ಸ್ಯಾಂಡಲ್‌ವುಡ್‌ನಲ್ಲಿ ಈ ನಟಿ ಮಾಡಿದ್ದು ಒಂದೇ ಸಿನಿಮಾ. ಆದರೆ, ಪ್ರೇಕ್ಷಕರ ಮನಸ್ಸಿನಲ್ಲಿ ಎಂದೂ ಮರೆಯಲಾಗದ ಛಾಪನ್ನು ಒತ್ತಿಬಿಟ್ಟಿದ್ದಾರೆ ಈ ನಟಿ. ಮಲಯಾಳಂ ಮೂಲದ ಈ ನಟಿ ನಟ ರವಿಚಂದ್ರನ್ ಸಿನಿಮಾದಲ್ಲಿ ಅಭಿನಯಿಸಿದ್ದರು.
ಸ್ಯಾಂಡಲ್‌ವುಡ್‌ನಲ್ಲಿ ಈ ನಟಿ ಮಾಡಿದ್ದು ಒಂದೇ ಸಿನಿಮಾ. ಆದರೆ, ಪ್ರೇಕ್ಷಕರ ಮನಸ್ಸಿನಲ್ಲಿ ಎಂದೂ ಮರೆಯಲಾಗದ ಛಾಪನ್ನು ಒತ್ತಿಬಿಟ್ಟಿದ್ದಾರೆ ಈ ನಟಿ. ಮಲಯಾಳಂ ಮೂಲದ ಈ ನಟಿ ನಟ ರವಿಚಂದ್ರನ್ ಸಿನಿಮಾದಲ್ಲಿ ಅಭಿನಯಿಸಿದ್ದರು. ಆ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಅವರು 'ಸೂರ್ಯಾ, ಓ ಸೂರ್ಯಾ..' ಎಂದು ಗಂಟಲು ಹರಿದುಹೋಗುವಂತೆ ಕೂಗುತ್ತಿದ್ದರೆ ಥಿಯೇಟರ್‌ನಲ್ಲಿ ಕುಳಿತಿದ್ದವರ ಕಣ್ಣಂಚಲ್ಲಿ ನೀರು ಧಾರೆಯಾಗಿ ಸುರಿಯುತ್ತಿತ್ತು. ನಟಿಯ ಅಭಿನಯ ಕೂಡ ಮನಮುಟ್ಟುವಂತಿತ್ತು.
ನಿಮಗೀಗ ಅರ್ಥವಾಗಿರಬಹುದು. ಇಲ್ಲಿ ಹೇಳಹೊರಟಿರುವುದು ನಟಿ ಸಂಗೀತಾ (Sangeetha) ಬಗ್ಗೆ. 1998ರಲ್ಲಿ ತೆರೆಗೆ ಬಂದಿದ್ದ 'ಯಾರೇ ನೀನು ಚೆಲುವೆ' ಚಿತ್ರದ ನಾಯಕಿಯಾಗಿ ಈ ಮಲಯಾಳಂ ನಟಿ ಸಂಗೀತಾ ನಟಿಸಿ ಸ್ಯಾಂಡಲ್‌ವುಡ್ ಪ್ರೇಕ್ಷಕರಿಂದ ಸೈ ಮಾತ್ರವಲ್ಲ ಜೈ ಕೂಡ ಎನಿಸಿಕೊಂಡಿದ್ದರು. ಕ್ಲೈಮ್ಯಾಕ್ಸ್ ಸೀನ್‌ನಲ್ಲಂತೂ ನಟಿ ಸಂಗೀತಾ ನೀಡಿದ ಅತ್ಯಮೋಘ ಅಭಿನಯಕ್ಕೆ ಸೆಲ್ಯೂಟ್ ಹೊಡೆದವರು ಅದೆಷ್ಟೋ ಮಂದಿ.
ಆದರೆ, ಯಾರೇ ನೀನು ಚೆಲುವೆ (Yare Ninu Cheluve)ಬಳಿಕ ನಟಿ ಸಂಗೀತಾ ಮತ್ತೆ ಕನ್ನಡದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಅವರಿಗೆ ಮಲಯಾಳಂ ಹಾಗೂ ತಮಿಳು ಚಿತ್ರರಂಗಗಳಿಂದ ಬಹಳಷ್ಟು ಆಫರ್ ಬರುತ್ತಿತ್ತು. ಅವರು ಅದನ್ನೇ ಮಾಡಿಕೊಂಡು ಹಾಯಾಗಿ ಇದ್ದಬಿಟ್ಟಿದ್ದರು. ಬಳಿಕ ಸಂಗೀತಾ ತಮಿಳು ಚಿತ್ರರಂಗದ ಡೈರೆಕ್ಟರ್ ಹಾಗೂ ಕ್ಯಾಮೆರಾಮ್ಯಾನ್ ಶರವಣ ಅವರನ್ನು ಮದುವೆಯಾಗಿದ್ದಾರೆ. ಚಿತ್ರರಂಗದಲ್ಲಿ ಅವರೀಗ ಅಸಿಷ್ಟಂಟ್ ಕ್ಯಾಮೆರಾವುಮೆನ್ ಆಗಿ ಸಕ್ರಿಯರಾಗಿದ್ದಾರೆ ಎನ್ನಲಾಗಿದೆ.
ಸದ್ಗುರುಗಳಿಂದ ದೀಕ್ಷೆ ಪಡೆದ ನಟಿ ತಮನ್ನಾ ಭಾಟಿಯಾ ಈಗೇನ್ ಮಾಡ್ತಿದಾರೆ, ಅವ್ರೇ ಹೇಳ್ತಾರೆ ಕೇಳಿ!
ಯಾರೇ ನೀನು ಚೆಲುವೆ ಚಿತ್ರದಲ್ಲಿ ಅಭಿನಯದ ಜತೆಗೆ ತಮ್ಮ ಅನುಪಮ ಸೌಂದರ್ಯದಿಂದಲೂ ಪ್ರೇಕ್ಷಕರಿಗೆ ಇಷ್ಟವಾಗಿದ್ದರು ಸಂಗೀತಾ. ಮತ್ತೆ ಮತ್ತೆ ಅವರನ್ನು ಕನ್ನಡ ಚಿತ್ರಗಳಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದವರು ಅದೆಷ್ಟೋ ಮಂದಿ. ಆದರೆ, ಸಂಗೀತಾ ಮತ್ತೆ ನಟಿಸಲಿಲ್ಲ, ಪ್ರೇಕ್ಷಕರು ಅದೇ ಸಿನಿಮಾವನ್ನುಮತ್ತೆ ಮತ್ತೆ ನೋಡಿ ಖುಷಿಪಟ್ಟುಕೊಂಡರು. ಇಂತ ನಟಿ ಸಂಗೀತಾ ಈಗ ಕೇರಳಲದಲ್ಲೇ ಸೆಟ್ಲ್ ಆಗಿದ್ದಾರೆ ಎಂಬ ಸುದ್ದಿಯಿದೆ. ಅಂತೂ ಆಕೆ ಸಿನಿಮಾದಲ್ಲಿ ಈಗ ನಟಿಸುತ್ತಿಲ್ಲ.
ಮತ್ತೊಂದು ಮದುವೆಗೆ ರೆಡಿಯಾದ್ರಾ ವರ್ತೂರು ಸಂತೋಷ್; ತನಿಷಾ ಅಲ್ವಂತೆ, ಮತ್ಯಾರು ಸಂತು ಸಂಗಾತಿ...!?
ಆಗಿನ ಸಂಗೀತಾ ಫೋಟೋಗೂ ಈಗಿನ ಸಂಗೀತಾರ ಫೋಟೋಕ್ಕೂ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸ ಕಾಣಿಸುತ್ತದೆ. ಸೌಂದರ್ಯದ ಗಣಿಯಂತಿದ್ದ ಅಂದಿನ ಸಂಗೀತ ಇಂದು ವಯಸ್ಸಿಗೆ ಸಹಜವಾಗಿ ಮದುಡಿದ್ದಾರೆ. ಯಾರೂ ಕೂಡ ಎಂದೆಂದೂ ಚೆಂದವಾಗಿರಲು ಸಾಧ್ಯವಿಲ್ಲ ಎಂಬ ಸತ್ಯಕ್ಕೆ ಸಾಕ್ಷಿಯಾಗಿದ್ದಾರೆ. ಒಟ್ಟಿನಲ್ಲಿ, ಸಂಗೀತಾ ದರ್ಶನ ಕೊಟ್ಟ 25 ವರ್ಷಗಳ ಬಳಿಕವೂ ಆಕೆಯನ್ನು ಕನ್ನಡಿಗರು ಮರೆತಿಲ್ಲ, ಮರೆಯಲು ಸಾಧ್ಯವೂ ಇಲ್ಲ ಬಿಡಿ!
ಅಮ್ರತಂ ಜತೆ ಮದ್ವೆಯಾಗಿದ್ದ ಮಂಜುಳಾ ಮೈಗೆ ಬೆಂಕಿ-ಸಾವು; ಚಾಮರಾಜನಗರ ಹುಡುಗ ಮರುಮದ್ವೆಗೆ ಒಪ್ಪಿರಲಿಲ್ವಾ?!