ಕುಟುಂಬದಲ್ಲ ಎರಡು ಲಾಸ್ ಕಂಡ ಮೇಲೆ ಮನೆಯ ಪರಿಸ್ಥಿತಿ ಹೇಗಿದೆ ಎಂದು ಪ್ರಶ್ನೆ ಮಾಡಿದಾಗ ಶ್ರೀಮುರಳಿ ಅವರಿಂದ ಸಿಕ್ಕ ಉತ್ತರವೇ ಇದು.
ಕನ್ನಡ ಚಿತ್ರರಂಗದ ರೋರಿಂಗ್ ಸ್ಟಾರ್ ಶ್ರೀಮುರಳಿ ತುಂಬಾ ಹತ್ತಿರದಿಂದ ಎರಡು ಸಾವುಗಳನ್ನು ನೋಡಿಬಿಟ್ಟಿದ್ದಾರೆ. ಒಂದು ಪ್ರೀತಿಯ ಅಪ್ಪು ಮಾಮ ಪುನೀತ್ ರಾಜ್‌ಕುಮಾರ್ ಮತ್ತೊಬ್ಬರು ಅಣ್ಣನ ಹೆಂಡತಿ ಸ್ಪಂದನಾ ವಿಜಯ್‌ರಾಘವೇಂದ್ರ. ಕಡಿಮೆ ಅವಧಿಯಲ್ಲಿ ಎರಡು ಸಾವುಗಳನ್ನು ನೋಡಿ ಇಡೀ ಕುಟುಂಬವೇ ಕುಗ್ಗಿದೆ.ಈ ಸಮಯವನ್ನು ಎದುರಿಸಿದ್ದು? ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದು ಹೇಗೆ ಎಂದು ವಿವರಿಸಿದ್ದಾರೆ.
'ನಮ್ಮ ತಂದೆ ನನಗೆ ಹಲವಾರು ವಿಚಾರಗಳನ್ನು ಕೇಳಿಕೊಟ್ಟಿದ್ದಾರೆ ಅದರಲ್ಲಿ ತಾಳ್ಮೆ, ಪ್ರೀತಿ ಮತ್ತು ಸಂಬಂಧದ ಬೆಲೆ ಮುಖ್ಯವಾಗಿ ತಿಳಿದುಕೊಂಡಿದ್ದೀನಿ. ಕೆಲವು ಘಟನೆಗಳು ಎಂಥ ಶಾಕ್ ಕೊಡುತ್ತದೆ ಅಂದ್ರೆ ಇಷ್ಟೇನಾ ಜೀವನ ಅನಿಸುತ್ತದೆ,ಇದಕ್ಕೆ ನಾವು ಇಷ್ಟೋಂದು ಮಾಡ್ಬೇಕಾ ಅನಿಸುತ್ತದೆ.ಆದರೆ ಬದುಕು ಅನ್ನೋದು ನಿಜವೇ ಸಾವು ಅನ್ನೋದು ನಿಜನೇ. ಬದುಕಿಗೆ ಎಷ್ಟು ಬೆಲೆ ಇದೆಯೋ ಸಾವಿಗೂ ಅಷ್ಟೇ ಬೆಲೆ ಇದೆ. ನಾವು ಏನು ನೋಡಿದ್ವಿ ಏನು ಕಳುದ್ವಿ ಅದು ನಮ್ಮಲ್ಲೇ ಇರ್ಲಿ ಏಕೆಂದರೆ ಅದನ್ನು ಎಷ್ಟರ ಮಟ್ಟಕ್ಕೆ ಮರೆತಿದ್ದೀವಿ ಅನ್ನೋದಕ್ಕಿಂತ ಎಷ್ಟರ ಮಟ್ಟಕ್ಕೆ ಆ ನೆನಪುಗಳನ್ನು ಹಾಗೆ ಜ್ಞಾಪಕ ಇಟ್ಟುಕೊಂಡಿದ್ದೀವಿ ಅನ್ನೋದು ಮುಖ್ಯವಾಗುತ್ತದ' ಎಂದು ಖಾಸಗಿ ಸಂದರ್ಶನದಲ್ಲಿ ಶ್ರೀಮುರಳಿ ಮಾತನಾಡಿದ್ದಾರೆ.
ಮತ್ತೆ ಮದ್ವೆ ಆಗ್ತೀನಾ ಗೊತ್ತಿಲ್ಲ, ಆಗಿದ್ದು ಎರಡೂ ಉಳಿಸಿಕೊಳ್ಳಲು ಆಗಲಿಲ್ಲ: ಅಮಿರ್ ಖಾನ್ ಬೇಸರ
'ಅವರೊಟ್ಟಿಗಿನ ಕೊನೆ ದಿನ ನೆನಪಿಸಿಕೊಳ್ಳುವ ಬದಲು ಅವರೊಟ್ಟಿಗೆ ಕಳೆದೆ ಹಿಂದಿನ ದಿನಗಳ ನೆನಪಿನಲ್ಲಿ ನಾನು ಬದುಕುತ್ತಿದ್ದೀನಿ. ಕೆಲವೊಂದು ಘಟನೆಗಳು ಆಗಿಲ್ಲ ಅಂದುಕೊಂಡು ಬದುವುದಕ್ಕೆ ನನಗೆ ಇಷ್ಟೆ. ಬದುಕು ಎಷ್ಟು ನಿಜನೋ ಸಾವು ಅಷ್ಟೇ ನಿಜ, ಅವರನ್ನು ನೆನಪಿಟ್ಟುಕೊಳ್ಳಬೇಕು. ಹಿರಿಯರು ಹೇಳುತ್ತಿದ್ದರು ಖುಷಿ ಖುಷಿಯಾಗಿ ಆತ್ಮವನ್ನು ಕಳುಹಿಸಬೇಕು ಏಕೆಂದರೆ ನಾವು ಎಷ್ಟು ಕೊರಗುತ್ತೀರೋ ಪಾಪ ಆ ಆತ್ಮ ಕೂಡ ಅಷ್ಟೇ ಕೊರಗುತ್ತದೆ ಅಂತೆ.ನೀನೇ ಎಲ್ಲೇ ಇದ್ರೂ ಚೆನ್ನಾಗಿರು ಅಂತ ಹೇಳಿದಾಗ ಆ ಆತ್ಮಕ್ಕೆ ನೆಮ್ಮದಿ ಸಿಗುತ್ತದೆ ಅಂತೆ. ನನ್ನ ಮಕ್ಕಳಿಗೂ ಕೂಡ ನಾನು ಅದನ್ನು ಕೇಳಿಕೊಟ್ಟಿದ್ದೀನಿ' ಎಂದು ಶ್ರೀಮುರಳಿ ಹೇಳಿದ್ದಾರೆ.
ಒಂದು ಜಾಕೆಟ್‌ಗೆ ಇಷ್ಟೋಂದು ಹಣ ಕೊಡ್ತಾರಾ ಈ ಜಿಲೇಬಿ ರಾಣಿ?; ಭವ್ಯಾ ಗೌಡ ಫೋಟೋ ವೈರಲ್