Vinod Raj​ಗೆ ಧೈರ್ಯ ತುಂಬಿದ ಆರ್​.ಅಶೋಕ್: ಲೀಲಾವತಿ ಅಪರೂಪದ ಕಲಾವಿದೆ ಎಂದ ಬಿಜೆಪಿ ವಿಪಕ್ಷ ನಾಯಕ

By Govindaraj S  |  First Published Dec 9, 2023, 4:23 AM IST

ಹಿರಿಯ ನಟಿ ಲೀಲಾವತಿ ಅವರ ನಿಧನ ಸುದ್ದಿ ತಿಳಿದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಸ್ಪತ್ರೆಗೆ ಭೇಟಿ ನೀಡಿ ಅವರ ಅಂತಿಮ ದರ್ಶನ ಪಡೆದರು. 


ದಾಬಸ್‌ಪೇಟೆ (ಡಿ.09): ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೀಲಾವತಿ ಅಮ್ಮನವರು ಸಿನಿಮಾ ಸೇರಿದಂತೆ ಹಲವಾರು ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದರು. ಪ್ರಸಿದ್ಧ ಕಲಾವಿದೆಯಾಗಿದ್ದರು. ಸದಾ ಅವರು ನೆನಪಿನಲ್ಲಿರುತ್ತಾರೆ. ಅವರು ಜನರಿಗೆ ಏನಾದರೂ ಸೇವೆ ಮಾಡಬೇಕು ಎಂಬ ಅಭಿಲಾಷೆಯಿಂದ ನಮ್ಮ ಬಿಜೆಪಿ ಸರ್ಕಾರ ಇದ್ದಾಗ ಸೋಲದೇವನಹಳ್ಳಿಯಲ್ಲಿ ಆಸ್ಪತ್ರೆ ನಿರ್ಮಿಸಬೇಕು ಎಂಬ ಆಸೆಯನ್ನು ವೈಯಕ್ತಿಕವಾಗಿ ನನ್ನ ಬಳಿ ಹೇಳಿದ್ದರು. ಈ ತರ ಕಲಾವಿದರು ಸಿಗುವುದು ಅಪರೂಪ. 

ಅವರ ಆಸೆಯಂತೆ ನಾನು ಹಾಗೂ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಕರೆದುಕೊಂಡು ಹೋಗಿ ಮಾತನಾಡಿದ್ದು ಇನ್ನೂ ನೆನಪಿದೆ. ಬಸವರಾಜ ಬೊಮ್ಮಾಯಿಯವರೇ ಅವರನ್ನು ಕಾರಿನ ಬಳಿ ಬಂದು ಬೀಳ್ಕೊಟ್ಟಿದ್ದರು. ಅವರ ಸಾಮಾಜಿಕ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಅವರಿಗೆ ರಾಷ್ಟ್ರೀಯ ಪ್ರಶಸ್ತಿ, ರಾಜ್ಯಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿ ಪಡೆದಿದ್ದರು. ಅವರ ಸೇವೆ ಸದಾ ಸ್ಮರಣೀಯ, ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕನ್ನಡದಲ್ಲಿಯೇ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಲೀಲಾವತಿ ಅಮ್ಮನವರ ಆಗಲಿಕೆ ಕರುನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.

Tap to resize

Latest Videos

ಲೀಲಾವತಿ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ; ಕಲಾ ಸಾಧನೆ ಅಜರಾಮರ

ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ಸೇರಿದಂತೆ ನೆಲಮಂಗಲ ಕ್ಷೇತ್ರಕ್ಕೆ ಅಪಾರವಾದ ನಷ್ಟವಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಪುತ್ರ ವಿನೋದ್ ರಾಜ್ ಅವರೊಂದಿಗೆ ಮಾತನಾಡಿ ಬಂದಿದ್ದೆವು. ನೆಲಮಂಗಲ ಕ್ಷೇತ್ರದಲ್ಲಿ ಅವರ ಸಮಾಜ ಸೇವೆ ಶ್ಲಾಘನೀಯವಾದುದು. ಅವರ ಅಮ್ಮ-ಮಗನ ಸಂಬಂಧ ಎಲ್ಲರಿಗೂ ಆದರ್ಶವಾಗಿದ್ದು ಅವರ ಕುಟುಂಬದ ಜೊತೆ ಸದಾ ನಿಲ್ಲುತ್ತೇನೆ. ಅವರ ಅಂತಿಮ ಸಂಸ್ಕಾರ ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆಯಲು ಯಾವುದೇ ತೊಂದರೆಯಾಗದಂತೆ ಸಕಲ ಸಿದ್ಧತೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾನು ಕೂಡ ಬೆಳಗಾವಿಯಿಂದ ನೆಲಮಂಗಕ್ಕೆ ಬರುತ್ತಿದ್ದೇನೆ ಎಂದು ಹೇಳಿದ್ದಾರೆ.

ತಾಯಿ ಲೀಲಾವತಿ ಅಗಲಿಕೆ ಆಘಾತದಿಂದ ರಸ್ತೆಯಲ್ಲೇ ಕುಸಿದು ಬಿದ್ದ ಪುತ್ರ ವಿನೋದ್ ರಾಜ್!

ನಟ ಜಗ್ಗೇಶ್‌ ಅಂತಿಮ ದರ್ಶನ: ರಾಜ್ಯಸಭಾ ಸದಸ್ಯ ಜಗ್ಗೇಶ್ ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡದೇ ಭಾವುಕರಾಗಿ ಹೊರಟು ಹೋದರು. ಟ್ವೀಟ್ ಮಾಡಿರುವ ಅವರು, ಅನೇಕರು ಅವರಲ್ಲಿ ತಮ್ಮ ತಾಯಿಯನ್ನು ಕಂಡರು. ಅಂತೆಯೇ ನಾನು ಕೂಡ. ಇವರೊಟ್ಟಿಗೆ ನಟಿಸುವ ಯೋಗ ನನಗೆ ಒದಗಿ ಬರಲಿಲ್ಲ. ಆದರೆ ವೈಯಕ್ತಿಕವಾಗಿ ಅವರೋಂದಿಗೆ ಆತ್ಮೀಯತೆ ನನಗಿತ್ತು. ಅದು 1988 ಇವರ ಮಗನೊಂದಿಗೆ ಕೃಷ್ಣ ನೀ ಕುಣಿದಾಗ ಚಿತ್ರದ ನಟನೆಯ ನಂತರ, ಮಗನನ್ನು ಎಷ್ಟು ಪ್ರೀತಿಸುತ್ತಿದ್ದರು ಎಂದರೆ ಅದು ವರ್ಣನೆಗೆ ನಿಲುಕದ್ದು. ಇಂದು ಕಲಾದೇವಿ ಶಾರದೆಯೊಂದಿಗೆ ಲೀನವಾಗಿದ್ದಾರೆ ಎಂದಿದ್ದಾರೆ. ಇನ್ನೂ ಆಸ್ಪತ್ರೆಗೆ ಜಿಲ್ಲಾಧಿಕಾರಿ ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದಾರೆ.

click me!