರ ನೆನಪು ಇನ್ನೂ ಹಸಿರು ಅನ್ನುವುದಕ್ಕೆ ಸಾಕ್ಷಿ.

ಅನಂತ್ ಹೊಸ ಹುಡುಗರಿಗೆ ಸ್ಫೂರ್ತಿ. ಅದಕ್ಕೆ ಎರಡು ಕಾರಣಗಳು. ಮೊದಲನೆಯದಾಗಿ ಅನಂತ್ ನಾಗ್ ಪಾತ್ರವನ್ನು ಎಂಜಾಯ್ ಮಾಡುತ್ತಾರೆ. ಎರಡನೆಯದಾಗಿ ಅವರು ಚಿತ್ರಕತೆಯನ್ನು ಪೂರ್ತಿ ಓದುತ್ತಾರೆ. ಸಲಹೆ ಕೊಡುತ್ತಾರೆ. ನಿರ್ದೇಶಕರ ತಂಡದ ಜತೆ ಮಾತಿಗೆ ಕುಳಿತುಕೊಳ್ಳುತ್ತಾರೆ. ತನ್ನ ಪಾಲಿನ ಕೆಲಸ ಮುಗಿಸಿ ಎದ್ದು ಹೋಗುವ ಜಾಯಮಾನ ಅವರದ್ದಲ್ಲ. ತನ್ನ ಪಾತ್ರಕ್ಕಿಂತ ಸಿನಿಮಾ ಚೆನ್ನಾಗಿ ಬರಬೇಕು ಅನ್ನುವುದು ಅನಂತ್ ನಿಲುವು.

click me!