ಚಿಕಿತ್ಸೆಗೆ 16 ಕೋಟಿ ರೂ. ಅಂತ ಕೇಳಿ ಶಾಕ್ ಆಯ್ತು, ದಯವಿಟ್ಟು ಸಹಾಯ ಮಾಡಿ; ಪುಟಾಣಿ ಪರ ನಿಂತ ಸುದೀಪ್

ಅಭಿಮಾನಿ ಪುತ್ರಿಯ ಸಹಾಯಕ್ಕೆ ನಿಂತ ಕಿಚ್ಚ ಸುದೀಪ್. ದೊಡ್ಡ ಮೊತ್ತವಾಗಿರುವ ಕಾರಣ ನೀವು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ. 


ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾಗಳಲ್ಲಿ ಮಾತ್ರ ಸೂಪರ್ ಸ್ಟಾರ್ ಅಲ್ಲ ಅವರು ರಿಯಲ್ ಲೈಫ್‌ನಲ್ಲೂ ಸೂಪರ್ ಸ್ಟಾರ್.ಹಲವು ವರ್ಷಗಳಿಂದ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್‌ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರ್ಕಾರಿ ಶಾಲೆ ದತ್ತು ತೆಗೆದುಕೊಳ್ಳುವುದು, ಮಕ್ಕಳ ಆಪರೇಷನ್‌ಗೆ ಸಹಾಯ ಮಾಡುವುದು, ಬಡವರಿಗೆ ಊಟದ ವ್ಯವಸ್ಥೆ ಮಾಡುವುದು ಹೀಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಸುದೀಪ್ ಸಂಸ್ಥೆಯಿಂದ ಸಹಾಯ ಪಡೆದವರ ಲೆಕ್ಕವಿಲ್ಲ. ಈಗ ಸುದೀಪ್ ತಮ್ಮ ಅಭಿಮಾನಿ ಪರ ನಿಂತಿದ್ದಾರೆ.

ಹೌದು! ಸುದೀಪ್ ಅಭಿಮಾನಿಯೊಬ್ಬರ ಪುಟ್ಟ ಮಗಳ ಅಪರೂಪದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.ಈ ಖಾಯಿಲೆ ಗುಣವಾಗುತ್ತದೆ ಎಂದು ವೈದ್ಯರು ಭರವಸೆ ನೀಡಿದ್ದಾರೆ. ಹೀಗಾಗಿ ಸಹಾಯ ಬೇಡಿ. ಸುದೀಪ್ ತಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಿದ್ದಾರೆ ಹಾಗೆ ಎಲ್ಲರೂ ಕೈ ಜೋಡಿಸಿ ಈ ಮಗುವನ್ನು ಉಳಿಸೋಣ ಎಂದು ಮನವಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

Latest Videos

ಬಿಗ್ ಬಾಸ್‌ ನನ್ನ ಯಶಸ್ಸಿಗೆ ಬ್ರೇಕ್ ಹಾಕಿಬಿಟ್ಟರು: ರಂಜಿತ್ ಕುಮಾರ್ ಗರಂ

'ಈ ವಿಡಿಯೋ ನೋಡುತ್ತಿರುವ ಪ್ರತಿಯೊಬ್ಬರಿಗೂ ಕಿಚ್ಚನ ನಮಸ್ತೆ. ವಿಡಿಯೋ ಮಾಡಲು ಬಹಳ ಮುಖ್ಯವಾದ ಕಾರಣ ಇದೆ. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್ ಹಾಗೂ ಅವರ ಪತ್ನಿ ನಾಗಶ್ರೀ ದಂಪತಿಗೆ 1 ವರ್ಷ 10 ತಿಂಗಳ ಪುಟ್ಟ ಮಗಳು ಇದ್ದಾಳೆ. ಆಕೆಯ ಹೆಸರು ಕೀರ್ತನಾ. ಆ ಮುದ್ಧ ಕಂದಮ್ಮನಿಗೆ ಸ್ಪೈನ್ ಮ್ಯಾಸ್ಕ್ಯೂಲಾರ್ ಅಟ್ರೋಫಿ (SMA2) ಎಂಬ ಆರೋಗ್ಯ ಸಮಸ್ಯೆ ಇದೆ. ಇದು ಬಹಳ ಅಪರೂಪದ ಅನುವಂಶಿಕ ಕಾಯಿಲೆ. ಈ ಕಾಯಿಲೆಗೆ ಔಷದೆ ಇದೆ. ಗುಣ ಆಗುವ ಸಾಧ್ಯತೆಯಿದೆ ಆದರೆ ಆ ವೈದ್ಯಕೀಯ ಚಿಕಿತ್ಸೆಗೆ ಬೇಕಾದ ಹಣ ಎಷ್ಟು ಎಂದು ಕೇಳಿದಂತೆ ಮೈ ಜಿಮ್ ಎನಿಸುತ್ತದೆ. ಈ ಚಿಕಿತ್ಸೆ ಬೇಖಾಗಿರುವುದು 16 ಕೋಟಿ ರೂ. ಪೋಷಕರು ಆಸ್ತಿಯನ್ನು ಮಾರಿ ಮಗುವನ್ನು ಉಳಿಸಿಕೊಳ್ಳುವ ಪ್ರುತ್ನದಲ್ಲಿದ್ದಾರೆ. ಸಾಕಷ್ಟು ಜನ ಇದಕ್ಕೆ ಕೈ ಜೋಡಿಸಿದ್ದಾರೆ. ಸಹಾಯ ಮಾಡಲು ಮುಂದೆ ಬಂದಿದ್ದಾರೆ. ನನ್ನ ಕೈಲಾದ ಸಹಾಯ ನಾಣು ಮಾಡಿದ್ದೀನಿ. ನೀವು ನಿಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಿ' ಎಂದು ವಿಡಿಯೋದಲ್ಲಿ ಸುದೀಪ್ ಮಾತನಾಡಿದ್ದಾರೆ. 

ಕೊನೆಗೂ ಅತ್ತೆ ಜೊತೆ ಫೋಟೋ ತೆಗೆಸಿಕೊಂಡ ಮಧು ಗೌಡ; ಮನೆ ಒಡೆದಿಲ್ಲ ಎಂದ ಕಾಮೆಂಟ್ ಮಾಡಿದ ನೆಟ್ಟಿಗರು

click me!