ಎರಡನೇ ಸಿನಿಮಾ ಒಪ್ಪಿಕೊಂಡರೂ ಧಾರಾವಾಹಿ ಕೈ ಬಿಡುವುದಿಲ್ಲ: ಮೇಘಾ ಶೆಟ್ಟಿ

Suvarna News   | Asianet News
Published : Oct 03, 2021, 01:51 PM ISTUpdated : Oct 03, 2021, 01:57 PM IST
ಎರಡನೇ ಸಿನಿಮಾ ಒಪ್ಪಿಕೊಂಡರೂ ಧಾರಾವಾಹಿ ಕೈ ಬಿಡುವುದಿಲ್ಲ: ಮೇಘಾ ಶೆಟ್ಟಿ

ಸಾರಾಂಶ

ಬೆಳ್ಳಿ ತೆರೆಯಲ್ಲಿ ಬ್ಯುಸಿಯಾದ ನಟಿ ಮೇಘಾ ಶೆಟ್ಟಿ. ಗಣೇಶ್ ಜೋಡಿ ಆಯ್ತು ಈಗ ಕೃಷ್ಣನನ್ನು ಜೋಡಿ...

ಜೀ ಕನ್ನಡ(Zee Kannada) ವಾಹಿನಿಯಲ್ಲಿ ಪ್ರಸಾರವಾಗುವ 'ಜೊತೆ ಜೊತೆಯಲಿ'(Jothe Jotheyali) ಧಾರವಾಹಿ ಮೂಲಕ ಮನೆ ಮಾತಾಗಿರುವ ನಟಿ ಮೇಘಾ ಶೆಟ್ಟಿ 'ತ್ರಿಬಲ್ ರೈಡಿಂಗ್'(Trible Riding) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.  ಮೊದಲನೇ ಸಿನಿಮಾ ರಿಲೀಸ್ ಆಗುವ ಮುನ್ನವೇ ಎರಡನೇ ಚಿತ್ರಕ್ಕೆ ಸಹಿ ಮಾಡಿದ್ದಾರೆ.  ಕಿರುತೆರೆ ಹಾಗೂ ಬೆಳ್ಳಿ ತೆರಯಲ್ಲಿ ಬ್ಯುಸಿಯಾಗಿರುವ ಮೇಘಾ ಶೆಟ್ಟಿಗೆ(Megha Shetty) ಫ್ಯಾನ್ ಫಾಲೋವರ್ಸ್ ಹೆಚ್ಚಾಗಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಮೇಘಾ ಅಭಿಮಾನಿಗಳ ಜೊತೆ ಮಾತನಾಡುತ್ತಾರೆ. 

ಕೆಲವು ದಿನಗಳ ಹಿಂದೆ ನಡೆದ ಪ್ರೆಸ್‌ಮೀಟ್‌ನಲ್ಲಿ ಮೇಘಾ ಎರಡನೇ ಸಿನಿಮಾ ಅನೌನ್ಸ್ ಮಾಡಿದ್ದಾರೆ. 'ದಿಲ್ ಪಸಂದ್'(Dilpasand) ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ ಮೇಘಾ ಶೆಟ್ಟಿ ರೊಮ್ಯಾನ್ಸ್ ಮಾಡಲಿದ್ದಾರೆ.  ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಮೇಘಾ ಶೆಟ್ಟಿ ಜೊತೆ ನಿಶ್ವಿಕಾ ನಾಯ್ಡು(Nishvika Naidu) ಕೂಡ ಕಾಣಿಸಿಕೊಳ್ಳಲಿದ್ದಾರೆ. ಶಿವ ತೇಜಸ್ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಸುಮನ್ ಕ್ರಾಂತಿ ಬಂಡವಾಳ ಹಾಕುತ್ತಿದ್ದಾರೆ.

'ಇದು ಟೈಮಿಂಗ್‌ನಿಂದ ನಗಿಸುವ ಚಿತ್ರ. ಇಂಟರೆಸ್ಟಿಂಗ್ ಕತೆಯನ್ನು ಚಿತ್ರಕ್ಕಿಳಿಸುವುದು ಚಾಲೆಂಜ್. ರವಿ ಚನ್ನಣ್ಣನವರು(Ravi D. Channannavar) ಪೊಲೀಸ್ ವೃತ್ತಿಯಲ್ಲಿಲ್ಲದಿದ್ದರೆ ಕಲಾವಿದರಾಗುತ್ತಿದ್ದರು. ನಾನು ಪೊಲೀಸ್ ಆಗ್ಬೇಕು ಅನ್ನೋದು ಅಪ್ಪನ ಕನಸಾಗಿತ್ತು. ಆದರೆ ನಂಗೆ ಓದುವಾಗ ನಿದ್ದೆ ಬರ್ತಿತ್ತು. ನಟನೆ ಸುಲಭ ಅಂತ ಈ ಫೀಲ್ಡ್ ಆರಿಸಿಕೊಂಡೆ. ಸಿನಿಮಾ, ಲವ್ ಅಂತ ಓಡಾಡ್ಕೊಂಡಿದ್ದೆ. ಮಿಲನಾ ಬಂದ ಬಳಿಕ ಬದುಕು ಬದಲಾಯಿತು. ದಿಲ್ ಪಸಂದ್‌ನಂತೆ ಸಿನಿಮಾ ಸ್ವೀಟ್ ಆಗಿದೆ. ಲಾಕ್‌ಡೌನ್‌ನಲ್ಲಿ ಈ ಕತೆ ತಲೆಗೆ ಬಂದಾಗ ಟೈಟಲ್ಲೂ ಹೊಳೆದಿತ್ತು. ಅದೇ ಈಗ ಫೈನಲ್ ಆಗಿದೆ' ಎಂದು ಪ್ರೆಸ್‌ಮೀಟ್‌ನಲ್ಲಿ ನಟ ಡಾರ್ಲಿಂಗ್ ಕೃಷ್ಣ(Darling Krishna) ಮಾತನಾಡಿದರು.

ಆಟ ಆಡುವಾಗ ರಸ್ತೆ ಮಧ್ಯೆ ತಲೆ ಸುತ್ತಿ ಬಿದ್ದ ಅನು ಸಿರಿಮನೆ!

'ಶಿವ ತೇಜಸ್‌ ಅವರು ಕತೆ ಹೇಳಿದಾಗ ನನಗೆ ನಗು ತಡೆದುಕೊಳ್ಳುವುದಕ್ಕೆ ಆಗಲಿಲ್ಲ. ತುಂಬಾ ನಗಿಸುವ ಎಲಿಮೆಂಟ್ ಇದೆ. ಈ ತಂಡದ ಜೊತೆ ಕೆಲಸ ಮಾಡವುದಕ್ಕೆ ಕಾಯುತ್ತಿರುವೆ.  ರಂಗಾಯಣ ರಘು(Rangayana Raghu) ಸರ್ ಜೊತೆ ಎರಡನೇ ಸಲ ಕೆಲಸ ಮಾಡುತ್ತಿರುವೆ. ನಿಶ್ವಿತಾ ಹಾಗೂ ಕೃಷ್ಣ ಅವರ ಜೊತೆ ಮೊದಲ ಬಾರಿ ನಟಿಸುತ್ತಿರುವೆ. ಕರ್ನಾಟಕದಿಂದ ಹೊರಗೂ ನನಗೆ ಧಾರವಾಹಿ ಒಂದು ಗುರುತು ನೀಡಿದೆ ಅದನ್ನ ನಾನು ಎಂದೂ ಮರೆಯುವುದಕ್ಕೆ ಆಗುವುದಿಲ್ಲ. ನನ್ನ ವೃತ್ತಿ ಆರಂಭಕ್ಕೆ ಒಳ್ಳೆಯ ಪ್ರಾಜೆಕ್ಟ್ ಅದು. ಒಳ್ಳೆಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಕಿರುತೆರೆ ಹಾಗೂ ಬೆಳ್ಳಿ ತೆರೆ ಎರಡನ್ನು ಬ್ಯಾಲೆನ್ಸ್ ಮಾಡುವೆ' ಎಂದು ಮೇಘಾ ಶೆಟ್ಟಿ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಧಾರವಾಹಿಯಲ್ಲಿ ಆರ್ಯ ಸರ್ ಕೈ ಹಿಡಿದ ಮೇಘಾ ಶೆಟ್ಟಿ ಡಿಫರೆಂಟ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ವಾರಗಳ ಕಾಲ ಅದ್ಧೂರಿ ಮದುವೆ ಎಪಿಸೋಡ್ ಪ್ರಸಾರ ಮಾಡಿದ್ದರು. ಜೊತೆ ಜೊತೆಯಲಿ ಧಾರಾವಾಹಿ 500  ಸಂಚಿಕೆ ಪೂರೈಸಿದ ಪ್ರಯುಕ್ತ ಸಣ್ಣ ಆಚರಣೆ ಮಾಡಿದ್ದರು. ಒಟ್ಟಿನಲ್ಲಿ ಅನು ಪಾತ್ರ ಯಾರೂ ಎಂದೂ ಮರೆಯುವುದಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Actress Amulya: ಮುದ್ದು ಮಕ್ಕಳು, ಗಂಡನ ಜೊತೆ ಪೋಸ್ ಕೊಟ್ಟ ಗೋಲ್ಡನ್ ಗರ್ಲ್
Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?