ಫೋನ್‌ ಉಳಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದ ನಟಿ ನಮಿತಾ?

Published : Jan 12, 2021, 12:34 PM IST
ಫೋನ್‌ ಉಳಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದ ನಟಿ ನಮಿತಾ?

ಸಾರಾಂಶ

ರಾತ್ರೋರಾತ್ರಿ ಬಾವಿಗೆ ಬಿದ್ದ ನಟಿ ನಮಿತಾ. ಫೋಟೋ ಫುಲ್ ವೈರಲ್ ಆಗುತ್ತಿದೆ. ಅಪರೂಪಕ್ಕೆ ಸಿನಿಮಾ ಒಪ್ಪಿಕೊಂಡ್ರೆ ಹೀಗಾ ಆಗೋದು?..

ಬಹುಭಾಷಾ ನಟಿ, ಹಾಟ್‌ ಲಡ್ಕಿ, ಸದಾ ಸೆನ್ಸೇಷನ್ ಕ್ರಿಯೇಟ್ ಮಾಡುವ ಸುಂದರಿ ನಟಿ  ನಮಿತಾ ಬಾವಿಯಲ್ಲಿ ಬಿದ್ದಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಫೋಟೋ ನೋಡಿ ಶಾಕ್ ಆದ ನೆಟ್ಟಿಗರಿಗೆ ನಿರ್ದೇಶಕರೊಬ್ಬರು ಕ್ಲಾರಿಟಿ ನೀಡಿದ್ದಾರೆ.

ಹಾಟ್ ನಟಿ ನಮಿತಾ ರಾಜಕೀಯಕ್ಕೆ?: ನಂದಮೂರಿ ಬಾಲಕೃಷ್ಣ ಜೋಡಿ!

ಹೌದು, ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ನಮಿತಾ ಫೋನ್‌ ಬಾವಿಯಲ್ಲಿ ಬೀಳುವುದರಲ್ಲಿತ್ತು. ದುಬಾರಿ ಫೋನ್ ಹಾಳಾಗಬಾರದು ಎನ್ನುವ ಕಾರಣಕ್ಕೆ ಪೋನ್ ಹಿಡಿಯಲು ಹೋಗಿ, ನಮಿತಾ ಬಾವಿಗೆ ಜಂಪ್ ಮಾಡುತ್ತಾರೆ. ಬಾವಿಯೊಳಗಿಂದ ಸುತ್ತಮುತ್ತಲಿರುವ ಜನರಿಗೆ ಸಹಾಯ ಬೇಡಿ ಕೂಗಿದ್ದಾರೆ. ಸಹಾಯಕ್ಕೆ ಯಾರು ಬಂದರು, ಆನಂತರ ಏನಾಯ್ತು?

ತೆಳ್ಳಗಾದ್ಲು ತೆಲಗು ನಟಿ, ಅಪ್‌ಸೆಟ್‌ ಆಗೋದ್ರು ಫ್ಯಾನ್ಸ್! ...

ಅಸಲಿ ಕಥೆ:

ಒಂದು ಫೋನ್ ಉಳಿಸಿಕೊಳ್ಳಲು ನಮಿತಾ ನಿಜವಾಗಿಯೂ ಬಾವಿಗೆ ಬಿದ್ದರೇ? ಎಂಬ ಕನ್ಫ್ಯೂಷನ್‌ನಲ್ಲಿದ್ದ ಅಭಿಮಾನಿಗಳಿಗೆ 'ಬೌ ಬೌ' ಚಿತ್ರದ ನಿರ್ದೇಶಕ ಆರ್‌ಎಲ್‌ ರವಿ ಉತ್ತರ ನೀಡಿದ್ದಾರೆ.

ಎಲ್ಲೆಡೆ ಚರ್ಚೆಯಾಗುತ್ತಿರುವ ಈ ದೃಶ್ಯ ನಮಿತಾಳ 'ಬೌ ಬೌ' ಚಿತ್ರದ್ದು ಎನ್ನಲಾಗಿದೆ. ರೀಲ್ ಲೈಫ್ ಕಥೆಯನ್ನು ರಿಯಲ್ ಲೈಫ್ ಘಟನೆ ಎಂದುಕೊಂಡು ಅಭಿಮಾನಿಗಳು ನಮಿತಾಳ ಪರಿಸ್ಥಿತಿ ವಿಚಾರಿಸುತ್ತಿದ್ದಾರೆ.

ನೆಟ್ಟಿಗರು ಮಾತು:
ಇತ್ತೀಚಿನ  ದಿನಗಳಲ್ಲಿ ನಮಿತಾ ಸಿನಿಮಾ ಕಥಗೆಳನ್ನು ಒಪ್ಪಿಕೊಳ್ಳುತ್ತಿರುವುದು ತೀರ ಕಡಿಮೆ. ಅಪರೂಪಕ್ಕೆ ಒಂದು ಸಿನಿಮಾ ಶೂಟಿಂಗ್ ಮಾಡಿದರೆ ಹೀಗೇ ಆಗುವುದು. ನೀವು ಏನೇ ಮಾಡಿದರೂ ಜನರು ತಿಳಿದುಕೊಳ್ಳುವುದೇ ಹೀಗೆ. ಬದಲಿಗೆ ನೀವು ವರ್ಷಕ್ಕೆ 3-4 ಸಿನಿಮಾ ಮಾಡಿ, ಆಮೇಲೆ ಈ ರೀತಿ ಸುದ್ದಿ ಹರಡುವುದಿಲ್ಲ ಎಂದು ನೆಟ್ಟಿಗರ ಪುಕ್ಕಟೆ ಸಲಹೆ ಹರಿದು ಬಂದಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸಂಯುಕ್ತ ಹೊರನಾಡು ನಿರ್ದೇಶನದ ಮಾನವ ಆನೆ ಸಂಘರ್ಷದ ಕ್ರಾಸಿಂಗ್ ಪಾತ್ ಸಾಕ್ಷ್ಯ ಚಿತ್ರ ಇಂದು ರಿಲೀಸ್
ಹೊಸ ಸೀರೆ, ಬಳೆ ತೊಟ್ಟು ಲೈವ್​ನಲ್ಲಿ ವಿಶೇಷ ಸುದ್ದಿ ಕೊಟ್ಟ Karna Serial ನಮ್ರತಾ ಗೌಡ