CD ಹಿಂದಿರುವ 'ಮಹಾನಾಯಕ', ಪದ ಬಳಸಿದರೆ ಮುಖಕ್ಕೆ ಉಗೀರಿ; ಪ್ರಥಮ್ ಆಕ್ರೋಶ!

Suvarna News   | Asianet News
Published : Mar 30, 2021, 09:30 AM IST
CD ಹಿಂದಿರುವ 'ಮಹಾನಾಯಕ', ಪದ ಬಳಸಿದರೆ ಮುಖಕ್ಕೆ ಉಗೀರಿ; ಪ್ರಥಮ್ ಆಕ್ರೋಶ!

ಸಾರಾಂಶ

ದೊಡ್ಡ ಚರ್ಚೆ ಹುಟ್ಟು ಹಾಕಿರುವ ಸಿಡಿ ಪ್ರಕರಣದ ಬಗ್ಗೆ ನಟ ಒಳ್ಳೆ ಹುಡುಗ ಪ್ರಥಮ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಮತ್ತೆ'ಮಹಾನಾಯಕ' ಹೀಗೆ ಮಾಡಿ ಎಂದು ಜನರಿಗೆ ಪಾಠ ಮಾಡಿದ್ದಾರೆ.  

ಸ್ಯಾಂಡಲ್‌ವುಡ್‌ ಹೀರೋ, ಬಿಗ್ ಬಾಸ್‌ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಸಮಾಜದ ಹಾಗೂ ಹೋಗುಗಳ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಚರ್ಚೆ ಮಾಡುತ್ತಿರುತ್ತಾರೆ. ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಈ ರೀತಿ ಮಾಡಿದರೆ ಬೆಸ್ಟ್‌, ಎಂದು ಸಾರ್ವಜನಿಕರಿಗೆ ಸಲಹೆ ನೀಡುತ್ತಾರೆ. ಅದೆಷ್ಟೋ ವಿಚಾರದಲ್ಲಿ ಪ್ರಥಮ್ ಪ್ರಾಕ್ಟಿಕಲ್ ಥಿಂಕಿಂಗ್ ವರ್ಕೌಟ್ ಆಗಿದೆ. ಈಗ ಅದೇ ರೀತಿ ಸಿಡಿ ವಿಚಾರದ ಬಗ್ಗೆಯೂ ಮಾತನಾಡಿದ್ದಾರೆ. 

ಸಿಡಿ ಪ್ರಸಂಗದ ಬಗ್ಗೆ ಒಳ್ಳೆ ಹುಡುಗ ಪ್ರಥಮ್ ಹೇಳಿದ್ದಿಷ್ಟು..! 

ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಅಶ್ಲೀಲ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಮಾಧ್ಯಮಗಳಲ್ಲಿ ಸಿಡಿ ಹಿಂದಿರುವ ಮಹಾನಾಯಕ ಎಂದು ತೋರಿಸಲಾಗುತ್ತಿದೆ. ಈ ವಿಚಾರದಲ್ಲಿ ಮಹಾನಾಯಕನ ಪದ ಬಳಕೆ ಬಗ್ಗೆ ಪ್ರಥಮ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. 

'ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್‌ಗೆ ಗೌರವದಿಂದ ಮಹಾನಾಯಕ ಅಂತಿದ್ರು. ಈಗ ಸಿಡಿ ಮಾಡೋರನ್ನ ಮಹಾನಾಯಕ ಅಂತಿದ್ದಾರೆ. ಯಾವ ಪದ ಯಾರಿಗೆ ಬಳಸಬೇಕು, ಅನ್ನೋ ಕನಿಷ್ಠ ಜ್ಞಾನವೂ ಬೇಡ್ವಾ? ಅಂಬೇಡ್ಕರ್ ಪೋಟೋ ವಿರೂಪವಾದಾಗ ಅಗೌರವ ಅಗೋಲ್ಲ, ಇಂಥ ಪದಗಳನ್ನು ಅಶ್ಲೀಲ ಸಿಡಿ ಕೇಸ್‌ನವರಿಗೆ ಬಳಸಿದ್ರೆ ಅವಮಾನ ಮಾಡಿದಂತೆ. ಇನ್ನೊಮ್ಮೆ ಮಹಾನಾಯಕ ಅಂದ್ರೆ ಮುಖಕ್ಕೆ ಉಗೀರಿ,' ಎಂದು ಪ್ರಥಮ್ ಟ್ಟೀಟ್ ಮಾಡಿದ್ದಾರೆ.

'ಒಬ್ಬೊಬ್ಬರಾಗಿ ಬೆತ್ತಲಾಗುತ್ತಿದ್ದಾರೆ : ಎಫ್‌ಐಆರ್‌ ಹಾಕಿ'

ಮಹಾನಾಯಕ ಎಂದು ಕರೆಯಿಸಿಕೊಳ್ಳಲು ಅರ್ಹತೆ ಇರಬೇಕು. ಸುಖಾ ಸುಮ್ಮನೆ ಹಾಗೆ ಬಳಸಬಾರದು ಎಂದು ಕಾಮೆಂಟ್ ಮಾಡುವ ಮೂಲಕ ನೆಟ್ಟಿಗರು ಪ್ರಥಮ್ ಪರ ನಿಂತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?