ಪ್ರಶಾಂತ್ ಮುರಳಿ ಮತ್ತು ಪಾರ್ವತಿ ಮೆನನ್ ಮದುವೆ ಫೋಟೋ ವೈರಲ್. ಸೈಲೆಂಟ್ ಮದುವೆ ಗುಟ್ಟು ಇಲ್ಲಿದೆ.....
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಮಿಲನಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪಾರ್ವತಿ ಮೆನನ್ ಮಳೆ ಬರಲಿ ಮಂಜೂ ಇರಲಿ, ಪೃಥ್ವಿ ಮತ್ತು ಅಂದರ್ ಬಾಹರ್ ಸಿನಿಮಾಗಳಲ್ಲಿ ನಟಿಸಿ ಕನ್ನಡ ಮನಸ್ಸಿಗೆ ಹತ್ತಿರವಾಗಿಬಿಟ್ಟರು. ಪಾರ್ವತಿ ಮಲಯಾಳಿ ಅಲ್ಲ ಕನ್ನಡತಿ ಅನ್ನೋಷ್ಟು ಪ್ರೀತಿ ಕೊಟ್ಟಿದ್ದಾರೆ. ಆದರೆ ಈಗ ವೈರಲ್ ಆಗುತ್ತಿರುವ ಮದುವೆ ಫೋಟೋ ಶಾಕ್ ಆಗಿದ್ದಾರೆ.
ಹೌದು! 36 ವರ್ಷದ ಪಾರ್ವತಿ ಮೆನನ್ ಮತ್ತು ಪ್ರಶಾಂತ್ ಮುರಳಿ ಮದುವೆಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಕೆಂಪು ಸೀರೆ ಧರಿಸಿ ಪಕ್ಕಾ ಮಲಯಾಳಿ ರೀತಿಯಲ್ಲಿ ಪಾರ್ವತಿ ಕಾಣಿಸಿಕೊಂಡರೆ ಗ್ರೇ ಆಂಡ್ ವೈಟ್ ಕಾಂಬಿನೇಷನ್ ಸೂಟ್‌ನಲ್ಲಿ ಪ್ರಶಾಂತ್ ಕಾಣಿಸಿಕೊಂಡಿದ್ದಾರೆ. ಅಕ್ಕ ಪಕ್ಕ ಸಿನಿಮಾ ಸ್ಟಾರ್‌ಗಳು ಇದ್ದಾರೆ. ಇಲ್ಲಿಗೆ ಬಹುತೇಕರಿಗೆ ಅನುಮಾನ ಶುರುವಾಗಿದೆ. ಇವರು ಮಾತ್ರ ಮಧುಮಕ್ಕಳಂತೆ ಕಾಣಿಸುತ್ತಿದ್ದಾರೆ ಅವರ ಪಕ್ಕದವರು ಯಾಕೆ ಮೀನು ಹಿಡಿಯುವರಂತಿದ್ದಾರೆ ಎಂದು.
ಹೇಮಾ ಚೌಧರಿ ಆರೋಗ್ಯ ವಿಚಾರಿಸಲು ಮನೆ ಬಾಗಿಲಿಗೆ ಹೋದ ನಟಿ ರಜನಿ; ಫೋಟೋ ವೈರಲ್!
ಸತ್ಯ ಏನೆಂದರೆ ಪಾರ್ವತಿ ಮೆನನ್ ಮದುವೆಯಾಗಿಲ್ಲ. ಇದು ಅವರ ಮುಂದಿನ ಸಿನಿಮಾ 'ಮೆಲ್ಲೋಜುಕ್ಕು' ಫೋಟೋ ಎನ್ನಲಾಗಿದೆ. ಕ್ರಿಸ್ಟೋ ಟಾಮಿ ನಿರ್ದೇಶನ ಮಾಡಿರುವ ಈ ಚಿತ್ರದ 45 ಸೆಕೆಂಡ್ ಪ್ರೋಮೋ ಒಂದು ಬಿಡುಗಡೆಯಾಗಿದೆ ಅದರಲ್ಲಿ ಇವರಿಬ್ಬರು ಅಕ್ಕ ಪಕ್ಕ ಮಧುಮಕ್ಕಳಂತೆ ನಿಂತಿದ್ದಾರೆ. ಈ ಚಿತ್ರಕ್ಕೆ ಪ್ರಶಾಂತ್ ಮುರಳಿ ನಾಯಕ.
ಮದ್ವೆಯಾಗಿ ಒಂದು ವರ್ಷನೂ ಜೀವನ ಮಾಡಿಲ್ಲ, ಆಕೆ ನನ್ನ ಮಗಳೇ ಅಲ್ಲ: ಡಿವೋರ್ಸ್ ಬಗ್ಗೆ ನಟಿ ಸುಕನ್ಯಾ ಸ್ಪಷ್ಟನೆ
ಇನ್ನು ಪಾರ್ವತಿ ಯಾಕೆ ಮದುವೆ ಆಗಿಲ್ಲ ಅನ್ನೋದಕ್ಕೆ ಸ್ಪಷ್ಟ ಉತ್ತರವಿಲ್ಲ. ನಟಿ ಎಲ್ಲಿಯೂ ತಮ್ಮ ಮದುವೆ ಬಗ್ಗೆ ಅಥವಾ ಕನಸಿನ ಹುಡುಗನ ಬಗ್ಗೆ ಹೇಳಿಕೊಂಡಿಲ್ಲ. ಆದರೆ ಪಾರ್ವತಿ ಎಲ್ಲೇ ಹೋದರೂ ಮದುವೆ ಯಾವಾಗ ಮದುವೆ ಯಾವಾಗ ಅನ್ನೋ ಕಾಮನ್ ಪ್ರಶ್ನೆನ ಸಿಕ್ಕವರೆಲ್ಲಾ ಕೇಳುತ್ತಾರೆ. ಆದರೆ ಇತ್ತೀಚಿಗೆ ಅಪ್ಲೋಡ್ ಮಾಡಿರುವ ಫೋಟೋ ಸಾಕಷ್ಟು ಅನುಮಾನ ಹುಟ್ಟು ಹಾಕಿದೆ. 'ನಾವು ಸತ್ಯವನ್ನು ಎಷ್ಟೇ ಆಳವಾಗಿ ಹೂತುಹಾಕಿದ್ದರು..ಒಂದಲ್ಲ ಒಂದು ದಿನ ಹೊರ ಬರುತ್ತದೆ' ಎಂದು ಬರೆದುಕೊಂಡಿದ್ದಾರೆ.