
ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಎಂದೇ ಫೇಮಸ್ ಆಗಿರುವ ಧ್ರುವ ಸರ್ಜಾ (Dhruva Sarja) ಆಂಜನೇಯನ ಭಕ್ತ ಎನ್ನುವುದು ಅಭಿಮಾನಿಗಳಿಗೆ ತಿಳಿದರುವ ವಿಷಯ. ಆಗ್ಗಾಗ್ಗೆ ಹನುಮಾನ ದೇಗುಲಗಳಿಗೆ ಭೇಟಿ ಕೊಟ್ಟು ವಿಶೇಷ ಪೂಜೆಯನ್ನೂ ನೆರವೇರಿಸುತ್ತಿರುತ್ತಾರೆ. 24 ನವೆಂಬರ್ 2019ರಂದು ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್ ಮದುವೆಯಾಗಿದ್ದರು. ಮದುವೆಯಾಗಿ ಮೂರು ವರ್ಷಗಳ ನಂತರ, ಅಂದರೆ 2022ರ ಅಕ್ಟೋಬರ್ 2 ರಂದು ಪ್ರೇರಣಾ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದಾದ ಬಳಿಕ ಕಳೆದ ಸಪ್ಟೆಂಬರ್ 18ರಂದು ಎರಡನೆಯ ಮಗುವಿನ ಪಾಲಕರಾಗಿದ್ದಾರೆ ಧ್ರುವ ಮತ್ತು ಪ್ರೇರಣಾ. ಇದೀಗ ಎರಡೂ ಮಕ್ಕಳ ಲಾಲನೆ ಪಾಲನೆಯಲ್ಲಿದ್ದಾರೆ ಪ್ರೇರಣಾ. ಆಗಾಗ್ಗೆ ಮಗಳ ಕ್ಯೂಟ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಎರಡನೆಯ ಮಗು ಹುಟ್ಟಿದರೂ ಮೊದಲ ಮಗಳ ಹೆಸರನ್ನು ಇವರು ರಿವೀಲ್ ಮಾಡಿರಲಿಲ್ಲ.
ಆದರೆ ಈಚೆಗಷ್ಟೇ ಅಂದರೆ, ಜನವರಿ 22 ರಂದು ತಮ್ಮ ಇಬ್ಬರು ಮಕ್ಕಳಿಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದು, ಕಾರ್ಯಕ್ರಮದಲ್ಲಿ ಬಂಧುಗಳು ಮತ್ತು ಸಿನಿಮಾ ತಾರೆಯರು ಆಗಮಿಸಿದ್ದರು. ಧ್ರುವ ಸರ್ಜಾ ಮತ್ತು ಪ್ರೇರಣಾ (Prerana) ದಂಪತಿ ಮಕ್ಕಳಿಗೆ ದೇವರ ಹೆಸರನ್ನಿಡುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದರು. ಮಗಳಿಗೆ ರುದ್ರಾಕ್ಷಿ ಮತ್ತು ಮಗನಿಗೆ ಹಯಗ್ರೀವ ಎಂದು ನಾಮಕರಣ ಮಾಡಿದ್ದಾರೆ. ಅಷ್ಟಕ್ಕೂ ಹನುಮ ಭಕ್ತನಾಗಿರುವ ಧ್ರುವ ಸರ್ಜಾ ಅವರು ಮಕ್ಕಳ ನಾಮಕರಣಕ್ಕೆ ಜನವರಿ 22 ಆಯ್ಕೆ ಮಾಡಿಕೊಳ್ಳುವ ಹಿಂದೆಯೂ ಬಹುದೊಡ್ಡ ಉದ್ದೇಶವೇ ಇದೆ. ಅದು ಎಲ್ಲರಿಗೂ ತಿಳಿದಿರುವಂತೆ ಅಯೋಧ್ಯೆಯಲ್ಲಿ ಅಂದು ಬಾಲರಾಮನ ಪ್ರಾಣಪ್ರತಿಷ್ಠಾಪನೆ ನಡೆದಿತ್ತು. ಅದೇ ದಿನ ಹನುಮ ಭಕ್ತ ಧ್ರುವ ಮಕ್ಕಳಿಗೆ ನಾಮಕರಣ ನೆರವೇರಿಸಿದ್ದಾರೆ. ಧ್ರುವ ಸರ್ಜಾ ಮಕ್ಕಳ ನಾಮಕರಣವನ್ನು ಮಾವ ಅರ್ಜುನ್ ಸರ್ಜಾ ಮುಂದೆ ನಿಂತು ನಡೆಸಿಕೊಟ್ಟಿದ್ದಾರೆ.
ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಹರಿಪ್ರಿಯಾ-ವಸಿಷ್ಠ: ನಾಯಿಮರಿಯಿಂದ ಶುರುವಾದ ಲವ್ಸ್ಟೋರಿ!
ಮಕ್ಕಳಿಗೆ ಯಾವುದೇ ಫ್ಯಾನ್ಸಿ ಹೆಸರು ಇಡಬಾರದು, ಜೊತೆಗೆ ಒತ್ತಕ್ಷರ ಇರುವಂತಹ ಹೆಸರು ಇಟ್ಟರೆ ಒಳ್ಳೆಯದು ಎನ್ನುವ ಕಾರಣಕ್ಕೆ ಮಕ್ಕಳಿಗೆ ರುದ್ರಾಕ್ಷಿ (Rudrakshi) ಮತ್ತು ಹಯಗ್ರೀವ (Hayagreeva) ಎನ್ನುವ ದೇವರಿಗೆ ಸಂಬಂಧಿಸಿದ ಹೆಸರನ್ನು ಇಡಲಾಗಿದೆ ಎಂದಿದ್ದರು. ನಾಮಕರಣದ ಹಿನ್ನೆಲೆಯಲ್ಲಿ ಫೋಟೋ ಮಕ್ಕಳ ಜೊತೆ ಫೋಟೋ ಶೂಟ್ (Photoshoot) ಮಾಡಿಸಿಕೊಂಡಿರುವ ಧ್ರುವ ಸರ್ಜಾ ದಂಪತಿಗಳು, ಅವುಗಳ ವಿಡಿಯೋ ಮಾಡಿ ಮಕ್ಕಳ ಹೆಸರುಗಳನ್ನು ರಿವೀಲ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದಕ್ಕೂ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿತ್ತು.
ಇದೀಗ ಕುಟುಂಬ ಸಹಿತರಾಗಿ ಹನುಮನ ಪೂಜೆ ನೆರವೇರಿಸಿರುವ ವಿಶೇಷ ವಿಡಿಯೋ ಒಂದನ್ನು ಧ್ರುವ ಅವರು ಶೇರ್ ಮಾಡಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಮತ್ತೆ ನಟನನ್ನು ಅಭಿನಂದಿಸುತ್ತಿದ್ದಾರೆ. ಸನಾತನ ಧರ್ಮ ಪಾಲಿಸುತ್ತಿರುವ ನಿಮಗೆ ನಮೋ ನಮಃ ಎನ್ನುತ್ತಿದ್ದಾರೆ. ಈ ವೈರಲ್ ವಿಡಿಯೋದಲ್ಲಿ ಧ್ರುವ, ಪ್ರೇರಣಾ ಜೊತೆ ಇಬ್ಬರು ಮಕ್ಕಳನ್ನು ಕೂಡ ನೋಡಬಹುದಾಗಿದೆ. ಹನುಮನ ಮೂರ್ತಿಯನ್ನು ತಂದು, ಅದಕ್ಕೆ ಪೂಜೆ ಸಲ್ಲಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ನ್ಯೂಯಾರ್ಕ್ ಟೈಂಸ್ಕ್ವೇರ್ನಲ್ಲಿ ಅಪ್ಪು ಜೊತೆ ಅನು... ಹುಟ್ಟುಹಬ್ಬಕ್ಕೆ ಮರೆಯಲಾಗದ ಗಿಫ್ಟ್: ನಟಿ ಹೇಳಿದ್ದೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.