ನಿವೇದಿತಾ ಜೈನ್: ಕೊಲ್ಲೂರಿನಲ್ಲಿ ಕೇರಳದ ಜ್ಯೋತಿಷಿ ಭವಿಷ್ಯ ನುಡಿದಿದ್ರು, ಹೇಳಿದಂತೆ ಆಯ್ತು!

By Shriram Bhat  |  First Published Jun 2, 2024, 5:59 PM IST

ನಿವೇದಿತಾ ಸಾವಿನ ಬಗ್ಗೆ ಚರ್ಚೆ ಅದೇನೇ ಇರಲಿ, ಅವರ ಸಾವನ್ನು ಸಾಕಷ್ಟು ಮೊದಲೇ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದರು ಎಂಬುದನ್ನು ಸಾಕಷ್ಟು ಜನರು ಹೇಳಿದ್ದಾರೆ. ಕೊಲ್ಲೂರಿನ ಮುಕಾಂಬಿಕೆ ದೇವಸ್ಥಾನಕ್ಕೆ ನಿವೇದಿತಾ ಜೈನ್...


ಸ್ಯಾಂಡಲ್‌ವುಡ್ ಮೋಸ್ಟ್ ಬ್ಯೂಟಿಫುಲ್ ನಟಿ ಎಂದೇ ಖ್ಯಾತರಾಗಿದ್ದ ನಿವೇದಿತಾ ಜೈನ್ (Nivedita Jain) ಅವರನ್ನು ಸಿನಿಪ್ರೇಕ್ಷಕರು ಎಂದೂ ಮರೆಯಲು ಸಾಧ್ಯವೇ ಇಲ್ಲ. ಅಷ್ಟು ಚೆಲವು, ನಟನೆಯ ಬಗ್ಗೆ ಅಷ್ಟು ಒಲವು ಇದ್ದ ನಟಿ ನಿವೇದಿತಾ ಜೈನ್ ಅವರು ತಮ್ಮ ಹತ್ತೊಂಬತ್ತೆನೆಯ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿಬಿಟ್ಟರು. ಅವರದ್ದು ಅಪಘಾತವಲ್ಲ, ಕೊಲೆ ಎಂದು ಕೂಡ ಸುದ್ದಿಯಾಗಿದ್ದರೂ ಪೊಲೀಸ್ ತನಿಖೆ ವರದಿಯಲ್ಲಿ ಅದು ಅಪಘಾತ, ಅಂದರೆ ಆಕಸ್ಮಿಕ ಸಾವು ಎಂದೇ ವರದಿಯಾಗಿದೆ. 

ನಿವೇದಿತಾ ಸಾವಿನ ಬಗ್ಗೆ ಚರ್ಚೆ ಅದೇನೇ ಇರಲಿ, ಅವರ ಸಾವನ್ನು ಸಾಕಷ್ಟು ಮೊದಲೇ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದರು ಎಂಬುದನ್ನು ಸಾಕಷ್ಟು ಜನರು ಹೇಳಿದ್ದಾರೆ. ಕೊಲ್ಲೂರಿನ ಮುಕಾಂಬಿಕೆ ದೇವಸ್ಥಾನಕ್ಕೆ ನಿವೇದಿತಾ ಜೈನ್ ಅವರು ಇಡೀ ಕುಟುಂಬ ಹೋಗಿತ್ತು. ಆಗ ಕೇರಳದ ಮಾಂತ್ರಿಕ ಜ್ಯೋತಿಷಿಯೊಬ್ಬರು ನಟಿ ನಿವೇದಿತಾ ಜೈನ್ ನೋಡಿದವರೇ, ಎಲ್ಲರ ಎದುರಿಗೇ 'ಇವಳು ಅಲ್ಪಾಯುಷಿ, ಹಣೆಗೆ ದೊಡ್ಡ ಗಾಯವಾಗಿ ಈಕೆ ಸಾಯುತ್ತಾರೆ' ಎಂದಿದ್ದರಂತೆ. ಜೊತೆಗೆ, ಮನೆಯಲ್ಲಿರುವ ಕೋಣೆಗಳ ಬಗ್ಗೆ ಕೂಡ ಹೇಳಿದ್ದರಂತೆ. ಆದಷ್ಟು ಮನೆ ಬದಲಾಯಿಸಿ ಎಂದು ಕೂಡ ಸಲಹೆ ಕೊಟ್ಟಿದ್ದರಂತೆ. 

Tap to resize

Latest Videos

ಅಶ್ವಿನಿ ಪುನೀತ್ ರಾಜ್‌ಕುಮಾರ್ ಆಗಮನಕ್ಕೆ ವಿರಾಟ್‌ ಕೊಹ್ಲಿ ಚಪ್ಪಾಳೆ; ಉತ್ತರ ಸಿಕ್ತಾ ಅಂದ್ರು ಅಪ್ಪು ಫ್ಯಾನ್ಸ್!

ಆ ಬಗ್ಗೆ ಸ್ವತಃ ನಿವೇದಿತಾ ತಾಯಿ ಪ್ರಿಯಾ ಜೈನ್ ಸಹ 'ಹೌದು, ಅವರು ಹೇಳಿದ್ದು ಹೌದು, ಆವತ್ತು ನಿವೇದಿತಾ ಭಾವುಕಳಾಗಿ ತುಂಬಾನೇ ಅತ್ತಿದ್ದೂ ಹೌದು. ಆದರೆ, ಬಳಿಕ ಅವಳೇ ಸ್ವತಃ ಧೈರ್ಯ ತಂದುಕೊಂಡು, ಹಾಗೇನೂ ಆಗಲಿಕ್ಕಿಲ್ಲ ಬಿಡಿ. ಒಮ್ಮೆ ಹಾಗೇ ಆಗಬೇಕು ಅಂತಿದ್ದರೆ ಅದನ್ನು ತಪ್ಪಿಸಲು ನಾವ್ಯಾರು' ಎಂದು ಕೇಳಿ ಆ ಬಗ್ಗೆ ಯಾವತ್ತೂ ಏನೂ ಮಾತನಾಡಿರಲೇ ಇಲ್ಲ. ಅವಳೇ ಆ ಬಗ್ಗೆ ಧೈರ್ಯ ತಂದುಕೊಂಡಿದ್ದಾಳೆ, ಇನ್ನು ನಾವು ಯಾಕೆ ಹೆದ್ರಿಕೊಳ್ಳೋದು ಅಂತ ಅಂದುಕೊಂಡು ನಾವು ಕೂಡ ಸುಮ್ಮನಾಗಿಬಿಟ್ವಿ' ಎಂದಿದ್ದಾರೆ ಪ್ರಿಯಾ ಜೈನ್. 

ಆಕಾಶ್ ತೊದ್ಲುಎಂಬ ಟೀಕೆ; 'ಬೃಂದಾವನ' ವೀಕ್ಷಕರಿಗೆ ವರುಣ್ ಆರಾಧ್ಯ ತಾಯಿ ಹೇಳಿದ್ದೇನು?

16ನೇ ವಯಸ್ಸಿಗೇ ಮಿಸ್ ಬೆಂಗಳೂರು ಆಗಿದ್ದ ನಿವೇದಿತಾ ಜೈನ್ ಅಷ್ಟು ಚಿಕ್ಕ ಪ್ರಾಯದಲ್ಲೇ ಫೇಮಸ್ ಮಾಡೆಲ್ ಆಗಿದ್ದರು. ತಾವು ಸಾಯುವುದಕ್ಕೂ ಮೊದಲು 12 ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ನಿವೇದಿತಾ ಜೈನ್, ತಮಿಳು ಹಾಗೂ ತೆಲುಗು ಚಿತ್ರರಂಗಕ್ಕೂ ಪರಿಚಯವಾಗಿದ್ದರು. ಬಾಲಿವುಡ್ ಸಿನಿಮಾ ಆಫರ್ ಕೂಡ ಬಂದಿತ್ತು. ಆದರೆ, ಅವರ ಯಾವುದೇ ಸಿನಿಮಾ ಹೇಳಿಕೊಳ್ಳುವಂಥ ಯಶಸ್ಸು ದಾಖಲಿಸಿರಲಿಲ್ಲ. ಹೀಗಾಗಿ ಮತ್ತೆ ಮಾಡೆಲಿಂಗ್ ಕಡೆಗೇ ಆಸಕ್ತಿ ವಹಿಸಿದ್ದರು. ಅಷ್ಟರಲ್ಲಿ ಸಾವು ಬಂದೆರಗಿತ್ತು. 

ಮ್ಯಾಗಿ ಕೊಟ್ಟಿದ್ದೇಕೆ ರಾಕಿಂಗ್ ಸ್ಟಾರ್ ಯಶ್ ರಾಧಿಕಾ ಪಂಡಿತ್‌ಗೆ? ಏನಾಯ್ತು ಅಂಥದ್ದು?

ಏನೇ ಆದರೂ ನಟಿ ನಿವೇದಿತಾ ಜೈನ್ ಅವರ ಸಾವನ್ನು ಅರಗಿಸಿಕೊಳ್ಳುವುದು ತುಂಬಾನೇ ಕಷ್ಟ. ಜ್ಯೋತಿಷಿಯೊಬ್ಬರು ಅಷ್ಟು ಸ್ಪಷ್ಟವಾಗಿ ಹೇಳಿದ್ದರೂ ನಿವೇದಿತಾ ಜೈನ್ ಹಾಗೂ ಅವರ ಕುಟುಂಬ ಅದನ್ನು ಯಾಕೆ ಅಸಡ್ಡೆ ಮಾಡಿಬಿಟ್ರು ಎಂಬುದೀಗ ಸಾವಿ ಡಾಲರ್ ಪ್ರಶ್ನೆಯಾಗಿದೆ. ಆದರೆ, ಅದಕ್ಕೆ ಈಗ ಉತ್ತರ ಸಿಕ್ಕಿ ಏನೂ ಪ್ರಯೋಜನವಿಲ್ಲ. 

ಕಾಮ-ಪ್ರೇಮ ಅನೈತಿಕ ಕಥೆಗಳನ್ನೇ ಸಿನಿಮಾ ಮಾಡುತ್ತಿದ್ದ ಪುಟ್ಟಣ್ಣ ಮಡಿವಂತರ ಮಧ್ಯೆ ಗೆದ್ದಿದ್ದು ಹೇಗೆ?

ನಿವೇದಿತಾ ಜೈನ್ ಅವರ ಅಷ್ಟು ಚೆಂದದ ಮುಖ, ಆ ಹೈಟು-ವೇಟು ಎಲ್ಲವೂ ಹೇಳಿ ಮಾಡಿಸಿದಂತಿತ್ತು ಎಂಬುದನ್ನು ಅವರನ್ನು ನೋಡಿದ ಯಾರಾದರೂ ಹೇಳಲೇಬೇಕು. ಹಾಗಿದ್ದರು ಅವರು, ಆದರೆ ಹೀಗಾಗಿಬಿಟ್ಟಿತು. ಅದೆಷ್ಟೋ ಜನರು ಮತ್ತೆ ಅದೇ ಚೆಲುವಿನ ಮೂಲಕ ಮತ್ತೆ ಗುಟ್ಟಿ ಬನ್ನಿ ಎಂದು ಪ್ರಾರ್ಥಿಸಿದ್ದಾರಂತೆ. 
 

click me!