ಹಾಗಿದ್ರೆ ಶಿವಣ್ಣಂಗೆ 'ಜೈ' ಅಂದೇಬಿಟ್ರು ದರ್ಶನ್ ಫ್ಯಾನ್ಸ್; ಶಿವರಾಜ್‌ಕುಮಾರ್ ಹೇಳಿದ್ದೇನು?

By Shriram Bhat  |  First Published Nov 8, 2024, 12:11 PM IST

ದರ್ಶನ್ ಬದುಕು ಸದ್ಯ ದುರಂತಕ್ಕೆ ಈಡಾಗಿದೆ. ಈ ಕಾರಣಕ್ಕೆ ಸಹಜವಾಗಿ ಅವರ ಅಭಿಮಾನಿಗಳಿಗೆ ನೋವಾಗಿದೆ. ಸಮಾಜ ಅವರ ನೋವಿಗೆ ಸ್ಪಂದಿಸಬೇಕಿದೆ. ಅದು ಬಿಟ್ಟು, 'ಉರಿಯೋ ಬೆಂಕಿಗೆ ತುಪ್ಪ ಸುರಿಯೋದು' ಅಂತಾರಲ್ಲ ಹಾಗೆ..


ಕನ್ನಡದ ಹ್ಯಾಟ್ರಿಕ್ ಹೀರೋ ಖ್ಯಾತಿಯ ನಟ ಶಿವರಾಜ್‌ಕುಮಾರ್ (Shiva Rajkumar) ಅವರು ಇತ್ತೀಚೆಗೆ ತಮ್ಮ ಭೈರತಿ ರಣಗಲ್ ಸಿನಿಮಾ (Bhairathi Ranagal) ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವೇಳೆ ಸಂದರ್ಶನವೊಂದರಲ್ಲಿ ಮಾತನಾಡುತ್ತ ಶಿವಣ್ಣ, ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ದರ್ಶನ್ ಅಭಿಮಾನಿಗಳ (Darshan Fans) ಬಗ್ಗೆ ಮಾತನ್ನಾಡಿದ್ದಾರೆ. 'ನಾವು ದರ್ಶನ್ ಅಭಿಮಾನಿಗಳ ನೋವನ್ನು ಅರ್ಥ ಮಾಡಿಕೊಳ್ಳಬೇಕು. ಅವರಿಗೆ ನಟ ದರ್ಶನ್ ಆರಾಧ್ಯ ದೈವ. ಬೇರೆ ನಟರ ಅಭಿಮಾನಿಗಳು ಹೇಗೋ ಅವರ ಫ್ಯಾನ್ಸ್‌ಗಳು ಕೂಡ ಹಾಗೆ ಅಲ್ಲವೇ?

ದರ್ಶನ್ ಬದುಕು ಸದ್ಯ ದುರಂತಕ್ಕೆ ಈಡಾಗಿದೆ. ಈ ಕಾರಣಕ್ಕೆ ಸಹಜವಾಗಿ ಅವರ ಅಭಿಮಾನಿಗಳಿಗೆ (D Boss Fans) ನೋವಾಗಿದೆ. ಸಮಾಜ ಅವರ ನೋವಿಗೆ ಸ್ಪಂದಿಸಬೇಕಿದೆ. ಅದು ಬಿಟ್ಟು, 'ಉರಿಯೋ ಬೆಂಕಿಗೆ ತುಪ್ಪ ಸುರಿಯೋದು' ಅಂತಾರಲ್ಲ ಹಾಗೆ ಮಾಡ್ಬಾರ್ದು. ದೀಪಕ್ಕೆ ಎಣ್ಣೆ ಹಾಕಿದಂತೆ ಅವರ ನೋವನ್ನು ಮತ್ತಷ್ಟು ಕೆರಳಿಸುವಂತೆ ಮಾಡಬಾರದು. ಅವರನ್ನು ಸರಿಯಾದ ದಾರಿಯಲ್ಲಿ ಸಂತೈಸುವ ಕೆಲಸ ಆಗಬೇಕು. ಅವರ ನೋವಿನ ಮನಸ್ಥಿತಿ, ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರಿಗೆ ಸಮಾಧಾನ ಮಾಡಬೇಕಿದೆ' ಎಂದಿದ್ದಾರೆ. 

Tap to resize

Latest Videos

undefined

ಭೇಟಿಯಾದ ಒಂದು ತಿಂಗಳಲ್ಲೇ ನಾನು ಗರ್ಭಿಣಿಯಾದೆ, ಅಷ್ಟು ಆತುರ ಅವರಲ್ಲಿತ್ತು: ಅಮಲಾ ಪೌಲ್!

ಹಿರಿಯ ನಟ , ಕರುನಾಡ ಚಕ್ರವರ್ತಿ ಖ್ಯಾತಿಯ ನಟ ಶಿವಣ್ಣ ಆ ಸಂದರ್ಶನಕ್ಕೆ ಕಾಮೆಂಟ್ ಬಹಳಷ್ಟು ದರ್ಶನ್ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 'ನಾವು ನಟ ದರ್ಶನ್ ಅವರ ಅಪ್ಪಟ ಅಭಿಮಾನಿಗಳು. ಆದರೆ, ಇವತ್ತು ಶಿವಣ್ಣ ಆಡಿದ ಮಾತುಗಳನ್ನು ನಾವು ಒಪ್ಪುತ್ತೇವೆ. ಶಿವಣ್ಣ ನಮ್ಮ ಭಾವನೆಗಳನ್ನು ಗೌರವಿಸಿ ಮಾತನಾಡಿದ್ದಾರೆ. ಹೀಗಾಗಿ ನಾವೂ ಸಹ ಅವರ ಮಾತಿಗೆ ಗೌರವ ಕೊಡುತ್ತೇವೆ. ಮುಂಬರುವ ಶಿವಣ್ಣ ನಟನೆಯ 'ಭೈರತಿ ರಣಗಲ್' ಸಿನಿಮಾವನ್ನು ನೋಡುತ್ತೇವೆ..' ಎಂದು ಅಸಂಖ್ಯಾತ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 

ಕೆಲವರು ಇನ್ನೂ ಮುಂದುವರಿದು, 'ಹಿರಿಯ ನಟ ಶಿವಣ್ಣ ಮಾಡಿರುವ ಈ ಕೆಲಸವನ್ನು ಚಿತ್ರರಂಗದ ಎಲ್ಲರೂ ಒಪ್ಪಿ ಅನುಸರಿಸಬೇಕು. ಚಿತ್ರರಂಗದಲ್ಲಿ ಒಗ್ಗಟ್ಟು ಇರಬೇಕು. ಜೊತೆಗೆ, ಯಾರದೇ ಅಭಿಮಾನಿಗಳು ನೋವಿನಲ್ಲಿದ್ದರೂ ತಕ್ಷಣಕ್ಕೆ ಸಂತೈಸುವ ಕೆಲಸ ಆಗಬೇಕೇ ಹೊರತೂ ನೋವನ್ನು ಮತ್ತಷ್ಟು ಕೆರಳಿಸುವ ಕೆಲಸ ಆಗಬಾರದು. ಚಿತ್ರರಂಗದ ಎಲ್ಲರೂ ಒಂದೇ ಭಾವನೆ ಎಲ್ಲರಲ್ಲೂ ಇರಬೇಕು. ನಾವೂ ಅಷ್ಟೇ, ದರ್ಶನ್ ಅಭಿಮಾನಿಳಾದರೂ ಎಲ್ಲರೂ ನಮ್ಮ ನೋವಿಗೆ ಸ್ಪಂದಿಸಿದರೆ ನಾವೂ ಎಲ್ಲರ ಸಿನಿಮಾ ನೋಡುತ್ತೇವೆ' ಎಂದಿದ್ದಾರೆ. 

ಸೀತಾರಾಮದ 'ಸಿಹಿ' ನೇಪಾಳಿ ಹುಡುಗಿ; ಈ ಸ್ವೀಟ್ ಬೇಬಿ ಕರ್ನಾಟಕಕ್ಕೆ ಬಂದಿದ್ದು ಹೇಗೆ?

ದರ್ಶನ್ ಅಭಿಮಾನಿಗಳ ಕಾಮೆಂಟ್ಸ್ ಮೆಚ್ಚಿರುವ ಹಲವರು ಸೋಷಿಯಲ್ ಮೀಡಿಯಾದಲ್ಲಿ 'ನಾವು ಯಾವುದೇ ನಟನ ಅಭಿಮಾನಿಗಳೂ ಅಲ್ಲ. ಅಥವಾ, ಎಲ್ಲರ ಅಭಿಮಾನಿಗಳು, ಎಲ್ಲ ಕನ್ನಡ ಸಿನಿಮಾ ನೋಡುವವರು. ಶಿವಣ್ಣ ಹೇಳಿರುವುದು ಹಾಗೂ ಈಗ ನಟ ದರ್ಶನ್ ಅಭಿಮಾನಿಗಳು ಆಡುತ್ತಿರುವ ಮಾತು ಎಲ್ಲವೂ ಸರಿಯಾಗಿದೆ. ಹಿರಿಯ ನಟನ ಹಿರಿತನಕ್ಕೆ ಸಿಕ್ಕ ಬೆಲೆ ಇದು ಎನ್ನಬಹುದು.

ಈ ಕೆಲಸವನ್ನು ಚಿತ್ರರಂಗ ಸೇರಿದಂತೆ, ಎಲ್ಲರ ಫ್ಯಾನ್ಸ್ ಹಾಗೂ ಸಮಾಜ ಬಹಳಷ್ಟು ಮೊದಲೇ ಮಾಡಬೇಕಿತ್ತು. ಆಗ ಸಮಾಜದಲ್ಲಿ ಸಹಜವಾಗಿಯೇ ಶಾಂತಿ ನೆಲೆಸುತ್ತಿತ್ತು' ಎಂದು ಕಾಮೆಂಟ್ ಮಾಡಿದ್ದಾರೆ. 'ಒಟ್ಟಿನಲ್ಲಿ ಈಗ ಎಲ್ಲವೂ ಸುಸೂತ್ರ ದಾರಿಯಲ್ಲಿ ಹೋಗುವ ಸೂಚನೆ ಕಾಣಿಸುತ್ತಿದೆ. ಎಲ್ಲರ ಉದ್ದೇಶವೂ ಸಮಾಜದಲ್ಲಿ ಯಾವತ್ತೂ ಶಾಂತಿ ಇರಬೇಕು ಎಂಬುದೇ ಆಗಿರಲಿ, ಅದಕ್ಕೆ ತಕ್ಕಂತೆ ಹಿರಿಯರು ಹಾಗೂ ಕಿರಿಯರು ಎಲ್ಲರೂ ನಡೆದುಕೊಳ್ಳಲಿ..' ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. 'ಕಾಲಾಯ ತಸ್ಮೈ ನಮಃ' ಎನ್ನಬಹುದು!

ಅಭಿಮಾನಿಗಳಿಂದ ಏನನ್ನೂ ಮುಚ್ಚಿಡಲ್ಲ, ಹೌದು ಆಗಿದೆ, ನಾನೂ ಮನುಷ್ಯ: ಶಿವರಾಜ್‌ಕುಮಾರ್

click me!