
ಕನ್ನಡದ ಸ್ಟಾರ್ ನಟ ದರ್ಶನ್ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿ ಜೈಲು ಸೇರಿರುವುದು ಗೊತ್ತೇ ಇದೆ. ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರಿಗೆ ಈವರೆಗೂ ಬೇಲ್ ಸಿಕ್ಕಿಲ್ಲ. ದರ್ಶನ್ ಸೇರಿದಂತೆ ಒಟ್ಟೂ ಹದಿನೇಳು ಆರೋಪಿಗಳು ಬೆಂಗಳೂರು ಹಾಗು ತುಮಕೂರು ಜೈಲುಗಳಲ್ಲಿ ವಿಚಾರಣಾಧೀನ ಖೈದಿಗಳಾಗಿದ್ದಾರೆ.
ಇವಿಷ್ಟು ಗೊತ್ತಿರುವ ಸಂಗತಿಯಾಯ್ತು. ಹೊಸ ಸಂಗತಿ ಏನೆಂದರೆ, ನಟ ದರ್ಶನ್ ಅವರ ಜೀವನದಲ್ಲಿ ಸಾಕಷ್ಟು ಕಂಟಕಗಳಿವೆ, ಮೇಲಿಂದ ಮೇಲೆ ಸಮಸ್ಯೆಗಳು ಬರಬಹುದು ಎಂದು ಕಾಳಿಕಾಮಾತೆ ಉಪಾಸಕಿಯೊಬ್ಬರು ಚಂದಾ ಪಾಂಡೆ ಮೊದಲೇ ಎಚ್ಚರಿಸಿದ್ದರಂತೆ. ಈ ಬಗ್ಗೆ ಅವರು ಈಗ ಹೇಳಿಕೆ ನೀಡಿದ್ದಾರೆ. ಕಾಳಿ ಉಪಾಸಕಿ ಚಂದಾ ಪಾಂಡೆ 'ನಾನು 2018ರಲ್ಲಿ ದರ್ಶನ್ ಗೆ ಎಚ್ಚರಿಕೆ ನೀಡಿದ್ದೆ' ಎಂದಿದ್ದಾರೆ.
ಈ ಬಗ್ಗೆ ಇದೀಗ ಹೇಳಿಕೆ ನೀಡಿರುವ ಚಂದಾ ಪಾಂಡೆ 'ಅವರ ಸ್ನೇಹಿತರೊಬ್ಬರು ಫೋಟೋ ತೋರಿಸಿ ಮೈಸೂರಿಗೆ ರೇಸ್‌ಗೆ ಹೋಗ್ತಿದಾರೆ ಅಂದಿದ್ರು. ನಾನು ಅವತ್ತು ಹೋಗೋದು ಬೇಡ ಅಂದಿದ್ದೆ. ಆ ಬಳಿಕ ಅವರಿಗೆ ಆ್ಯಕ್ಸಿಡೆಂಟ್ ಆಗಿ ಕೈ ಫ್ಯಾಕ್ಚರ್ ಆಯ್ತು. ಆ ಬಳಿಕ ಅವರೇ ನನ್ನ ಬಳಿ ಬರ್ತೀನಿ ಅಂತ ಫೋನ್ ಮಾಡಿ ಬಂದಿದ್ರು.
ನನ್ನ ಶಿಷ್ಯನಿಗಾಗಿ ನಾನು ಫೋಟೋ ತಗೊಂಡು ಕೊಟ್ಟಿದ್ದೆ. ನಾನು, ದರ್ಶನ್, ಕಾಳಿದೇವಿ ಫೋಟೋವನ್ನು ಅವರು, ದರ್ಶನ್ ಸ್ನೇಹಿತ ವೈರಲ್ ಮಾಡಿದ್ರು. ಅದನ್ನು ನಾನೇ ಮಾಡಿ ಮೈಲೇಜ್ ತಗೋತಿದೀನಿ ಅಂತ ದರ್ಶನ್ ಅಂದುಕೊಂಡ್ರೋ ಏನೋ! ಆ ಬಳಿಕ ಬಳಿಕ ನಾನು ಅವರ ಬಗ್ಗೆ ಯೋಚ್ನೆ ಮಾಡೋದು ಬಿಟ್ಟೆ. ಅವರೂ ಕೂಡ ಯಾವತ್ತೂ ಆ ಬಳಿಕ ನನ್ನ ಬಳಿ ಬರಲಿಲ್ಲ.
ನಟ ದರ್ಶನ್ ಆ ಬಳಿಕ ನನ್ನ ಮಾತುಗಳನ್ನು ಅವರು ತಳ್ಳಿ ಹಾಕಿದ್ರು. ನನ್ನ ಸಲಹೆ ಮೀರಿ ವಿಗ್ ಹಾಕಿದ್ರು. ಇದರಿಂದಾಗಿ ಅವರ ಗ್ರಹಗತಿಯಲ್ಲಿ ಬದಲಾವಣೆ ಆಗಿದೆ. ಅವರಿಗೆ ಇನ್ನೂ ಸಾಕಷ್ಟು ಗಂಡಾಂತರ ಬರೋ ಸಾಧ್ಯತೆ ಇದೆ. ನಾನು ಪ್ರಚಾರ ತಗೋತೀನಿ ಅಂದ್ಕೋಬಾರ್ದು ಅಂತ ನಾನು ಯಾವುದನ್ನೂ ನಾನೇ ನಾನಾಗಿ ಹೇಳೋದಿಲ್ಲ. ನಾನಿವತ್ತು ಮಾತನಾಡ್ತಾ ಇರೋದು ವಿಜಯಲಕ್ಷ್ಮಿ ಅವರ ಮುಖ ನೋಡಿ, ತುಂಬಾ ನೊಂದಿದಾರೆ ಅವ್ರು!
ನವಚಂಡಿ ಯಾಗ ಮಾಡೋದು ಸಂಕಷ್ಟಗಳನ್ನು ದೂರ ಮಾಡೋದಕ್ಕೆ. ನೀನು ಅನ್ಯಾಯವನ್ನು ಮಾಡಿದ್ದು ಸಾಬೀತು ಆದರೆ ಯಾಗ ಏನು ಮಾಡೋಕೆ ಸಾಧ್ಯ? ಕಲಿಯುಗದಲ್ಲಿ ಎರಡು ತರಾ ಶಿಕ್ಷೆ ಆಗುತ್ತೆ, ಒಂದು ದೇವರು ಕೊಡೋ ಶಿಕ್ಷೆ, ಇನ್ನೊಂದು ಕಾನೂನು ಕೊಡೋ ಶಿಕ್ಷೆ.
ಆದರೆ, ಕಾನೂನಿನ ಮೂಲಕ ದೇವರು ಶಿಕ್ಷೆ ಕೊಡಬೇಕು ಅಂತ ಬಯಸಿದರೆ?
ಆದರೆ ನವಚಂಡಿ ಯಾಗದಿಂದ ತೀರ್ಪು ಕೊಡುವವರ ಮೇಲೆ ಪ್ರೇರಣೆಯಾಗುವ ಸಾಧ್ಯತೆ ಇರುತ್ತದೆ. ವಿಗ್ ಅಥವಾ ಕೂದಲಿಗೂ ಶನಿಗೂ ಸಂಬಂಧ ಇದೆ. ವಿಗ್ ಧರಿಸೋದು ತಪ್ಪು ಅನ್ನೋಲ್ಲ, ಅವರು ಆರ್ಟಿಸ್ಟ್, ಲೈಟ್ ಬೆಳಕಿನಿಂದ ನಿಂದ ಕೂದಲು ಹೆಚ್ಚಾಗಿ ಉದುರುತ್ತೆ. ಆದರೆ ಅವರ ಜನ್ಮತಃ ಬಂದಿರುವ ಕೇಶವಿನ್ಯಾಸ ಮಾಡಿಸಿಕೊಂಡರೆ ಉತ್ತಮ' ಎಂದಿದ್ದಾರೆ ಕಾಳಿಕಾಮಾತೆ ಉಪಾಸಕಿ ಚಂದಾ ಪಾಂಡೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.