ಏ.9ಕ್ಕೆ ರಾಬರ್ಟ್‌, ಏ.10ರಂದು ಕೋಟಿಗೊಬ್ಬ : ಅಭಿಮಾನಿಗಳಿಗೆ ದೊಡ್ಡ ಹಬ್ಬ!

By Suvarna News  |  First Published Jan 28, 2020, 8:24 AM IST

ಏಪ್ರಿಲ್‌ ಮೊದಲ ವಾರ ಇಬ್ಬರು ಸ್ಟಾರ್‌ಗಳ ಅಭಿಮಾನಿಗಳಿಗೆ ದೊಡ್ಡ ಹಬ್ಬವಾಗುವ ಲಕ್ಷಣ ಗೋಚರಿಸುತ್ತಿದೆ. ಏಪ್ರಿಲ್‌ 9ರಂದು ದರ್ಶನ್‌ ಅಭಿನಯದ ‘ರಾಬರ್ಟ್‌’, ಏಪ್ರಿಲ್‌ 10ರಂದು ಸುದೀಪ್‌ ಅಭಿನಯದ ‘ಕೋಟಿಗೊಬ್ಬ 3’ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ. ಅಲ್ಲಿಗೆ ಕನ್ನಡ ಚಿತ್ರರಂಗಕ್ಕೆ ಒಂದೇ ವಾರದಲ್ಲಿ ಡಬಲ್‌ ಧಮಾಕ.


ನಿರ್ದೇಶಕ ತರುಣ್‌ ಸುಧೀರ್‌ ‘ರಾಬರ್ಟ್‌’ ಚಿತ್ರವನ್ನು ಏಪ್ರಿಲ್‌ 9ಕ್ಕೆ ತೆರೆಗೆ ತರುವುದಾಗಿ ಹೇಳುತ್ತಿರುವ ಹೊತ್ತಿನಲ್ಲಿ, ‘ಕೋಟಿಗೊಬ್ಬ 3’ ಚಿತ್ರದ ತಂಡದಿಂದಲೂ ಏಪ್ರಿಲ್‌ 10ಕ್ಕೆ ತಮ್ಮ ಸಿನಿಮಾ ಚಿತ್ರಮಂದಿರ ಬಾಗಿಲು ತಟ್ಟಲಿದೆ ಎನ್ನುತ್ತಿವೆ ಮೂಲಗಳು. ಆ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ.

Tap to resize

Latest Videos

ಸಂಕ್ರಾಂತಿ ಹಬ್ಬಕ್ಕೆ ಪಕ್ಕದ ತೆಲುಗು ಹಾಗೂ ತಮಿಳು ಭಾಷೆಯಲ್ಲೂ ಇದೇ ಆಗಿತ್ತು. ಮಹೇಶ್‌ ಬಾಬು ನಟನೆಯ ‘ಸರಿಲೇರು ನಿಕ್ಕೆವ್ವರು’ ಹಾಗೂ ಅಲ್ಲೂ ಅರ್ಜುನ್‌ ನಟನೆಯ ‘ಅಲಾ ವೈಕುಂಠಪುರಲೋ’ ಚಿತ್ರಗಳು ಒಂದು ದಿನದ ಅಂತರದಲ್ಲಿ ಬಂದು ಗಲ್ಲಾ ಪಟ್ಟಿಗೆಯಲ್ಲಿ ಸದ್ದು ಮಾಡಿದವು. ಎರಡೂ ಚಿತ್ರಗಳು ಗಳಿಕೆಯಲ್ಲಿ ಹಿಂದೆ ಉಳಿಯಲಿಲ್ಲ. ಹಾಗೆ ತಮಿಳಿನಲ್ಲೂ ಮಾವ ಮತ್ತು ಅಳಿಯ ಮುಖಾಮುಖಿ ಆದರು. ‘ದರ್ಬಾರ್‌’ ಎಂದ ರಜನಿಕಾಂತ್‌, ‘ಪಟಾಸ್‌’ ಎಂದ ಧನುಷ್‌ ಇಬ್ಬರೂ ಒಂದೇ ದಿನ ಬಂದರು.

ಮ್ಯೂಸಿಯಂ ಥರಾ ಇದೆ ಸುದೀಪ್‌ ಅವರ ಕಿಚನ್‌!

ಈಗ ಅದೇ ಜಾದೂ ಕನ್ನಡದಲ್ಲೂ ಶುರುವಾಗಲಿದೆ. ದರ್ಶನ್‌ ನಟನೆಯ ‘ರಾಬರ್ಟ್‌’ ಚಿತ್ರಕ್ಕೆ ಮೊನ್ನೆಯಷ್ಟೇ ಚಿತ್ರೀಕರಣ ಮುಗಿದಿದೆ. ನಿರ್ದೇಶಕ ತರುಣ್‌ ಸುಧೀರ್‌ ಈಗಾಗಲೇ ಡಬ್ಬಿಂಗ್‌ ಕಾರ್ಯಕ್ಕೂ ಚಾಲನೆ ಕೊಟ್ಟು ಅದು ಕೂಡ ಮುಗಿಯುವ ಹಂತಕ್ಕೆ ಬಂದಿದೆ. ಇತ್ತ ಒಂದು ಹಾಡಿನೊಂದಿಗೆ ಚಿತ್ರೀಕರಣ ಮುಗಿಸಿರುವ ಸುದೀಪ್‌ ನಟನೆಯ ‘ಕೋಟಿಗೊಬ್ಬ 3’ ಚಿತ್ರಕ್ಕೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ನಿರ್ದೇಶಕ ಶಿವಕಾರ್ತಿಕ್‌ ಚಿತ್ರದ ಕೆಲಸಗಳಿಗೆ ವೇಗ ಹೆಚ್ಚಿಸಿದ್ದಾರೆ. ಹೀಗೆ ಎರಡೂ ಬಿಗ್‌ ಬಜೆಟ್‌ನ ಬಿಗ್‌ ಸ್ಟಾರ್‌ಗಳ ಚಿತ್ರಗಳು ಶೂಟಿಂಗ್‌ ಮೈದಾನದಲ್ಲಿ ಯಶಸ್ವಿಯಾಗಿ ಪೆರೇಡ್‌ ಮುಗಿಸಿದ ಮೇಲೆ ಬಿಡುಗಡೆಯ ವಿಚಾರದಲ್ಲಿ ಸದ್ದು ಮಾಡುತ್ತಿವೆ.

click me!