ಅವನಿರಬೇಕಿತ್ತು ಚಿತ್ರವನ್ನ ಅಶೋಕ್ ಸಾಮ್ರಾಟ್ ನಿರ್ದೇಶಿಸಿದ್ದಾರೆ. ನಿರ್ದೇಶನದ ಜೊತೆಗೆ ಸಂಕಲವನ್ನ ಮಾಡಿರೋ ಅಶೋಕ್ ಚೊಚ್ಚಲ ಚಿತ್ರವನ್ನ ವಿನೂತನವಾಗಿ ತೆರೆಗೆ ತರೋ ಸನ್ನಾಹದಲ್ಲಿದ್ದಾರೆ. ನಾಯಕನಾಗಿ ಭರತ್ ಮತ್ತು ಸೌಮ್ಯ ನಾಯಕ ನಾಯಕಿಯರಾಗಿ ನಟಿಸಿದ್ದಾರೆ.
'ಅವನಿರಬೇಕಿತ್ತು' ಸ್ಯಾಂಡಲ್ವುಡ್ ಅಂಗಳದಲ್ಲಿ ಸದ್ದಿಲ್ಲದೇ ಮತ್ತೊಂದು ಹೊಸ ತಂಡ ಮಾಡಿರೋ ವಿಶಿಷ್ಠ ಪ್ರಯತ್ನ. ಕಲೋಕಿಯಲ್ ಟೈಟಲ್ ನ ಇಟ್ಟುಕೊಂಡು ಅಷ್ಟೇ ಟ್ರೆಂಡಿಯಾಗಿ ಸಿನಿಮಾ ಮಾಡೋ ಪ್ರಯತ್ನ ಮಾಡಿರೋ ಚಿತ್ರತಂಡ. ಇತ್ತೀಚೆಗಷ್ಟೇ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದೆ. ಅದಕ್ಕೆ ಈ ತಂಡ ಮಾಡಿರೋ ವಿನೂತನ ಕಾನ್ಪೆಪ್ಟ್ ಮತ್ತು ಬಳಸಿಕೊಂಡಿರೋ ಸ್ಟಾರ್ ಹೆಸರುಗಳು ಸದ್ದು ಸುದ್ದಿಗೆ ಸಾಕ್ಷಿಯಾಗಿದೆ.
ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ದರ್ಶನ್ ಹಾಗೂ ನ್ಯಾಷನಲ್ ಸ್ಟಾರ್, ರಾಕಿಂಗ್ ಸ್ಟಾರ್ ಯಶ್ ಅವರುಗಳ ಹೆಸರುಗಳನ್ನ ಬಳಸಿ ಮಾಡಿರೋ ಪ್ರಮೋಷನಲ್ ವಿಡಿಯೋ ಅಂಟ್ರ್ಟಾಕ್ವೀಟ್ ಆಗಿದೆ. ನೋವಿಕ ಸಿನಿ ಪ್ರೊಡಷನ್ಸ್ ಬ್ಯಾನರ್ ನಲ್ಲಿ ಮುರಳಿ ಬಿ.ಟಿ ರವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. "ಅವನಿರಬೇಕಿತ್ತು " ಚಿತ್ರದ 'first look posterನ unveiling video'ಝೇಂಕಾರ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ. ಆಗ್ಲೇ ಹೇಳಿದಂತೆ ಈ ವಿಡಿಯೋ ಸಖತ್ತಾಗೇ ಸದ್ದು ಸುದ್ದಿ ಮಾಡ್ತಿದೆ.
ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ನಟ-ರಾಜಕಾರಣಿ ನಿಖಿಲ್ ಕುಮಾರಸ್ವಾಮಿಗೆ ಆಹ್ವಾನ
ಅವನಿರಬೇಕಿತ್ತು ಚಿತ್ರವನ್ನ ಅಶೋಕ್ ಸಾಮ್ರಾಟ್ ನಿರ್ದೇಶಿಸಿದ್ದಾರೆ. ನಿರ್ದೇಶನದ ಜೊತೆಗೆ ಸಂಕಲವನ್ನ ಮಾಡಿರೋ ಅಶೋಕ್ ಚೊಚ್ಚಲ ಚಿತ್ರವನ್ನ ವಿನೂತನವಾಗಿ ತೆರೆಗೆ ತರೋ ಸನ್ನಾಹದಲ್ಲಿದ್ದಾರೆ. ನಾಯಕನಾಗಿ ಭರತ್ ಮತ್ತು ಸೌಮ್ಯ ನಾಯಕ ನಾಯಕಿಯರಾಗಿ ನಟಿಸಿದ್ದಾರೆ.ಈ ಹೊಸ ಮುಖಗಳ ಜೊತೆಗೆ ಚಿತ್ರದಲ್ಲಿ ಪ್ರಶಾಂತ್ ಸಿದ್ದಿ, ಕಿರಣ್ ಕುಮಾರ್, ಅಜಯ್ ಶರ್ಮ, ಹಿರಿಯ ಕಲಾವಿದರಾದ ಲಕ್ಷ್ಮೀ ದೇವಮ್ಮನವರು ನಟಿಸಿದ್ದಾರೆ.
ಅಡುಗೆ ಭಟ್ಟರಾದ್ರಾ ಪೃಥ್ವಿ ಅಂಬಾರ್, ದಿಯಾ ಗೆದ್ಮೆಲೂ ಯಾಕೆ ತಡ; ಗರಂ ಆಗಿದಾರಾ ಪ್ರೇಕ್ಷಕರು?!
ಚಿತ್ರಕ್ಕೆ ಹಂಸಲೇಖ ಶಿಷ್ಯ ಲೋಕಿ ತವಸ್ಯ ಸಂಗೀತ ಸಂಯೋಜಿಸಿದ್ದಾರೆ. ಪೃಥ್ವಿ ಮಾಲೂರು ಹಾಗೂ ದೇವರಾಜ್ ಪೂಜಾರಿ ಛಾಯಾಗ್ರಾಹಣ ಮಾಡಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಚಿತ್ರತಂಡ ಈ ಮೊದಲ ನೋಟದೊಂದಿಗೆ, ಒಂದೊಂದೇ ಹಾಡುಗಳನ್ನ ರಿಲೀಸ್ ಮಾಡೋ ಪ್ಲಾನ್ ನಲ್ಲಿದೆ. ಮ್ಯೂಸಿಕಲ್ ಲವ್ ಸಸ್ಪೆನ್ಸ್ ಥ್ರಿಲ್ಲರ್ ಅಂತ್ಲೇ ಹೇಳಲಾಗ್ತಿರೋ ಈ ಕಲರ್ ಫುಲ್ ಪ್ರೇಮಕಾವ್ಯವನ್ನ ಚಿತ್ರತಂಡ ಮಾರ್ಚ್ ತಿಂಗಳಲ್ಲಿ ಪ್ರೇಕ್ಷಕರೆದುರಿಗೆ ತರೋ ಕೆಲಸದಲ್ಲಿ ನಿರತವಾಗಿದೆ.