
ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ಸದ್ಯ ಯುಐ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ರಿಯಲ್ ಸ್ಟಾರ್ ಕುಟುಂಬದಿಂದ ಪುತ್ರ ಆಯುಷ್ ಬಣ್ಣದ ಪ್ರಪಂಚಕ್ಕೆ ಎಂಟ್ರಿ ಕೊಡಲು ಮನಸ್ಸು ಮಾಡಿದ್ದಾರೆ. ಒಬ್ಬ ನಟನಾಗಲು ಅಗತ್ಯವಿರುವ ತರಬೇತಿಗಳನ್ನು ಆಯುಷ್ ಪಡೆಯುತ್ತಿದ್ದಾನೆ ಇದರ ಬಗ್ಗೆ ಪ್ರಶ್ನೆ ಮಾಡಿದಾಗ ಆಯುಷ್ ಕೊಟ್ಟ ಉತ್ತರ ಸಖತ್ ವೈರಲ್ ಆಗಿತ್ತು. ಈ ವಿಡಿಯೋ ನೋಡಿ ಉಪ್ಪಿ ಏನ್ ಹೇಳ್ತಾರೆ ಅನ್ನೋದು ಸಿನಿ ರಸಿಕರ ಪ್ರಶ್ನೆ ಆಗಿತ್ತು ಈಗ ಉತ್ತರ ಸಿಕ್ಕಿದೆ...
ಆಯುಷ್ ಉಪೇಂದ್ರ ಮಾತು:
'ನನ್ನ ಜೀವನದ ಫಿಲಾಸಫಿ ಇಷ್ಟೇ...ಪ್ರಪಂಚದಲ್ಲಿ ಟ್ಯಾಲೆಂಟ್ ಇರುವವರು ಸಾವಿರಾರು ಜನರಿದ್ದಾರೆ ಆದರೆ ಅವರಿಗೆ ಸರಿಯಾಗಿ ಅವಕಾಶ ಸಿಗುತ್ತಿಲ್ಲ. ನಾನು ಅಪ್ಪನ ಹೆಸರಿನಲ್ಲಿ ಹುಟ್ಟಿ ಬಂದಿದ್ದೀನಿ ಆದರೆ ಅವರ ಹೆಸರಿನಲ್ಲಿ ಸಿನಿಮಾ ಮಾಡುವುದಕ್ಕೆ ನನಗೆ ಇಷ್ಟವಿಲ್ಲ ನಾನು ಮಾಡಿದರೆ ಸ್ಕ್ರಾಚ್‌ನಿಂದ ಶುರು ಮಾಡುತ್ತೀನಿ. ನಟನೆಯಲ್ಲಿ ನನ್ನ ಪ್ರಯತ್ನ ಮಾಡುತ್ತೀನಿ ಆದರೆ ಯಾವುದೇ ರೀತಿಯ ಇನ್‌ಫ್ಲೂಯನ್ಸ್ ಬಳಸುವುದಿಲ್ಲ' ಎಂದು ಈ ಹಿಂದೆ ಖಾಸಗಿ ವಾಹಿಯಲ್ಲಿ ನಟ ಉಪೇಂದ್ರ ಪುತ್ರಿ ಆಯುಷ್ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಡಿಯೋ ಬಗ್ಗೆ ಜನರು ಮಾತನಾಡುತ್ತಿರುವುದರ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ದರ್ಶನ್‌ಗೆ ಗಂಡಾಂತರ ಇರೋದು ಮೊದ್ಲೇ ಗೊತ್ತಿತ್ತು; ದೊಡ್ಡ ಜ್ಯೋತಿಷಿ ಹತ್ರ ವಿಜಯಲಕ್ಷ್ಮಿ ಕೇಳ್ತಾರೆ: ಲತಾ ಜಯಪ್ರಕಾಶ್
ಉಪ್ಪಿ ರಿಯಾಕ್ಷನ್:
'ನನ್ನ ಮಗ ಮಾತನಾಡಿರುವುದು ಮನಸ್ಸಿನಿಂದ..ನಾನು ರಸ್ತೆಯಲ್ಲಿ ಹೋಗುತ್ತಿದ್ದರೆ ಸರ್ ನೋಡಿ ನಿಮ್ಮ ಮಗ ಎಷ್ಟು ಚೆನ್ನಾಗಿ ಮಾತನಾಡಿದ್ದಾನೆ ಎನ್ನುತ್ತಿದ್ದಾರೆ. ನಾನು ಎಡಿಟರ್ ಆಗುತ್ತೀನಿ ಇಲ್ಲ ಸಿನಿಮ್ಯಾಟೋಗ್ರಾಫರ್ ಆಗುತ್ತೀನಿ ಅಲ್ಲೂ ಅವಕಾಶ ಸಿಕ್ಕಿಲ್ಲ ಅಂದ್ರೆ ಇನ್ನು ಏನೋ ಮಾಡುತ್ತೀನಿ ಎಂದು ಹೇಳುತ್ತಾನೆ ಇದನ್ನು ನೋಡಿ ನನಗೆ ಅಬ್ಬಾ...ಸಾರ್ಥಕ ಅನಿಸುತ್ತಿತ್ತು. ಮನಸ್ಸಿನಲ್ಲಿ ಮಾಡಬೇಕು ಅನಿಸಿದ್ರೆ ಮಾತ್ರ ಮಾಡು ಮಾಡಬೇಕು ಎಂದು ನಾನು ಎಂದೂ ಹೇಳುವುದಿಲ್ಲ. ಜನರು ಮತ್ತೆ ಮತ್ತೆ ಚಾನ್ಸ್ ಕೊಟ್ಟರೆ ಮಾಡುತ್ತೀನಿ ಇಲ್ಲ ಅಂದ್ರೆ ಸಿನಿಮಾದಲ್ಲಿ ಏನಾದರೂ ಮಾಡಲು ರೆಡಿಯಾಗಿದ್ದೀನಿ ಎನ್ನುತ್ತಾನೆ ಮಗ. ಜೀವನದಲ್ಲಿ ನಾವು ಹೇಗಿರಬೇಕು ಎಂದು ಸುಮ್ಮನೆ ಮಾತನಾಡಿರಬೇಕು ಅದನ್ನು ಕೇಳಿಸಿಕೊಂಡು ನನ್ನ ಮಗ ಮಾತನಾಡಿರಬೇಕು ಆದರೆ ನಾವು ಏನೂ ಹೇಳಿಕೊಟ್ಟಿಲ್ಲ' ಎಂದು ಕಿರಿಕ್ ಕೀರ್ತಿ ಸಂದರ್ಶನದಲ್ಲಿ ಉಪೇಂದ್ರ ಮಾತನಾಡಿದ್ದಾರೆ.
ಈ ಕಾರಣಕ್ಕೆ 20 ವರ್ಷಗಳಿಂದ ವಾಸಿಸುತ್ತಿದ್ದ ಸ್ವಂತ ಮನೆಯಿಂದ ಹೊರ ಬಂದ ಸುಂದರ್ ರಾಜ್ ಕುಟುಂಬ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.