ಸಾಮಾನ್ಯವಾಗಿ ಹೆಚ್ಚು ಚಿಂತೆ ಮಾಡಿದರೆ ಜೀವನವೇ ವಿರಳವಾಗುತ್ತದೆ. ಕಡಿಮೆ ಚಿಂತೆ ಮಾಡಿದರೆ ಅದು ಜೀವನ ಸರಳವಾಗಿರುತ್ತದೆಂಬ ಸಂದೇಶ ಸಾರುವ ಕಥಾ ಹಂದರದ ಒಂದು ಸ(ವಿ)ರಳ ಪ್ರೇಮಕಥೆ ಫೆ.8ರಂದು ಮಲ್ಟಿಫ್ಲೆಕ್ಸ್ ಗಳಲ್ಲಿ, ಫೆ.9ರಂದು ಚಿತ್ರ ಮಂದಿರಗಳಲ್ಲಿ ತೆರೆಗೆ ಬರಲಿದೆ ಎಂದು ಚಿತ್ರದ ನಾಯಕ ನಟ ವಿನಯ್ ರಾಜಕುಮಾರ್ ತಿಳಿಸಿದರು.
ದಾವಣಗೆರೆ (ಜ.29): ಸಾಮಾನ್ಯವಾಗಿ ಹೆಚ್ಚು ಚಿಂತೆ ಮಾಡಿದರೆ ಜೀವನವೇ ವಿರಳವಾಗುತ್ತದೆ. ಕಡಿಮೆ ಚಿಂತೆ ಮಾಡಿದರೆ ಅದು ಜೀವನ ಸರಳವಾಗಿರುತ್ತದೆಂಬ ಸಂದೇಶ ಸಾರುವ ಕಥಾ ಹಂದರದ ಒಂದು ಸ(ವಿ)ರಳ ಪ್ರೇಮಕಥೆ ಫೆ.8ರಂದು ಮಲ್ಟಿಫ್ಲೆಕ್ಸ್ ಗಳಲ್ಲಿ, ಫೆ.9ರಂದು ಚಿತ್ರ ಮಂದಿರಗಳಲ್ಲಿ ತೆರೆಗೆ ಬರಲಿದೆ ಎಂದು ಚಿತ್ರದ ನಾಯಕ ನಟ ವಿನಯ್ ರಾಜಕುಮಾರ್ ತಿಳಿಸಿದರು.
ನಗರದ ಪಿಜೆ ಬಡಾವಣೆಯ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಮೆನ್ಸ್ ಮಳಿಗೆಯಲ್ಲಿ ಶನಿವಾರ ತಮ್ಮ ಅಭಿನಯದ ಸಿನಿಮಾದ ಕುರಿತು ಮಾತನಾಡಿ ಮೂರು ವರ್ಷದ ನಂತರ ಮೊದಲ ಬಾರಿ ರೊಮ್ಯಾನ್ಸ್ ಕಾಮಿಡಿ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಚಿಕ್ಕಪ್ಪ ದಿ.ಪುನೀತ್ ರಾಜಕುಮಾರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಚಿಕ್ಕಪ್ಪ ನಮ್ಮೊಂದಿಗೆ ಭೌತಿಕವಾಗಿಲ್ಲವೆಂಬ ನೋವು ಇದ್ದೇ ಇದೆ. ಒಂದು ಸ(ವಿ)ರಳ ಪ್ರೇಮಕಥೆ ಸಿನಿಮಾ ನಾಲ್ಕನೇ ಸಿನಿಮಾ ಎಂದರು.
ಬಿಗ್‌ಬಾಸ್ ಕನ್ನಡ 10 ವಿನ್ನರ್ ಕಾರ್ತಿಕ್ ಮಹೇಶ್: ನಾಯಕತ್ವದ ಗುಣವಿದ್ದ ಅವರ ಪಯಣ ಹೇಗಿತ್ತು ಗೊತ್ತಾ?
ವಿನಯ್ ಸಂಗೀತ ಕಲಾ ಪ್ರಕಾರಗಳ ಕಲಿತರು: ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ದಾವಣಗೆರೆ ಜನರ ಅಭಿಮಾನಕ್ಕೆ ತಾವೆಲ್ಲರೂ ಸದಾ ಚಿರಋಣಿಯಾಗಿದ್ದೇವೆ. ಒಂದು ಸ(ವಿ)ರಳ ಪ್ರೇಮಕಥೆ ಚಲನಚಿತ್ರ ಪ್ರೇಮಕಥೆ ಆಧಾರಿತ ಹಾಗೂ ಕೌಟುಂಬಿಕ ಸಿನಿಮಾ. ಸಾಕಷ್ಟು ಏಳುಬೀಳುಗಳ ಮಧ್ಯೆ ಸಾಗುವ ಮ್ಯೂಸಿಕಲ್ ಸ್ಟೋರಿ ಇದೆ. ಸಿನಿಮಾದ ನಾಯಕ ನಟ ಸಂಗೀತ ಪ್ರೇಮಿಯಾಗಿ ಅಭಿನಯಿಸಿದ್ದಾರೆ. ಚಿತ್ರಕ್ಕಾಗಿ ವಿನಯ್ ಪಿಯಾನೋ ಸೇರಿ ಹಲವು ಸಂಗೀತ ಕಲಾ ಪ್ರಕಾರಗಳ ಕಲಿತರು. ಮಲ್ಲಿಕಾ ಸಿಂಗ್ ನಾಯಕಿಯಾಗಿದ್ದಾರೆ. ಹಿರಿಯ ಕಲಾವಿದರಾದ ಸಾಧು ಕೋಕಿಲ, ರಾಜೇಶ, ಅರುಣಾ ಬಾಲರಾಜ, ಶ್ಯಾಂ ಮಂಜು, ಸ್ವಾದಿಷ್ಟ, ಕಾರ್ತಿಕ್ ಸೇರಿ ಹಿರಿಯರು ಅಭಿನಯಿಸಿದ್ದಾರೆ ಎಂದು ಹೇಳಿದರು.
ಅರ್ಮಾನ್ ಮಲ್ಲಿಕ್, ಕೇಶವ್ ನಂದ, ಪಂಚಮ್ ಜೀವ, ಸರಿಗಮಪದಲ್ಲಿ ಜನಮನ ಗೆದ್ದ ಗಾಯಕಿ ಶಿವಾನಿ ಕಂಠಸಿರಿ ಚಿತ್ರದಲ್ಲಿದೆ. ಮೈಸೂರು ರಮೇಶ ಚಿತ್ರ ನಿರ್ಮಿಸಿದ್ದಾರೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದೆ. ರಾಜ್ಯದ ಜನತೆ ಚಿತ್ರ ಮಂದಿರದಲ್ಲಿ, ಮಲ್ಟಿಫ್ಲೆಕ್ಸ್ ಗಳಲ್ಲಿ ಸಿನಿಮಾವನ್ನು ನೋಡಿ, ತಮ್ಮ ತಂಡಕ್ಕೆ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಬಿಎಸ್ ಚನ್ನಬಸಪ್ಪ ಅಂಡ್ ಸನ್ಸ್‌ನ ಮೆನ್ಸ್ ಶಾಪ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕ ಮೈಸೂರು ರಮೇಶ, ಶ್ಯಾಂ ಮಂಜು, ಬಿಎಸ್ಸಿ ಅಂಡ್ ಸನ್ಸ್ ಮಾಲೀಕರಾದ ಬಿ.ಸಿ.ಶಿವಕುಮಾರ, ಮೃಣಾಲ್ ಇತರರಿದ್ದರು. ಇದಕ್ಕೂ ಮುನ್ನ ಬಿಎಸ್ ಚನ್ನಬಸಪ್ಪ ಅಂಡ್ ಮುಂಭಾಗದಲ್ಲಿ ವಿನಯ್ ರಾಜಕುಮಾರ ಮತ್ತು ಚಿತ್ರ ತಂಡ ತಮ್ಮ ಸಿಮಾನದ ಕುರಿತು ಪ್ರಚಾರ ನಡೆಸಿತು. ವಿನಯ್ ರಾಜಕುಮಾರ ತಮ್ಮ ಚಿಕ್ಕಪ್ಪ, ಪವರ್ ಸ್ಟಾರ್ ದಿವಂಗತ ಪುನೀತ್ ರಾಜಕುಮಾರ್ ಅಭಿನಯದ ಅಭಿಮಾನಿಗಳೇ ನಮ್ಮನೆ ದೇವ್ರು ಹಾಡಿಗೆ ಹೆಜ್ಜೆ ಹಾಕಿ, ಜನರ ಪ್ರಶಂಸೆಗೆ ಪಾತ್ರರಾದರು.
ಅವಮಾನ-ಆಕ್ರೋಶಕ್ಕೆ ಯಶಸ್ಸಿನ ಉತ್ತರ: ಬಿಗ್‌ಬಾಸ್ ಕನ್ನಡ ಸೀಸನ್ 10 ರನ್ನರ್ ಅಪ್ ಡ್ರೋನ್ ಪ್ರತಾಪ್
ಮೂರು ಸಿನಿಮಾ ಪ್ರಾಜೆಕ್ಟ್ ಕೈಯಲ್ಲಿದೆ: ಹೊಸ ಸಿನಿಮಾ ಒಂದು ಸ(ವಿ)ರಳ ಪ್ರೇಮಕಥೆಗೆ ದಾವಣಗೆರೆ ಸೇರಿ ರಾಜ್ಯಾದ್ಯಂತ ಪ್ರೇಕ್ಷಕರು ಸಿನಿಮಾ ನೋಡಿ, ತಮ್ಮ ತಂಡವನ್ನು ಪ್ರೋತ್ಸಾಹಿಸುತ್ತಾರೆಂಬ ವಿಶ್ವಾಸವಿದೆ. ಇನ್ನೂ ಮೂರು ಸಿನಿಮಾ ಪ್ರಾಜೆಕ್ಟ್ ಗಳು ತಮ್ಮ ಕೈಯಲ್ಲಿವೆ. ಪೌರಾಣಿಕ ಸಿನಿಮಾಗಳಲ್ಲಿ ಅಭಿನಯಿಸುವ ಆಸೆ ತಮಗೂ ಇದೆ. ಮುಂದಿನ ದಿನಗಳಲ್ಲಿ ಉತ್ತಮ ಕಥೆ ಸಿಕ್ಕರೆ ಖಂಡಿತಾ ನಟಿಸುತ್ತೇನೆ.