ಉಪೇಂದ್ರ ಅವರ ಸಿನಿಮಾ ಮಾತ್ರವಲ್ಲ, ಊಟ ಮಾಡುವ ಸ್ಟೈಲ್ ಕೂಡ ವಿಚಿತ್ರವೇ. ಈ ಬಗ್ಗೆ ನಟ ಶಿವರಾಜ್‌ಕುಮಾರ್ ಹೇಳಿದ್ದೇನು ನೋಡಿ...
ನಟ ಉಪೇಂದ್ರ ಅವರ ಸಿನಿಮಾ ಎಂದರೆ ಅದು ಮಾಮೂಲಿ ರೀತಿ ಇರಲ್ಲ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಚಿತ್ರದ ಟೈಟಲ್ನಿಂದ ಹಿಡಿದು, ಅದರಲ್ಲಿ ಇರುವ ದೃಶ್ಯಗಳವರೆಗೆ ಎಲ್ಲವೂ ವಿಚಿತ್ರವೇ ಆಗಿರುತ್ತದೆ. ಎಷ್ಟೋ ಚಿತ್ರಗಳನ್ನು ಹಲವಾರು ಬಾರಿ ನೋಡಿದರೂ ಅರ್ಥವಾಗದ ರೀತಿಯಲ್ಲಿ ಇರುತ್ತದೆ ಎನ್ನುವುದು ಚಿತ್ರಪ್ರೇಮಿಗಳ ಮಾತು. ಅದಕ್ಕಾಗಿಯೇ ಉಪೇಂದ್ರ ಅವರ ಚಿತ್ರಗಳು ಬುದ್ಧಿವಂತರಿಗೆ ಮಾತ್ರ ಎನ್ನಿಸಿಕೊಳ್ಳುವುದು ಉಂಟು. ಅದರಲ್ಲಿಯೂ ಉಪೇಂದ್ರ ಅವರ ವಿಭಿನ್ನ ರೀತಿಯ ಲುಕ್ಕುಗಳು ಕೂಡ ಹಲವು ವರ್ಷಗಳಿಂದ ಟ್ರೆಂಡ್ ಆಗಿಯೇ ಉಳಿದಿವೆ. ಅವರ ಹೊಸ ಚಿತ್ರ ರಿಲೀಸ್ ಆಯಿತು ಎಂದರೆ, ಅವರ ಹೇರ್ಸ್ಟೈಲ್, ಅವರ ಡ್ರೆಸ್ ಎಲ್ಲವೂ ವಿಚಿತ್ರವಾಗಿದ್ದರೂ, ಅದು ಯುವಕರನ್ನು ಸೆಳೆಯುತ್ತಲೇ ಅದು ಟ್ರೆಂಡ್ ಸೃಷ್ಟಿಸುತ್ತದೆ ಎನ್ನುವುದು ಎಲ್ಲರಿಗೂ ತಿಳಿದದ್ದೆ.
ಆದರೆ ಇದೀಗ, ಉಪೇಂದ್ರ ಅವರ ಊಟ ಮಾಡುವ ಸ್ಟೈಲ್ ಕೂಡ ವಿಚಿತ್ರದ್ದೇ ಎನ್ನುವ ವಿಷಯವನ್ನು ಶಿವರಾಜ್ ಕುಮಾರ್ ಅವರು ರಿವೀಲ್ ಮಾಡಿದ್ದಾರೆ. ನಿನ್ನೆ ಉಪೇಂದ್ರ ಅವರ 45 ಸಿನಿಮಾ ಟೀಸರ್ ರಿಲೀಸ್ ಆಗಿದ್ದು, ಅದರ ಕುರಿತು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ವಿಷಯ ರಿವೀಲ್ ಆಗಿದೆ. ಅರ್ಜುನ್ ಜನ್ಯಾ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಇದಾಗಿದ್ದು, ನಿನ್ನೆ ಯುಗಾದಿ ಹಬ್ಬದಂದು ಇದು ರಿಲೀಸ್ ಆಗಿದೆ. ರಮೇಶ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದರಲ್ಲಿ ಉಪೇಂದ್ರ ಜೊತೆ ಶಿವರಾಜಕುಮಾರ್, ರಾಜ್ ಬಿ ಶೆಟ್ಟಿ ಕೂಡ ನಟಿಸಿದ್ದಾರೆ. ಆದ್ದರಿಂದ ಈ ಎಲ್ಲಾ ಕಲಾವಿದರು ಕಾರ್ಯಕ್ರಮದಲ್ಲಿ ಹಾಜರು ಆಗಿದ್ದರು. ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅವರು, ಉಪೇಂದ್ರ ಅವರು ಊಟ ಮಾಡುವ ಬಗ್ಗೆ ವಿವರಿಸಿದ್ದಾರೆ.
ಅಶುಭ ಮುಹೂರ್ತದಲ್ಲೇ ಮದ್ವೆಯಾಗೋಯ್ತು, ಡಿವೋರ್ಸ್ ಪಕ್ಕಾ ಎಂದುಬಿಟ್ರು: ನಟ ಅಜಯ್ ರಾವ್ ಮಾತು ಕೇಳಿ..
ಉಪೇಂದ್ರ ಅವರನ್ನು ಹೊಗಳಿರುವ ಶಿವರಾಜ್ ಕುಮಾರ್ ಅವರು, ಉಪೇಂದ್ರ ಅವರ ಸ್ಟೈಲ್ ಸಂಪೂರ್ಣ ಭಿನ್ನ. ಅದೇ ರೀತಿ ಅವರು ಊಟ ಮಾಡುವ ರೀತಿ ಕೂಡ ವಿಭಿನ್ನವಾದದ್ದು. ಅವರು ಬೇರೆಯವರ ರೀತಿ ಊಟ ಮಾಡಲ್ಲ. ಅನ್ನ, ಸಾಂಬಾರ್, ರಸಂ, ಮೊಸರು ಎಲ್ಲನ್ನೂ ಒಟ್ಟಿಗೆ ಕಲಿಸಿಕೊಂಡು ಪಾಯಸದ ರೀತಿ ಎಲ್ಲವನ್ನೂ ಒಟ್ಟಿಗೇ ಸೇವಿಸುತ್ತಾರೆ. ನಾನೇ ಫಾಸ್ಟ್ ಎಂದರೆ ಉಪೇಂದ್ರ ನನಗಿಂತ ಫಾಸ್ಟ್’ ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ. ಇದನ್ನು ಕೇಳಿ ಅಲ್ಲಿಯೇ ಇದ್ದ ಉಪೇಂದ್ರ ಅವರು ಜೋರಾಗಿ ನಕ್ಕಿದ್ದು ಅಭಿಮಾನಿಗಳು ಅಬ್ಬಬ್ಬಾ ಎನ್ನುತ್ತಿದ್ದಾರೆ.
ಇನ್ನು ಈ ಚಿತ್ರದ ಕುರಿತು ಹೇಳುವುದಾದರೆ, ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಅವರ ಪಾತ್ರಗಳು, ಲುಕ್, ಡೈಲಾಗ್ಸ್, ಎಲ್ಲವೂ ವಿಚಿತ್ರವಾಗಿದೆ ಎಂದು ಸಿನಿ ಪ್ರಿಯರು ಅಭಿಪ್ರಾಯ ಪಟ್ಟಿದ್ದಾರೆ. ಚಿತ್ರದ ಸಣ್ಣ ಝಲಕ್ ನೋಡಿರುವ ಅಭಿಮಾನಿಗಳು ಫಿದಾ ಆಗಿದ್ದಾರೆ. ನಿರ್ದೇಶನದ ಜೊತೆಗೆ ಅರ್ಜುನ್ ಜನ್ಯಾ '45' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಕೂಡ ಮಾಡಿದ್ದಾರೆ. ಮೇಕಿಂಗ್, ಆ್ಯಕ್ಷನ್, ಗ್ರಾಫಿಕ್ಸ್ ಎಲ್ಲವೂ ಕುತೂಹಲವಾಗಿರುವುದಾಗಿ ತೋರುತ್ತಿದೆ. ಇನ್ನೊಂದು ಕುತೂಹಲದ ವಿಷಯ ಏನೆಂದರೆ, ಈ ಸಿನಿಮಾ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆಯೇ ಶಿವಣ್ಣ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆದರೂ ಸಿನಿಮಾ ಮುಗಿಸಿ ತಮ್ಮ ಪಾತ್ರದ ಡಬ್ಬಿಂಗ್ ಕೂಡ ಕಂಪ್ಲೀಟ್ ಮಾಡಿ ಶಿವಣ್ಣ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದರು. ಇದರಿಂದ ಶಿವಣ್ಣ ಫ್ಯಾನ್ಸ್ ಈ ಚಿತ್ರವನ್ನು ನೋಡಲು ಕಾತರರಾಗಿದ್ದಾರೆ.
ದುನಿಯಾ ವಿಜಯ್ಗೆ 'ದೇವತೆ' ತಂದ ಸಂಕಷ್ಟ! ತಮಿಳಿನ ಚೊಚ್ಚಲ ಚಿತ್ರದಲ್ಲೇ ಕಿರಿಕ್- ಶೂಟಿಂಗ್ ಕ್ಯಾನ್ಸಲ್...