ನಮ್ ಕಾಲದಲ್ಲಿ ರಾಜ್ ಕುಮಾರ್ ಲೀಲಾವತಿ ಜೋಡಿ ಬಹಳ ಜನಪ್ರಿಯ: ಸಿಎಂ ಸಿದ್ದರಾಮಯ್ಯ

By Gowthami K  |  First Published Dec 9, 2023, 12:20 PM IST

ಡಿಸೆಂಬರ್‌ 8ರಂದು ನಿಧನರಾಗಿರುವ ಹಿರಿಯ ಬಹುಭಾಷಾ ನಟಿ ಲೀಲಾವತಿ ಅವರ ಮೃತದೇಹವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಯಡಿಯೂರಪ್ಪ ಸೇರಿ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.


ಡಿಸೆಂಬರ್‌ 8ರಂದು ನಿಧನರಾಗಿರುವ ಹಿರಿಯ ಬಹುಭಾಷಾ ನಟಿ ಲೀಲಾವತಿ ಅವರ ಮೃತದೇಹವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಯಡಿಯೂರಪ್ಪ ಸೇರಿ ಹಲವು ಸಚಿವರು, ಶಾಸಕರು ಮತ್ತು ಕನ್ನಡ ಚಿತ್ರರಂಗದ ಹಲವಾರು ಕಲಾವಿದರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಲೀಲಾವತಿಯವರ ನಿಧನದ ಬಗ್ಗೆ ಈಗಾಗ್ಲೆ ನಾನು ಸಂತಾಪ ಸೂಚಿಸಿದ್ದೇನೆ. ಅವರ ಫಾರ್ಮ್ ಹೌಸ್‌ನಲ್ಲಿ ಭೇಟಿ ಮಾಡಿದ್ದೆ. ವಿನೋದ್ ರಾಜ್‌ಗೆ ತಾಯಿ ಮೇಲೆ ಅತಿಯಾದ ಪ್ರೀತಿ ಇದೆ. ಆದರ್ಶವಾದ ತಾಯಿ ಮಗ. ಚೆನ್ನಾಗಿ ನೋಡ್ಕೋ ಅಂತಾ ವಿನೋದ್ ರಾಜ್‌ಗೆ ಹೇಳಿದ್ದೆ. ಸಹಾಯ ಬೇಕಾದ್ರೆ ಕೇಳು ಅಂತ ಹೇಳಿದ್ದ. ಆದರೆ ಸಹಾಯ ಕೇಳಿಲ್ಲ. ಸರ್ಕಾರದ ವತಿಯಿಂದ ಸರ್ಕಾರಿ ಗೌರವ ದೊಂದಿಗೆ ಅಂತ್ಯಸಂಸ್ಕಾರ ಮಾಡಲು ಸರ್ಕಾರಕ್ಕೆ ಆದೇಶ ನೀಡಿದ್ದೇನೆ.

Tap to resize

Latest Videos

ನಟಿ ಲೀಲಾವತಿ ಅಂತಿಮ ದರ್ಶನಕ್ಕೆ ಚೆನ್ನೈನಿಂದ ಆಗಮಿಸಿದ ವಿನೋದ್‌ ರಾಜ್ ಪತ್ನಿ ಮತ್ತು ಮಗ

ಲೀಲಾವತಿಯವರು ಬಹುದೊಡ್ಡ ನಟಿ. ಅವರು ಕನ್ನಡಕ್ಕೆ ಸಲ್ಲಿಸಿದ ಸೇವೆ ಅಪಾರ. ದಕ್ಷಿಣ ಭಾರತದ ಬಹುಭಾಷಾ ನಟಿ. ನಮ್ ಕಾಲದಲ್ಲಿ ರಾಜ್ ಕುಮಾರ್ ಲೀಲಾವತಿ ಜೋಡಿ ಬಹಳ ಜನಪ್ರಿಯ ಜೋಡಿ. ನಾನು ಬಹುತೇಕ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ. ಹಿಟ್ ಆಗೋದು ಬೇರೆ. ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವತುಂಬುವ ಕಲೆಯನ್ನು ಅವರು ರೂಢಿಸಿಕೊಂಡಿದ್ರು. ಅವರು ಪರಿಪೂರ್ಣ ಕಲಾವಿದೆ. ಐತಿಹಾಸಿಕ, ಸಾಮಾಜಿಕ ಪಾತ್ರ ಅಥವಾ ಯಾವುದೇ ಪಾತ್ರವನ್ನು ಲೀಲಾಜಾಲವಾಗಿ ಮಾಡ್ತಿದ್ರು. ನನಗೆ ಅವರ ಸಾವು ಬಹಳ ಆಘಾತ ನೀಡಿದೆ. ಭಕ್ತ ಕುಂಬಾರದಲ್ಲಿ ಅವರ ಅಭಿನಯ ನಿಜಕ್ಕೂ ಅದ್ಭುತ. ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಅವರು ಗಳಿಸಿದ ಹಣವನ್ನು ಅವರೇ ಬಚ್ಚಿಟ್ಟುಕೊಳ್ಳೋಕೆ ಹೋಗಿಲ್ಲ. ಎಲ್ಲವನ್ನೂ ಸಾರ್ವಜನಿಕರಿಗೆ ಹಂಚಿದ್ರು. ಈ ವಯಸ್ಸಿನಲ್ಲೂ ಎಲ್ಲಾ ಪ್ರಾಣಿಗಳನ್ನು ಪ್ರೀತಿಸುವ ಕೆಲಸ ಮಾಡಿದ್ರು. ಅಂತಹ ನಟಿ ನಮ್ಮನ್ನು ಅಗಲಿದ್ದಾರೆ. ಮೊನ್ನೆ ತಾನೆ ಅವರಿಗೆ ಅವಾರ್ಡ್ ಬಂದಿತ್ತು. ರೈತಾಪಿ ಕೆಲಸ ಕೂಡ ಮಾಡಿದ್ರು. ಹಣ್ಣು ತರಕಾರಿಗಳನ್ನು ಬೆಳೆಯುತ್ತಿದ್ರು. ಅವರ ಅಗಲುವಿಕೆ ನಿಜಕ್ಕೂ ದುರಂತ ಎಂದು ಸಿಎಂ ಸಂತಾಪ ಸೂಚಿಸಿದ್ದಾರೆ.

ಇನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಲೀಲಾವತಿ ಅವರ ಅಂತಿಮ ದರ್ಶನ ಪಡೆದು ಮಾತನಾಡಿ, ಹೆಣ್ಣು ಮಗು ಗ್ರಾಮಿಣ ಪ್ರದೇಶದಲ್ಲಿ ಬೆಳೆದವರು. ಸುಮಾರು 600 ಕ್ಕೂ ಹೆಚ್ಚು ಸಿನಿಮಾ ಅಭಿನಯ ಮಾಡಿದ್ದಾರೆ. 40 ವರ್ಷಗಳಿಂದ ನಾನು ಅವರ ಸಿನ್ಮಾ ನೋಡಿದ್ದೇನೆ. ಕೊನೆಯ ಭೇಟಿ ಅವರು ನಮ್ಮ ಮನೆಗೆ ಬಂದಿದ್ರು. ಎರಡೂ ವಾರದ ಹಿಂದೆ ನಮ್ಮ‌ ಮನೆಗೆ ಬಂದಿದ್ರು. ಪಶುವೈದ್ಯ ಶಾಲೆಯನ್ನು ಕಟ್ಟಿದ್ದೇವೆ, ಉದ್ಘಾಟನೆಗೆ ಬರಬೇಕೆಂದು  ಹೇಳಿದ್ರು. ಎಲೆಕ್ಷನ್ ಒತ್ತಡ ಇತ್ತು, ಆದರೂ ಸೂಕ್ತ ಸಮಯದಲ್ಲಿ ಭಾಗಿಯಾದೆ. ಅದೃಷ್ಟ ಬದಲಾವಣೆ ಆಗಬಹುದು ಆದರೆ ನಿರ್ಧಾರ ಬದಲಾವಣೆ ಆಗಬಾರದು. ಒತ್ತಡದ ನಡುವೆಯೂ ಆ ಕಾರ್ಯಕ್ರಮದಲ್ಲಿ ನಾನು ಭಾಗಿಯಾದ್ದೆ. ಇದು ನನಗೆ ಬಹಳ ಸಂತೋಷ್ ಆಗಿತ್ತು. ಅನೇಕ ಸಾಹುಕಾರನನ್ನು ನಾನು ನೋಡಿದ್ದೆ. ಇವ್ರೇನು ಸಾಹುಕಾರ್ ಆಗಿರಲಿಲ್ಲ. ಇಡೀ ಜೀವನ ತನ್ನ ತಾಯಿ ಸೇವೆಯನ್ನು ವಿನೋದ್ ರಾಜ್ ಮಾಡಿದ್ದಾರೆ. ಅವರನ್ನು ಹಚ್ಚಿಕೊಂಡಿರುವ
ನಾಯಿ ಸಹ ಊಟ ಮಾಡಿರಲಿಲ್ಲ. ಅವರ ಹೆಸರು ಉಳಿಯೋಕೆ ಏನ್ ಮಾಡಬೇಕೋ ಅದನ್ನು ನಮ್ಮ ಸರ್ಕಾರ ಮಾಡುತ್ತೆ. ಈಗ ಹೇಳೋಕೆ ಹೋಗಲ್ಲ,  ನಾವೆಲ್ಲರೂ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ ಎಂದು ಹೇಳಿದ್ದಾರೆ.

ಇನ್ನು ಅಂತಿಮ ದರ್ಶನದ ಬಳಿಕ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ಅವರು, ಮೇರು ನಟಿ ಲೀಲಾವತಿಯವರು ವಿಧಿವಶರಾಗಿದ್ದಾರೆ. ಸುಮಾರು 600ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ. ಬೆಳ್ತಂಗಡಿಯ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಚಿತ್ರರಂಗದಲ್ಲಿ ಮಿಂಚಿದ್ದಾರೆ. ಅವರ ಕೊಡುಗೆ ಅಪಾರ. ಅವರನ್ನು ಕಳೆದುಕೊಂಡು ಕನ್ನಡ ನಾಡು ಬಡವಾಗಿದೆ. ಅವರ ಸಾವಿನ ನೋವು ಭರಿಸುವ ಶಕ್ತಿ ಕುಟುಂಬಕ್ಕೆ ನೀಡಲಿ ಎಂದರು.

click me!