ಸದ್ಯ ಒಂಟಿ ಪಾಲಕರಾಗಿ ಮಗ ಶೌರ್ಯನನ್ನು ನೋಡಿಕೊಳ್ಳುತ್ತಿರುವ ನಟ ವಿಜಯ ರಾಘವೇಂದ್ರ ಅವರು, ಮಗನ ಕುರಿತು ಬಿಗ್ ಅಪ್ಡೇಟ್ ನೀಡಿದ್ದಾರೆ. ಏನದು?
ನಟ ವಿಜಯ ರಾಘವೇಂದ್ರ ಅವರು ಪತ್ನಿ ಸ್ಪಂದನಾ ಅವರನ್ನು ಅಗಲಿ, ಒಂದೂವರೆ ವರ್ಷಗಳಾಗಿವೆ. ಸದ್ಯ ವಿಜಯ ರಾಘವೇಂದ್ರ ಅವರು ಒಂಟಿಯಾಗಿ ಮಗನನ್ನು ಸಾಕುತ್ತಿದ್ದಾರೆ. ಸದ್ಯ ಮಗನ ಪಾಲಿಗೆ ಅಪ್ಪ- ಅಮ್ಮ ಎಲ್ಲವೂ ಅವರೇ. ಅಷ್ಟಕ್ಕೂ ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರೂ, ಗಣ್ಯರು, ಸೆಲೆಬ್ರಿಟಿಗಳೇ ಆಗಿದ್ದರೂ ಮಕ್ಕಳ ಪಾಲಿಗೆ ಅವರು ಕೇವಲ ಅಪ್ಪ- ಅಮ್ಮ ಅಷ್ಟೇ. ಮನೆಯಲ್ಲಿ ಕಾಲಿಗೊಬ್ಬ, ಕೈಗೊಬ್ಬ ಆಳು-ಕಾಳುಗಳು ಇದ್ದರೂ ಬಹುತೇಕ ಗಣ್ಯರು ಕೂಡ ತಮ್ಮ ಮಕ್ಕಳಿಗಾಗಿ ವೈಕ್ತಿಗತ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಆ ಕ್ಷಣದಲ್ಲಿ ಅಪ್ಪ-ಅಮ್ಮನ ಪಾತ್ರ ನಿಭಾಯಿಸುತ್ತಾರೆ. ಅದೇ ರೀತಿ ವಿಜಯ ರಾಘವೇಂದ್ರ ಅವರು ತಮ್ಮ ಸಿನಿಮಾ ಲೈಫ್ ನಡುವೆಯೇ ಮಗನ ಓದಿನ ಬಗ್ಗೆ ಸಾಕಷ್ಟು ಸಮಯವನ್ನು ಮೀಸಲು ಇರಿಸುತ್ತಿದ್ದಾರೆ.
ಹೇಳಿ-ಕೇಳಿ ಇರುವ ಪರೀಕ್ಷೆಯ ಸಮಯ.ಇಂಥ ಸಮಯದಲ್ಲಿ ಮಕ್ಕಳಿಗೆ ಅಪ್ಪ-ಅಮ್ಮನ ಆರೈಕೆ, ಹಾರೈಕೆಯ ಅವಶ್ಯಕತೆ ಇರುತ್ತದೆ. ಮಕ್ಕಳಿಗೆ ಪರೀಕ್ಷೆ ಎಂದರೆ ಅದು ಒಂದರ್ಥದಲ್ಲಿ ಅಪ್ಪ- ಅಮ್ಮಂದಿರಿಗೂ ಪರೀಕ್ಷೆಯೇ ಇದ್ದಂತೆ. ಮಕ್ಕಳ ಜೊತೆ ಹೆಚ್ಚಾಗಿ ಅಮ್ಮಂದಿರು ನಿದ್ದೆಗೆಟ್ಟು ಕುಳಿತುಕೊಳ್ಳುವುದು ಇದೆ. ಕೆಲ ದಿನಗಳ ಹಿಂದೆ ಪರೀಕ್ಷೆ ಶುರುವಾದಾಗ, ವಿಜಯ ರಾಘವೇಂದ್ರ ಅವರೂ ನಿದ್ದೆಗೆಟ್ಟು ಒಂದು ವಿಡಿಯೋ ಮಾಡಿ ಅದನ್ನು ಅಪ್ಲೋಡ್ ಮಾಡಿದ್ದರು. ಅವರು ಅದರಲ್ಲಿ ನಿದ್ದೆಗೆಟ್ಟು ಕಾಯುತ್ತಿರುವುದನ್ನು ನೋಡಬಹುದಾಗಿತ್ತು. ಪರೀಕ್ಷೆಯ ಸಮಯ ಎಂದು ಅ ಅವರು ಶೀರ್ಷಿಕೆ ಕೊಟ್ಟಿದ್ದರು. ಮಗನಿಗಾಗಿ ಅಪ್ಪ ರಾತ್ರಿ ಜಾಗರಣೆ ಮಾಡುತ್ತಿದ್ದುದು ಇದರಿಂದ ತಿಳಿಯುತ್ತದೆ.
ಮಗನಿಗಾಗಿ ರಾತ್ರಿಯಿಡೀ ನಿದ್ದೆಗೆಟ್ಟ ನಟ ವಿಜಯ ರಾಘವೇಂದ್ರ: ವಿಧಿಯ ಆಟಕ್ಕೆ ಅಭಿಮಾನಿಗಳ ಕಂಬನಿ
ಆದರೆ ಇದೀಗ, ನಟ, ಪರೀಕ್ಷೆಗೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ನೀಡಿದ್ದಾರೆ. ಸದ್ಯ ಮಗನ ಪರೀಕ್ಷೆ ಮುಗಿದಿರುವುದಾಗಿ ಹೇಳಿದ್ದಾರೆ. EXAM ಇವತ್ತು ಮುಗೀತು! ಅಮ್ಮನ ಬೆಳಕಿನಲ್ಲಿ ಬೆಳಗು ಕಂದ ಎಂದು ಅವರು ಶೀರ್ಷಿಕೆ ಕೊಟ್ಟಿದ್ದಾರೆ. ಹಿಂದೆ ಪತ್ನಿ ಸ್ಪಂದನಾ ಅವರ ಫೋಟೋ ಇದರಲ್ಲಿ ನೋಡಬಹುದಾಗಿದೆ. ಮಕ್ಕಳ ಪರೀಕ್ಷೆ ಮುಗಿದಾಗ ಅಪ್ಪ-ಅಮ್ಮಂದಿರಿಗೂ ಏನೋ ದೊಡ್ಡದೊಂದು ತಲೆಬಿಸಿ ಮುಗಿದ ಅನುಭವ. ಏನೋ ಭಾರ ಕಳೆದುಕೊಂಡಂತೆ ಭಾಸವಾಗುವುದು ಸಹಜ. ಅದೇ ರೀತಿ ವಿಜಯ ರಾಘವೇಂದ್ರ ಅವರಿಗೂ ಆಗಿದ್ದು, ಪರೀಕ್ಷೆ ಮುಗಿದಿರುವುದಾಗಿ ಹೇಳಿದ್ದಾರೆ. ಇದರಿಂದ ಖುಷಿಯನ್ನು ಹಂಚಿಕೊಂಡಿದ್ದಾರೆ.
ಅಂದಹಾಗೆ ವಿಜಯ ರಾಘವೇಂದ್ರ ಮತ್ತು ಸ್ಪಂದನಾ 2007ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮಗ ಶೌರ್ಯನಿಗೆ ಪಾಲಕರಾಗಿದ್ದಾರೆ. ಅದರೆ ಸ್ಪಂದನಾ ಅವರು 2023ರಲ್ಲಿ ಎಲ್ಲರನ್ನೂ ಬಿಟ್ಟು ಅಗಲಿದರು. ಇದೀಗ ಮಗನಿಗಾಗಿ ಜೀವನವನ್ನು ಮುಡುಪಾಗಿಟ್ಟಿದ್ದಾರೆ ವಿಜಯ್ ಅವರು. ಮಗನ ಪರೀಕ್ಷೆಯ ಸಂದರ್ಭದಲ್ಲಿ ವಿಜಯ್ ರಾಘವೇಂದ್ರ ಜೊತೆ ಪತ್ನಿ ಸ್ಪಂದನಾ ಕೂಡ ಹೀಗೆ ಕಾಳಜಿ ತೋರುತ್ತಿದ್ದರು. ವಿಧಿಯ ಆಟದ ಮುಂದೆ ಏನು ಹೇಳಬೇಕು ಎಂದು ಅಭಿಮಾನಿಗಳು ವಿಜಯ್ ಅವರ ವಿಡಿಯೋಗೆ ಕಮೆಂಟ್ ಮೂಲಕ ಕಂಬನಿ ಮಿಡಿಯುತ್ತಿದ್ದಾರೆ. ಮಗ ಶೌರ್ಯನಿಗೆ ಉಜ್ವಲ ಭವಿಷ್ಯ ಸಿಗಲಿ ಎಂದು ಹಾರೈಸುತ್ತಿದ್ದಾರೆ. ಆತ ಕೂಡ ಅಪ್ಪನಂತೆ ಸಿನಿಮಾದಲ್ಲಿ ಮಿಂಚಲಿ ಎನ್ನುವುದು ಅಭಿಮಾನಿಗಳ ಹಾರೈಕೆ.
ಮದುವೆಯ ಬಿಗ್ ಅಪ್ಡೇಟ್ ಕೊಟ್ಟ ಬಿಗ್ಬಾಸ್ ಐಶ್ವರ್ಯಾ ಸಿಂಧೋಗಿ: ಹುಡುಗನ ಡಿಟೇಲ್ಸ್ ಹೇಳಿದ್ದು ಹೀಗೆ...