ಏರಿಯಾ ಹುಡುಗರ ಹೊಸ ಕತೆ; ಪೋಸ್ಟರ್ ಬಿಡುಗಡೆ ಮಾಡಿದ ಧ್ರುವ ಸರ್ಜಾ!

Kannadaprabha News   | Asianet News
Published : Mar 29, 2021, 09:53 AM ISTUpdated : Mar 29, 2021, 10:21 AM IST
ಏರಿಯಾ ಹುಡುಗರ ಹೊಸ ಕತೆ; ಪೋಸ್ಟರ್ ಬಿಡುಗಡೆ ಮಾಡಿದ ಧ್ರುವ ಸರ್ಜಾ!

ಸಾರಾಂಶ

ನಟ ಧ್ರುವ ಸರ್ಜಾ ಇತ್ತೀಚೆಗೆ ಹೊಸ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಿದರು. ಚಿತ್ರದ ಹೆಸರು ‘ಏರಿಯಾ ಹುಡುಗರು’.

ಈಗಾಗಲೇ ತೆರೆ ಮೇಲೆ ಏರಿಯಾಗಳಲ್ಲಿರುವ ಗೆಳೆಯರ ಕತೆಗಳು ಒಂದಿಷ್ಟುಬಂದಿವೆ. ಈಗ ಅಂಥದ್ದೇ ಮಾಸ್‌ ಹಾಗೂ ಆ್ಯಕ್ಷನ್‌ ಚಿತ್ರವಿದು. ಮುಹೂರ್ತ ಸಮಾರಂಭಕ್ಕೆ ಧ್ರುವ ಸರ್ಜಾ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ಅನ್ನು ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡಕ್ಕೆ ಶುಭ ಕೋರಿದರು.

ಕ್ರಿಕೆಟ್ ಆಡುವಾಗ ದರ್ಶನ್‌-ಅಭಿಷೇಕ್‌ ನಡುವೆ ಜಗಳ; ವಿಡಿಯೋ ವೈರಲ್! 

ಒಂದೇ ಏರಿಯಾದಲ್ಲಿರುವ ನಾಲ್ಕು ಜನ ಸ್ನೇಹಿತರ ಜೀವನದಲ್ಲಿ ನಡೆಯುವ ಹಲವಾರು ರೋಚಕ ತಿರುವುಗಳನ್ನು ಈ ಚಿತ್ರದಲ್ಲಿ ನೋಡಬಹುದು. ಮೋಹನ್‌ ಅಪ್ಪು ನಿರ್ದೇಶನ ಮಾಡುತ್ತಿದ್ದು, ಈ ಹಿಂದೆ ‘ನಾನೊಂಥರ’ ಚಿತ್ರದಲ್ಲಿ ನಟಿಸಿದ್ದ ಡಾ ತಾರಕ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

300 ಚಿತ್ರಮಂದಿರಗಳಲ್ಲಿ 'ಯುವರತ್ನ'; ಮುಂಗಡ ಬುಕ್ಕಿಂಗ್‌ನಲ್ಲೂ ಯುವ ಸಂಭ್ರಮ! 

ಸುಮಂತ್‌ ಲವ್‌ಗುರು ಹಾಗೂ ನಾಗರಾಜ್‌ಗುಪ್ತ ಅವರ ನಿರ್ಮಾಣದ ಈ ಚಿತ್ರಕ್ಕೆ ಕಲ್ಕಿ ಅಭಿಷೇಕ್‌ ಸಂಗೀತ, ನಾಗೇಶ್‌ ಉಚ್ಚಂಗಿ ಕ್ಯಾಮೆರಾ ಇದೆ. ‘ನಾಲ್ಕು ಮಂದಿ ಸ್ನೇಹಿತರ ಮೂಲಕ ಈವರೆಗೂ ನೋಡಿರದ ಕತೆಯನ್ನು ಈ ಚಿತ್ರದಲ್ಲಿ ನೋಡಬಹುದು. ನಿರೂಪಣೆಯಲ್ಲೂ ಹೊಸತನ ಇರುತ್ತದೆ. ಪ್ರತಿ ದೃಶ್ಯವೂ ಕುತೂಹಲದಿಂದ ಮೂಡಿ ಬರಲಿದೆ’ ಎಂಬುದು ನಿರ್ದೇಶಕರು ಹೇಳುವ ಭರವಸೆಯ ಮಾತು. ಸಾಕಷ್ಟುಯುವ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದೇ ಏಪ್ರಿಲ… 5ರಿಂದ ಬೆಂಗಳೂರು, ಮೈಸೂರು, ಮಡಿಕೇರಿ, ಚಿಕ್ಕಮಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ಮಾಡುವ ಯೋಜನೆ ಚಿತ್ರತಂಡಕ್ಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?
ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!