ಫ್ಯಾನ್ಸ್ ಅನ್ನ ಮನೆಯವರಂತೆ ಪ್ರೀತಿಸೋ ಯಶ್ ಅಭಿಮಾನಿಗಳ ದುರಂತ ಸಾವಿನಿಂದ ಬೇಸರದಲ್ಲಿದ್ದಾರೆ. ಹುಟ್ಟುಹಬ್ಬದ ದಿನ ಖುಷಿ ಖುಷಿಯಾಗಿರಬೇಕಾದ ಯಶ್ ಕಣ್ಣೀರಿಟ್ಟಿದ್ದಾರೆ. ಅಭಿಮಾನಿಳ ಸಾವು ಯಶ್ ಮನಸ್ಸನ್ನ ಕೆಡಿಸಿದೆ.
ಫ್ಯಾನ್ಸ್ ಅನ್ನ ಮನೆಯವರಂತೆ ಪ್ರೀತಿಸೋ ಯಶ್ ಅಭಿಮಾನಿಗಳ ದುರಂತ ಸಾವಿನಿಂದ ಬೇಸರದಲ್ಲಿದ್ದಾರೆ. ಹುಟ್ಟುಹಬ್ಬದ ದಿನ ಖುಷಿ ಖುಷಿಯಾಗಿರಬೇಕಾದ ಯಶ್ ಕಣ್ಣೀರಿಟ್ಟಿದ್ದಾರೆ. ಅಭಿಮಾನಿಳ ಸಾವು ಯಶ್ ಮನಸ್ಸನ್ನ ಕೆಡಿಸಿದೆ. ಬೇಸರದಲ್ಲಿರೋ ಯಶ್ ಸಿನಿಮಾ ಶೂಟಿಂಗ್ಗೂ ಬ್ರೇಕ್ ಹಾಕಿದ್ದಾರೆ. ಅಣ್ಣಾವ್ರು ಅಭಿಮಾನಿಗಳೇ ದೇವ್ರು ಅಂತ ಬದುಕಿದ್ರು. ಅವರ ಹಾದಿಯನ್ನೇ ಫಾಲೋ ಮಾಡಿದ ಸ್ಟಾರ್ಗಳು ತಮ್ಮ ಅಭಿಮಾನಿಗಳಿಗೆ ಸೆಲೆಬ್ರೆಟೀಸ್ ಅಂತ ಕರೆದ್ರು. ಅಭಿಮಾನಿಗಳೇ ನನ್ನ ಸ್ನೇಹಿತರು ಅಂದ್ರು. ಅಭಿಮಾನಿಗಳನ್ನ ವಿಐಪಿಗಳು ಅಂತ ಪ್ರೀತಿಸ್ತಾರೆ. ಆದ್ರೆ ನಟ ಯಶ್ ಹಾಗು ಅವರ ಅಭಿಮಾನಿಗಳ ವಿಷಯದಲ್ಲಿ ಯಾಕೋ ಪದೇ ಪದೇ ಬೇಸರ ಆಗ್ತಿದೆ.
ಯಶ್ ಹುಟ್ಟುಹಬ್ಬದ ದಿನ ನಾಲ್ಕು ಜನ ಅಭಿಮಾನಗಳು ದುರಂತ ಅಂತ್ಯ ಕಂಡಿದ್ದಾರೆ. ನಟ ಯಶ್ ಈ ಶಾಕ್ನಲ್ಲಿದ್ದಾರೆ. ತನ್ನ ಫ್ಯಾನ್ಸ್ಅನ್ನ ಮನೆಯವರಂತೆ ಪ್ರೀತಿಸೋ ಯಶ್ ಅಭಿಮಾನಿಗಳ ದುರಂತ ಸಾವಿನಿಂದ ಬೇಸರದಲ್ಲಿದ್ದಾರೆ. ಹುಟ್ಟುಹಬ್ಬದ ದಿನ ಖುಷಿ ಖುಷಿಯಾಗಿರಬೇಕಾದ ಯಶ್ ಕಣ್ಣೀರಿಟ್ಟಿದ್ದಾರೆ. ಅಭಿಮಾನಿಳ ಸಾವು ಯಶ್ ಮನಸ್ಸನ್ನ ಕೆಡಿಸಿದೆ. ಬೇಸರದಲ್ಲಿರೋ ಯಶ್ ಸಿನಿಮಾ ಶೂಟಿಂಗ್ಗೂ ಬ್ರೇಕ್ ಹಾಕಿದ್ದಾರೆ. ಯಶ್ ಟಾಕ್ಸಿಕ್ ಸಿನಿಮಾ ಶೂಟಿಂಗ್ ಹೋಗಬೇಕಿತ್ತು. ಆದ್ರೆ ಫ್ಯಾನ್ಸ್ ಬಳಗದಲ್ಲಾದ ಅನಾಹುತದಿಂದ ಟಾಕ್ಸಿಕ್ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದಾರೆ. ಹೀಗಾಗಿ ಫ್ಯಾಮಿಲಿ ಜೊತೆ ಗೋವಾ ಫ್ಲೈಟ್ ಹತ್ತಿರೋ ಯಶ್ ಟಾಕ್ಸಿಕ್ ಶೂಟಿಂಗ್ಅನ್ನ ಫೆಬ್ರವರಿಯಿಂದ ಆರಂಭಿಸೋದಾಗಿ ಹೇಳಿದ್ದಾರೆ. ಜನವರಿ 8ಕ್ಕೆ ಯಶ್ ಜನ್ಮದಿನ.
ಈ ಭಾರಿ ಹುಟ್ಟುಹಬ್ಬದಲ್ಲಿ ಯಶ್ ರ ಮೂರು ಜನ ಅಭಿಮಾನಿಗಳು ಕಟೌಟ್ ಕಟ್ಟಲು ಹೋಗಿ ಪ್ರಾಣ ಕಳೆದುಕೊಂಡ್ರು. ಯಶ್ ಕಾರುನ್ನ ಬೆನ್ನತ್ತಿ ಹೊರಟ ನವೀನ್ ಎಂಬ ಯುವಕ ಪೊಲೀಸ್ ಜೀಪ್ಗೆ ಡಿಕ್ಕಿ ಹೊಡೆದು ಸಾವನಪ್ಪಿದ್ದಾನೆ. ಈ ಮೂಲಕ ನಾಲ್ವರು ಯಶ್ ಅಭಿಮಾನಿಗಳು ಒಂದೇ ದಿನ ಮೃತಪಟ್ಟಿದ್ದಾರೆ. ಇದು ಈ ವರ್ಷ ನಡೆದ ಕೆಟ್ಟ ಘಟನೆಗಳಾದ್ರೆ ಈ ಹಿಂದೆಯೂ ಯಶ್ ಹುಟ್ಟುಹಬ್ಬದ ದಿನ ಕೆಲವು ಘಟನೆಗಳು ನಡೆದಿವೆ. 2019ರಲ್ಲಿ ಯಶ್ ಹುಟ್ಟುಹಬ್ಬದ ದಿನ ಒಂದು ದುರ್ಘಟನೆ ನಡೆದಿತ್ತು. ಬೆಂಗಳೂರಿನ ದಾಸರಹಳ್ಳಿಯ ಯುವಕ ರವಿ ರಘುರಾಮ್ ಯಶ್ಗೆ ಕಟ್ಟಾಭಿಮಾನಿ ಆಗಿದ್ದ.
ರಾಮ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಲ್ಲಿ ಸ್ಟಾರ್ಸ್ ಮೆರಗು: ರಿಷಬ್ ಬಳಿಕ ಯಶ್‌ಗೂ ಬಂತು ಆಹ್ವಾನ!
ಯಶ್ ಹುಟ್ಟುಹಬ್ಬದ ದಿನ ಯಶ್ ಗೆ ವಿಶ್ ಮಾಡಲು ಹೋಗಿದ್ದ ರವಿಗೆ ನಟ ಯಶ್ರನ್ನ ಭೇಟಿ ಮಾಡಲಾಗಲಿಲ್ಲ. ಇದ್ರಿಂದ ಬೇಸರದಲ್ಲಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟಿದ್ದ. ಅಷ್ಟೆ ಅಲ್ಲ ಯಶ್ ನಂದಿ ಲಿಂಕ್ಸ್ ಗ್ರೌಂಡ್ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ರು. ಆಗ ಬೃಹತ್ ದೊಡ್ಡ ಕೌಟೌಟ್ ಮುರಿದು ಬಿದ್ದಿತ್ತು. ಆ ಘಟನೆಯಿಂದ ಹಲವು ಅಭಿಮಾನಿಗಳು ಪ್ರಾಣಾಪಾಯದಿಂದ ಬಚಾವ್ ಆಗಿದ್ರು. ಆ ಘಟನೆ ಬಳಿಕ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳೋದೇ ಬೇಡ ಅಂತ ಯಶ್ ಸುಮ್ಮನಾಗಿದ್ರು. ಈ ಭಾರಿ ಫ್ಯಾನ್ಸ್ ಜತೆ ಬರ್ತ್ಡೇ ಮಾಡಿಕೊಳ್ಳದೇ ಇದ್ರು ನಾಲ್ಕು ಜನ ಅಭಿಮಾನಿಗಳು ಪ್ರಾಣ ತ್ಯಾಗ ಮಾಡಿದ್ದಾರೆ. ಈ ನೋವು ಯಶ್ರನ್ನ ಅತಿಯಾಗಿ ಕಾಡುತ್ತಿದ್ದು, ಟಾಕ್ಸಿಕ್ ಸಿನಿಮಾದ ಶೂಟಿಂಗ್ಅನ್ನೂ ಮುಂದೆಕ್ಕೆ ದೂಡಿದ್ದಾರೆ ಯಶ್.