ರಂಗಾಯಣ ರಘು ಅವರ ಈ ಗುಣಕ್ಕೆ ಫಿದಾ ಆದ ರಚಿತಾ ರಾಮ್: ‘ಪ್ರೇಮದ ಊರಲಿ’ ಬಗ್ಗೆ ಹೇಳಿದ್ದೇನು?

Published : Oct 08, 2026, 03:43 PM IST
Rachita Ram Premada Oorali

ಸಾರಾಂಶ

ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿರುವ ‘ಪ್ರೇಮದ ಊರಲಿ’ ಸಿನಿಮಾಗೆ ನಟಿ ರಚಿತಾ ರಾಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಕಥೆ, ನಿರೂಪಣೆ ಹಾಗೂ ಕಲಾವಿದರ ಅಭಿನಯವನ್ನು ಶ್ಲಾಘಿಸಿರುವ ಡಿಂಪಲ್ ಕ್ವೀನ್..

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಸಿನಿಮಾಗಳ ಪೈಕಿ ‘ಪ್ರೇಮದ ಊರಲಿ’ ಕೂಡ ಒಂದಾಗಿದೆ. ಹಳ್ಳಿ ಸೊಗಡಿನ ನಡುವೆ ಅರಳುವ ಪ್ರೇಮಕಥೆಯನ್ನು ಹೊತ್ತು ಬಂದಿರುವ ಈ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಇದೀಗ ಚಿತ್ರತಂಡಕ್ಕೆ ಸ್ಯಾಂಡಲ್‌ವುಡ್‌ನ ಮತ್ತೊಬ್ಬ ಸ್ಟಾರ್ ನಟಿಯ ಬೆಂಬಲವೂ ಸಿಕ್ಕಿದೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ‘ಪ್ರೇಮದ ಊರಲಿ’ ಚಿತ್ರವನ್ನು ಮನಸಾರೆ ಮೆಚ್ಚಿಕೊಂಡಿದ್ದು, ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.

ಸಿನಿಮಾದ ಕಥೆ, ನಿರೂಪಣೆ ಹಾಗೂ ಕಲಾವಿದರ ಅಭಿನಯದ ಬಗ್ಗೆ ಮಾತನಾಡಿರುವ ರಚಿತಾ ರಾಮ್, ನಿರ್ದೇಶಕ ಮನೋಜ್ ಕುಮಾರ್ ಅವರ ಪ್ರಯತ್ನವನ್ನು ವಿಶೇಷವಾಗಿ ಶ್ಲಾಘಿಸಿದ್ದಾರೆ. ಕನ್ನಡಿಗರಿಗೆ ಸುಂದರವಾದ ಪ್ರೇಮಕಥೆಯನ್ನು ನೀಡುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಂಗಾಯಣ ರಘು ಬಗ್ಗೆ ರಚಿತಾ ರಾಮ್ ಹೇಳಿದ್ದೇನು?

‘ಪ್ರೇಮದ ಊರಲಿ’ ಚಿತ್ರದಲ್ಲಿ ನಟಿಸಿರುವ ಕಲಾವಿದರ ಬಗ್ಗೆಯೂ ರಚಿತಾ ರಾಮ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ವಿಶೇಷವಾಗಿ ತಮ್ಮ ನೆಚ್ಚಿನ ನಟ ರಂಗಾಯಣ ರಘು ಅವರ ಅಭಿನಯವನ್ನು ಹಾಡಿಹೊಗಳಿದ್ದಾರೆ. ರಂಗಾಯಣ ರಘು ಸರ್, ನಾಯಕ ಶ್ರೀರಾಮ್, ತಪಸ್ವಿನಿ, ರಮಿಕಾ, ಇಳಾ ವಿಟ್ಲ ಸೇರಿದಂತೆ ಚಿತ್ರದ ಪ್ರತಿಯೊಬ್ಬ ಕಲಾವಿದರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ ಎಂದು ರಚಿತಾ ರಾಮ್ ಹೇಳಿದ್ದಾರೆ.

ಕಲಾವಿದರ ಪರಿಶ್ರಮಕ್ಕೆ ಪ್ರೇಕ್ಷಕರಿಂದ ದೊರೆಯುತ್ತಿರುವ ಪ್ರತಿಕ್ರಿಯೆ ನಿಜಕ್ಕೂ ಖುಷಿ ನೀಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಿನಿಮಾವನ್ನು ವೀಕ್ಷಿಸಲು ನಗರ ಮಾತ್ರವಲ್ಲದೆ ಹಳ್ಳಿಗಳಿಂದಲೂ ಜನರು ಬರುತ್ತಿರುವುದು ವಿಶೇಷ ಎಂದು ಹೇಳಿರುವ ರಚಿತಾ ರಾಮ್, ಉತ್ತಮ ಕಂಟೆಂಟ್, ಗಟ್ಟಿಯಾದ ಕಥೆ ಮತ್ತು ಪರಿಣಾಮಕಾರಿ ಸ್ಕ್ರೀನ್‌ಪ್ಲೇ ಇದ್ದರೆ ಯಾವುದೇ ಸಿನಿಮಾ ಪ್ರೇಕ್ಷಕರ ಹೃದಯ ಗೆಲ್ಲಬಹುದು ಎಂಬುದಕ್ಕೆ ‘ಪ್ರೇಮದ ಊರಲಿ’ ಮತ್ತೊಂದು ಉದಾಹರಣೆ ಎಂದು ಹೇಳಿದ್ದಾರೆ.

ಇಡೀ ಚಿತ್ರತಂಡಕ್ಕೆ ರಚಿತಾ ರಾಮ್ ಅಭಿನಂದನೆ

‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿಗೆ ರಚಿತಾ ರಾಮ್ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ನಿರ್ಮಾಪಕರು, ಸಂಗೀತ ನಿರ್ದೇಶಕರು, ಗೀತರಚನೆಕಾರರು ಸೇರಿದಂತೆ ಸಿನಿಮಾದ ಹಿಂದೆ ಕೆಲಸ ಮಾಡಿರುವ ಪ್ರತಿಯೊಬ್ಬ ತಂತ್ರಜ್ಞರನ್ನೂ ಅವರು ಅಭಿನಂದಿಸಿದ್ದಾರೆ. ನಾವೆಲ್ಲರೂ ಒಂದೇ ಚಿತ್ರರಂಗದವರು. ಹೀಗಾಗಿ ಒಂದು ಉತ್ತಮ ಗುಣಮಟ್ಟದ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುತ್ತಿರುವುದು ಇಡೀ ಕನ್ನಡ ಚಿತ್ರರಂಗವೇ ಹೆಮ್ಮೆಪಡುವ ವಿಚಾರ ಎಂದು ರಚಿತಾ ರಾಮ್ ಹೇಳಿದ್ದಾರೆ. ಇದೇ ತಂಡದಿಂದ ಮುಂದಿನ ದಿನಗಳಲ್ಲೂ ಇನ್ನಷ್ಟು ಅರ್ಥಪೂರ್ಣ ಸಿನಿಮಾಗಳು ಬರಲಿ ಎಂದು ಅವರು ಹಾರೈಸಿದ್ದಾರೆ.

ಹಳ್ಳಿ ಸೊಗಡಿನ ಪ್ರೇಮಕಥೆಗೆ ಪ್ರೇಕ್ಷಕರ ಮೆಚ್ಚುಗೆ

ನಿರ್ದೇಶಕ ಮನೋಜ್ ಕುಮಾರ್ ಅವರು ‘ಪ್ರೇಮದ ಊರಲಿ’ ಸಿನಿಮಾವನ್ನು ಗ್ರಾಮೀಣ ಪರಿಸರದ ಹಿನ್ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಹಚ್ಚ ಹಸಿರಿನ ಕೃಷಿ ಭೂಮಿ, ಹಳ್ಳಿಯ ಸಹಜ ಬದುಕು ಹಾಗೂ ಅಲ್ಲಿನ ಮಾನವ ಸಂಬಂಧಗಳನ್ನು ಸಿನಿಮಾದಲ್ಲಿ ನೈಜವಾಗಿ ಕಟ್ಟಿಕೊಡಲಾಗಿದೆ. ರಾಜ್‌ಕಾಂತ್ ಎಸ್‌ಕೆ ಅವರ ಕ್ಯಾಮೆರಾ ಕೆಲಸ ಚಿತ್ರದ ಗ್ರಾಮೀಣ ಸೊಗಡಿಗೆ ಮತ್ತಷ್ಟು ಮೆರುಗು ನೀಡಿದೆ. ಸಹಜ ಅಭಿನಯ ಮತ್ತು ಮನಸ್ಸಿಗೆ ಹತ್ತಿರವಾಗುವ ಪಾತ್ರಗಳು ಸಿನಿಮಾದ ಪ್ರಮುಖ ಆಕರ್ಷಣೆಯಾಗಿವೆ. ಬಿಡುಗಡೆಯಾದ ದಿನದಿಂದಲೂ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ‘ಪ್ರೇಮದ ಊರಲಿ’, ದೊಡ್ಡ ಬಜೆಟ್‌ನ ಸಿನಿಮಾಗಳ ನಡುವೆಯೂ ತನ್ನದೇ ಆದ ಪ್ರೇಕ್ಷಕರನ್ನು ಸೆಳೆಯುತ್ತಿದೆ.

ಇನ್ನು ಇತ್ತೀಚೆಗಷ್ಟೇ ರಚಿತಾ ರಾಮ್ ಅವರು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಸಂಭ್ರಮದಿಂದ ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ನಟಿಗೆ ಶುಭಾಶಯ ಕೋರಿದ್ದರು. ಅಭಿಮಾನಿಗಳೊಂದಿಗೆ ಆತ್ಮೀಯವಾಗಿ ಬೆರೆತಿದ್ದ ರಚಿತಾ ರಾಮ್, ಹಲವರೊಂದಿಗೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮ ಹಂಚಿಕೊಂಡಿದ್ದರು. ಸದ್ಯ ‘ಪ್ರೇಮದ ಊರಲಿ’ ಚಿತ್ರತಂಡಕ್ಕೆ ರಚಿತಾ ರಾಮ್ ನೀಡಿರುವ ಮೆಚ್ಚುಗೆ ಮತ್ತಷ್ಟು ಉತ್ಸಾಹ ನೀಡಿದ್ದು, ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿರುವ ನಿರೀಕ್ಷೆ ಮತ್ತು ಕುತೂಹಲವನ್ನು ಹೆಚ್ಚಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಪ್ರೇಮದ ಊರಲಿ' ನಟಿಯರಿಂದ ನಟ ರಂಗಾಯಣ ರಘು ಮಾಡಿಸಿಕೊಂಡರು ಹೀಗೊಂದು ಪ್ರಾಮಿಸ್​
ನಟ ದರ್ಶನ್ ರಕ್ಷಣೆಗೆ ಹೆಂಡತಿ ವಿಜಯಲಕ್ಷ್ಮಿ ಮಾಡಿದ ಪ್ರಯತ್ನ ವಿಫಲ; ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾ!