ಆ್ಯಂಕರ್​ ಅನುಶ್ರೀ ಜತೆ ಸೀಕ್ರೆಟ್ ಟಾಕ್; ಬಡವರ ಮನೆ ಹೆಣ್ಮಕ್ಳಿಗೆ ಹೀರೋಯಿನ್ ಆಗೋದಕ್ಕೆ ಬಿಡ್ತಾರಾ?

By Shriram BhatFirst Published Jun 3, 2024, 12:37 PM IST
Highlights

ನಟಿಯರು ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸಿರುವುದು, ನಟಿಸುತ್ತಿರುವುದು ಕಾಮನ್. ಅದು ಜಯಲಲಿತಾ, ಕಲ್ಪನಾ ಕಾಲದಿಂದಲೂ ಇದೆ, ಈಗ ಟ್ರೆಂಡ್ ಹುಟ್ಟಿಕೊಂಡಿದ್ದಲ್ಲ. ನಮ್ಮದೇ ನೆಲದ ಬಹಳಷ್ಟು ನಟಿಯರು ಬೇರೆ ಭಾಷೆಗಳಲ್ಲಿ ಮಿಂಚಿದ್ದಾರೆ, ಮಿಂಚುತ್ತಿದ್ದಾರೆ.

ಆ್ಯಂಕರ್​ ಅನುಶ್ರೀ ಜತೆ ಹರಟೆಕಟ್ಟೆಯಲ್ಲಿ ನಟಿಯರಾದ ಅದಿತಿ ಪ್ರಭುದೇವ, ಅಮೃತಾ ಹಾಗೂ ಖುಷಿ ಭಾಗಿಗಳಾಗಿದ್ದಾರೆ. ಅನುಶ್ರೀ ಅವರು 'ಪರಭಾಷಾ ನಟಿಯರು ನಮ್ಮ ಸ್ಯಾಂಡಲ್‌ವುಡ್‌ಗೆ ಬಂದು ನಟಿಸಿದಾಗ ನಿಮಗೆ ಏನನ್ನಿಸುತ್ತೆ?' ಎಂಬ ಪ್ರಶ್ನೆ ಕೇಳಿದ್ದಾರೆ. ಪ್ರಾಮಾಣಿಕ ಉತ್ತರ ಕೊಡಿ, ನಿಮಗೆ ನಿಜವಾಗಿಯೂ ಏನು ಅನ್ಸುತ್ತೆ ಅಂತೆ' ಕೇಳಿದಾರೆ ಅನುಶ್ರೀ. ಅದಕ್ಕೆ ಅವರೆಲ್ಲರೂ ಉತ್ತರ ನೀಡಿದ್ದಾರೆ. ಅನುಶ್ರೀ ಪ್ರಶ್ನೆಗೆ ಮೊದಲು ಉತ್ತರ ನೀಡಲು ಮುಂದೆ ಬಂದವರು ನಟಿ ಆದಿತಿ ಪ್ರಭುದೇವ. 

'ನನಗೆ, ಆ ಸಿನಿಮಾದ ಹೀರೋ, ನಿರ್ಮಾಪಕರು ಹಾಗು ನಿರ್ದೇಶಕರ ಜತೆ ಕುಳಿತು ಯಾಕೆ ಸರ್ ಹೀಗ್ ಮಾಡ್ತಾ ಇದೀರ ಅಂತ ಕೇಳ್ಬೇಕು ಅನ್ಸುತ್ತೆ' ಎಂದಿದ್ದಾರೆ. ಅದಕ್ಕೆ ಖುಷಿ 'ನನಗೂ ಬಹಳಷ್ಟು ಸಾರಿ ಹೀಗೇ ಆಗಿದೆ' ಎಂದಿದ್ದಾರೆ. ಅದಿತಿ ಪ್ರಭುದೇವ ಮತ್ತೆ 'ನಂಗೆ ಆ ಡೈಲಾಗ್ ಹೇಳ್ಬೇಕು ಅನ್ಸುತ್ತೆ, ಅದೂ..ಬಡವರ ಮನೆ ಹೆಣ್ಮಕ್ಳಿಗೆ ಹೀರೋಯನ್ ಆಗೋದಕ್ಕೆ ಬಿಡ್ತಾರಾ' ಎಂಬ ಡೈಲಾಗ್ ಹೇಳಿ ನಗಲು ಮಿಕ್ಕ ನಟಿಯರೂ ಅವರಿಗೆ ಸಾಥ್ ಕೊಟ್ಟಿದಾರೆ.

Latest Videos

ನಿವೇದಿತಾ ಜೈನ್: ಕೊಲ್ಲೂರಿನಲ್ಲಿ ಕೇರಳದ ಜ್ಯೋತಿಷಿ ಭವಿಷ್ಯ ನುಡಿದಿದ್ರು, ಹೇಳಿದಂತೆ ಆಯ್ತು!

ಕನ್ನಡದಲ್ಲಿ ಒಂದು ಡೈಲಾಗ್ ಹೇಳ್ಬೇಕು ಅಂದ್ರೆ ನಾವು ಅದಕ್ಕೆ ತಕ್ಕಂತೆ ಸಾಕಷ್ಟು ತಯಾರಿ ಮಾಡ್ಕೋತೀವಿ. ನಮ್ಮ ಅನುಭವನೆಲ್ಲ ಅದರಲ್ಲಿ ಸೇರಿಸ್ತೀವಿ. ಆದ್ರೆ ಪರಭಾಷೆ ನಟಿಯರಿಗೆ ಎಬಿಸಿಡಿ ಹೇಳಿಸ್ಬಿಟ್ಟು ಅದು ಹೇಗೆ ಡಬ್ಬಿಂಗ್ ಮಾಡಿಸ್ತಾರೋ ಗೊತ್ತಾಗ್ತಿಲ್ಲ' ಅಂದಿದಾರೆ. ಅದಿತಿ ಪ್ರಭುದೇವ ಮುಂದುವರೆದು 'ಅದು ಯಾವ್ ಸಿನಿಮಾ ಅಂತ ನಾನು ಹೇಳಲ್ಲ. ನಂಗೆ ಡಬ್ಬಿಂಗ್‌ಗೆ ಕರೆದಿದ್ರು. ಅವ್ರ ಡಮ್ಮಿ ಪರಫಾರ್ಮೆನ್ಸ್‌ನ ಎತ್ತೋಕೆ ನಮ್ ವೈಸ್ ಬೇಕು, ಟ್ಯಾಲೆಂಟ್ ಬೇಕು. ಆದ್ರೆ ಸಿನಿಮಾಗೆ ಯಾಕೆ ಕರೆದುಕೊಳ್ಳಲ್ಲ?' ಅಂತ ಪ್ರಶ್ನಿಸಿದ್ದಾರೆ.

ಅಶ್ವಿನಿ ಪುನೀತ್ ರಾಜ್‌ಕುಮಾರ್ ಆಗಮನಕ್ಕೆ ವಿರಾಟ್‌ ಕೊಹ್ಲಿ ಚಪ್ಪಾಳೆ; ಉತ್ತರ ಸಿಕ್ತಾ ಅಂದ್ರು ಅಪ್ಪು ಫ್ಯಾನ್ಸ್!

ಅದಿತಿ ಮಾತಿಗೆ ಎಲ್ಲರೂ ತಲೆದೂಗಿದಂತೆ ಕಂಡುಬಂತು. ಆದರೆ, ಇದೊಂದು ಹರಟೆಕಟ್ಟೆಯಲ್ಲಿ ನಡೆದ ಚರ್ಚೆ ಎಂಬುದನ್ನು ಗಮನಸಿಬೇಕಾಗುತ್ತದೆ. ಇಲ್ಲಿ ಕೆಲವರು ಅವರವರ ಅಭಿಪ್ರಾಯ ಹೇಳಿದ್ದಾರೆ. ಏಕೆಂದರೆ, ಈ ಮೊದಲಿನಿಂದಲೂ  ನಟಿಯರು ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸಿರುವುದು, ನಟಿಸುತ್ತಿರುವುದು ಕಾಮನ್. ಅದು ಜಯಲಲಿತಾ, ಕಲ್ಪನಾ ಕಾಲದಿಂದಲೂ ಇದೆ, ಈಗ ಟ್ರೆಂಡ್ ಹುಟ್ಟಿಕೊಂಡಿದ್ದಲ್ಲ. ನಮ್ಮದೇ ನೆಲದ ಬಹಳಷ್ಟು ನಟಿಯರು ಬೇರೆ ಭಾಷೆಗಳಲ್ಲಿ ಮಿಂಚಿದ್ದಾರೆ, ಮಿಂಚುತ್ತಿದ್ದಾರೆ.

ಆಕಾಶ್ ತೊದ್ಲುಎಂಬ ಟೀಕೆ; 'ಬೃಂದಾವನ' ವೀಕ್ಷಕರಿಗೆ ವರುಣ್ ಆರಾಧ್ಯ ತಾಯಿ ಹೇಳಿದ್ದೇನು?

ಬಾಲಿವುಡ್‌ನಲ್ಲಿ ಸ್ಟಾರ್ ನಟಿಯರಾಗಿ ಮೆರೆದ ಶ್ರೀದೇವಿ, ರೇಖಾ, ಜಯಪ್ರದಾ ಇರಲಿ, ತೆಲುಗಿನಲ್ಲಿ ಮೆರೆದ ಕನ್ನಡತಿಯರಾದ ಸೌಂದರ್ಯ, ಅನುಷ್ಕಾ ಶೆಟ್ಟಿ, ಇದೀಗ ರಶ್ಮಿಕಾ ಮಂದಣ್ಣ ಸಹ ಅಲ್ಲಿ ಪರಭಾಷೆಯವರೇ ಆಗಿದ್ದಾರೆ. ಜತೆಗೆ, ನಟಿ ಖುಷಿ ಕೂಡ ಸದ್ಯ ಕನ್ನಡಕ್ಕಿಂತ ಹೆಚ್ಚಾಗಿ ಪರಭಾಷೆಗಳಲ್ಲೇ ನಟಿಸುತ್ತಿದ್ದಾರೆ. 

ಮ್ಯಾಗಿ ಕೊಟ್ಟಿದ್ದೇಕೆ ರಾಕಿಂಗ್ ಸ್ಟಾರ್ ಯಶ್ ರಾಧಿಕಾ ಪಂಡಿತ್‌ಗೆ? ಏನಾಯ್ತು ಅಂಥದ್ದು?

ಒಟ್ಟಿನಲ್ಲಿ, ಹರಟೆಯಲ್ಲೊಂದು ವಿಷಯದ ಬಗ್ಗೆ ಚರ್ಚೆ ನಡೆದಿದೆ. ಅದರಲ್ಲಿ ಸತ್ಯವೂ ಇದೆ ಅಸತ್ಯವೂ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಈಗ ಸೌತ್ ಹಾಗೂ ನಾರ್ತ್‌ ಎಂಬ ಚಿತ್ರರಂಗದ ಗಡಿಗಳು ಅಳಿಸಿಹೋಗಿವೆ. ಅದರಲ್ಲೂ ಮುಖ್ಯವಾಗಿ ಕೆಜೆಎಫ್ ಬಳಿಕ ನಟನರೂ ಕೂಡ ಭಾಷೆಗಳ ಗಡಿ ದಾಟಿ ಹೋಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಪರಭಾಷೆ ನಟನಟಿಯರು ಎಂಬ ಕಾನ್ಸೆಪ್ಟ್ ವರ್ಕ ಆಗಲು ಅಸಾಧ್ಯ ಎನಿಸುತ್ತಿದೆ. ಏನೇ ಇರಲಿ, ಆ್ಯಂಕರ್​ ಅನುಶ್ರೀ ಅವರ ಹರಟೆಕಟ್ಟೆ ಸಂದರ್ಶನದಲ್ಲಿ ನಟಿಯರಾದ ಅದಿತಿ ಪ್ರಭುದೇವ, ಖುಷಿ ರವಿ ಹಾಗೂ ಅಮೃತಾ ಭಾಗಿಯಾಗಿ ಹರಟೆ ಹೆಸರಿನಲ್ಲಿ ಮಾತುಕತೆ ನಡೆಸಿದ್ದಾರೆ. 
 

click me!