ಸಿನಿಮಾ ಮಾತ್ರವಲ್ಲ, ರಾಜಕೀಯದವರೊಂದಿಗೂ ನಂಟು ಹೊಂದಿದ್ದ ಲೀಲಾವತಿ!

By Sathish Kumar KH  |  First Published Dec 9, 2023, 1:19 PM IST

ಕನ್ನಡದ ಹಿರಿಯ ನಟಿ ಲೀಲಾವತಿ ಅವರು ಸಿನಿಮಾ ಕ್ಷೇತ್ರದವರು ಮಾತ್ರವಲ್ಲದೇ ರಾಜಕೀಯ ನಾಯಕರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು.


ಉಡುಪಿ (ಡಿ.09): 1980ರ ದಶಕದಲ್ಲಿ ಸಿನಿಮಾ ಅಥವಾ ಬಣ್ಣದ ಬದುಕು ಎಂದರೇ ಅವರನ್ನು ನೋಡುವ ದೃಷ್ಟಿಕೋನವೇ ಬೇರೆಯಾಗಿತ್ತು. ಆದರೂ ಕಷ್ಟದ ನಡುವೆಯೇ ಬಣ್ಣದ ಬದುಕಿನಲ್ಲಿ ಗೆದ್ದು ಬಂದ ಹಿರಿಯತ ನಟಿ ಸಿನಿಮಾ ರಂಗದವರು ಮಾತ್ರವಲ್ಲದೇ, ರಾಜಕೀಯ ಕ್ಷೇತ್ರದ ಗಣ್ಯರೊಂದಿಗೂ ಉತ್ತಮ ಒಡನಾಟ ಹೊಂದಿದ್ದರು.

ನಟಿ ಲೀಲಾವತಿ ಅವರ ಆತ್ಮಕ್ಕೆ ಶಾಂತಿ ಕೋರಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೂ ಕೂಡ ಲೀಲಾವತಿ ಅವರೊಂದಿಗೆ ಹೊಂದಿದ್ದ ಉತ್ತಮ ಬಾಂಧವ್ಯದ ಬಗ್ಗೆ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.ಕನ್ನಡ ಚಿತ್ರರಂಗದ ಹಿರಿ ತಲೆ ಶ್ರೇಷ್ಠ ಕಲಾವಿದೆ ಲೀಲಾವತಿ ಅಗಲಿದ್ದಾರೆ. ನಮ್ಮೂರಿನವರು ಸಿಕ್ಕಾಗೆಲ್ಲ ತುಳುವಲ್ಲಿ ಮಾತನಾಡುತ್ತಿದ್ದರು. ಬೆಂಗಳೂರಿನಲ್ಲಿ ಸೆಟಲ್ ಆಗಿ ಚಲನಚಿತ್ರರಂಗಕ್ಕೆ ಅಪಾರ ಸೇವೆ ನೀಡಿದ್ದಾರೆ. ಸಮಾಜ ಸೇವೆ, ಪ್ರಾಣಿಗಳ ಸೇವೆಯ ಮೂಲಕ ತೊಡಗಿಸಿಕೊಂಡಿದ್ದರು ಎಂದು ತಮ್ಮ ಒಡನಾಟದ ಬಗ್ಗೆ ತಿಳಿಸಿದ್ದಾರೆ.

Latest Videos

undefined

ನಟಿ ಲೀಲಾವತಿ ಅಂತಿಮ ದರ್ಶನಕ್ಕೆ ಚೆನ್ನೈನಿಂದ ಆಗಮಿಸಿದ ವಿನೋದ್‌ ರಾಜ್ ಪತ್ನಿ ಮತ್ತು ಮಗ

ವಿನೋದ್ ರಾಜ್, ಕುಟುಂಬದ ಬಂಧು ಬಳಗಕ್ಕೆ ನೋವು ಸಹಿಸುವ ಶಕ್ತಿ ಕೊಡಲಿ. ಬಣ್ಣದ ಲೋಕವೇ ಹಾಗೆ. ನಮ್ಮ ಜೀವನವೇ ಹಾಗೆ. ಲೀಲಾವತಿ ಕೊನೆಯ ದಿನದ ವರೆಗೂ ಕಷ್ಟದ ಜೀವನ ಸಾಗಿಸಿದರು. ಲೀಲಾವತಿ ದುಃಖದಲ್ಲೇ ಜೀವನ ಸಾಗಿಸಿದರು. ಎಲ್ಲಾ ಅಪಮಾನಗಳನ್ನು ಸಹಿಸಿಕೊಂಡು ಜೀವಿಸಿದರು. ಲೀಲಾವತಿ ದುಃಖವನ್ನು ನುಂಗಿ ಬದುಕಿದ ಕಲಾವಿದೆ ಆಗಿದ್ದಾರೆ. ಸಮಾಜಕ್ಕೆ ಏನಾದರೂ ಮಾಡಬೇಕೆಂದು ಬೆಂಗಳೂರಿನಿಂದ ದೂರ ನೆಲೆಸಿದರು. ಸಮಾಜ ಸೇವೆಯ ಮೂಲಕ ಕೊನೆಯ ದಿನಗಳನ್ನು ಖುಷಿಯಾಗಿ ಕಳೆದರು. ಬಣ್ಣದ ಬದುಕು ಕಷ್ಟ ಲೀಲಾವತಿಯವರ ಬದುಕು ಇನ್ನೂ ಕಷ್ಟ ಎಂದು ಹೇಳಿದರು.

ಸರ್ಕಾರ ಲೀಲಾವತಿ ಹೆಸರು ಶಾಶ್ವತವಾಗಿ ಉಳಿಸೋ ಕೆಲಸ ಮಾಡಲಿ: ವಿಧಾನ ಪರಿಷತ್ ಸದಸ್ಯ  ಶಾಸಕ ಕೋಟ ಶ್ರೀನಿವಾಸ ಪೂಜಾರಿ ಸಂತಾಪ ವ್ಯಕ್ತಪಡಿಸಿ ಮಾತನಾಡಿ, ಲೀಲಾವತಿ ಚಿತ್ರರಂಗದಲ್ಲಿ ತನ್ನ ಪ್ರತಿಭೆಯ ಮೂಲಕ ಎತ್ತರಕ್ಕೆ ಎರಿದ ಜನಪ್ರಿಯ ನಟಿಯಾಗಿದ್ದರು. ಡಾ.ರಾಜ್ ಕುಮಾರ್ ಮತ್ತು ಲೀಲಾವತಿ ಜೋಡಿ ದೊಡ್ಡ ಹೆಸರು ಮಾಡಿತ್ತು. ಅವರ ಪಾತ್ರಕ್ಕೆ ತುಂಬುತ್ತಿದ್ದ ಜೀವಂತಿಕೆ ಕಣ್ಣಮುಂದೆ ಇದೆ. ತನ್ನ ಇಳಿ ವಯಸಿನಲ್ಲೂ ಪಾತ್ರ ಘೋಷಣೆ ಮಾಡಿದವರು. ಪುತ್ರ ವಿನೋದ್ ರಾಜ್ ಜೊತೆ ಸಮಾಜಸೇವಾ ಚಟುವಟಿಕೆ ಮಾಡದ್ದಾರೆ. ಚಿತ್ರರಂಗಕ್ಕೆ ಸಮಾಜಕ್ಕೆ ತುಂಬಲಾರದ ನಷ್ಟ. ಸರ್ಕಾರ ಲೀಲಾವತಿ ಹೆಸರಿನಲ್ಲಿ ಶಾಶ್ವತ ನೆನಪಿನಲ್ಲಿ ಉಳಿಯುವ ಕೆಲಸ ಮಾಡಬೇಕಾಗಿದೆ. ವಿಧಾನಸಭೆ ವಿಧಾನಪರಿಷತ್ ನಲ್ಲಿ ಇದನ್ನು ಉಲ್ಲೇಖ ಮಾಡುತ್ತೇವೆ. ಅವರ ಆತ್ಮಕ್ಕೆ ಪರಮಾತ್ಮ ಚಿರಶಾಂತಿ ನೀಡಲಿ ಎಂದು ಹೇಳಿದರು. 

ಲೀಲಾವತಿ-ವಿನೋದ್ ಅಪರೂಪದ ತಾಯಿ-ಮಗ,ಶ್ರೇಷ್ಠ ನಟಿ ನಮ್ಮನ್ನು ಆಗಲಿದ್ದಾರೆ: ಸಿಎಂ

ಸಂಸದೆ ಮಹುವಾ ಮೊಯಿತ್ರಾ ಉಚ್ಛಾಟನೆ ಸರಿಯಾಗಿದೆ: 
ಸಂಸತ್ ಸ್ಥಾನದಲಿಂದ ಮಹುವಾ ಮೊಯಿತ್ರಾ ಅವರನ್ನು ಉಚ್ಛಾಟನೆ ಮಾಡಿದ ವಿಚಾರದ ಬಗ್ಗೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಮಹುವಾ ಸಂಸತ್ ಸ್ಥಾನದಿಂದ ಉಚ್ಚಾಟನೆ ವಿಚಾರ ಆಕೆ ನಮ್ಮ ಜೊತೆಗೆ ಸಂಸದೆಯಾಗಿದ್ದವರು. ಸಂಸದರು ಎನ್ನುವ ಪದಕ್ಕೆ ಕಳಂಕ ತಂದವರು. ಪ್ರಶ್ನೆ ಕೇಳುವುದಕ್ಕೆ, ಸಂಸತ್ತಿನಲ್ಲಿ ಮಾತನಾಡುವುದಕ್ಕೆ ಕೂಡ ಭ್ರಷ್ಟಾಚಾರ ಮಾಡಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗಿದೆ. ನಾವು ಪ್ರಶ್ನೆಗಳನ್ನು ಗುಪ್ತವಾಗಿ ಇಡಬೇಕು. ಪಾರ್ಲಿಮೆಂಟಿನ ಒಳಗೆ ಬರುವ ತನಕ ಉತ್ತರ ಯಾರಿಗೂ ಗೊತ್ತಾಗುವುದಿಲ್ಲ. ಒಂದು ಪ್ರಶ್ನೆಗೆ ಒಬ್ಬ ಅಧಿಕಾರಿ 15- 20 ದಿನ ಶ್ರಮ ಪಡುತ್ತಾರೆ. ಅಧಿಕಾರಿಗಳ ತಂಡ ಇದಕ್ಕೆ ಕೆಲಸ ಮಾಡುತ್ತದೆ. ತಪ್ಪು ಸಂದೇಶ ಹೋಗಬಾರದು ಎಂಬ ಕಾರಣಕ್ಕೆ ಚರ್ಚೆ ಮಾಡುತ್ತಾರೆ. ಪವಿತ್ರವಾದ ಸದನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಸ್ವಂತ ಲಾಭಕ್ಕಾಗಿ ಸಾರ್ಥಕಾಗಿ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕ ಮತ್ತು ಕೆಟ್ಟ ಸಂದೇಶ. ಮುಂದೆ ವಿಧಾನಸಭೆಗಳಲ್ಲೂ ಕೂಡ ಹೀಗೆ ಆಗಬಹುದು. ಲೋಕಸಭೆಯಲ್ಲಿ ವಿಚಾರ ಪ್ರಸ್ತಾಪ ಮಾಡುವ ಬಗ್ಗೆ ಗಂಭೀರತೆ ಬೇಕು. ಪಾವಿತ್ರತೆ ಕಡೆಗಣಿಸಿದ್ದಕ್ಕೆ ಶಿಕ್ಷೆ ಆಗಬೇಕು. ಸಮಿತಿ ನೀಡಿರುವ ವರದಿಗೆ ತಕ್ಕಂತ ಶಿಕ್ಷೆ ಆಗಲೇಬೇಕು ಎಂದು ಹೇಳಿದರು.

click me!