ಕನ್ನಡ ಸ್ವಲ್ಪ ಗೊತ್ತು ಎನ್ನುವವರು ಚಿತ್ರರಂಗ ಹರಾಜು ಹಾಕುತ್ತಿದ್ದಾರೆ; ಕನ್ನಡಿಗರಿಗೆ ಜಗ್ಗೇಶ್‌ ಸಲಾಂ

By Suvarna NewsFirst Published Sep 7, 2020, 4:57 PM IST
Highlights

ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಡ್ರಗ್ ಮಾಫಿಯಾ ವಿಚಾರದ ಬಗ್ಗೆ ನಟ ಜಗ್ಗೇಶ್‌ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಇದೀಗ ಕನ್ನಡದ ಹೆಣ್ಣು ಮಕ್ಕಳ ಮೇಲಿರುವ ಗೌರವವನ್ನು ವ್ಯಕ್ತ ಪಡಿಸಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟ ಜಗ್ಗೇಶ್‌ ಏನೇ ಹೇಳಿದರೂ ವೇದ  ವಾಕ್ಯದಂತೆ ಇಂದಿನ ಯುವ ನಟ ನಟಿಯರು ಚಾಚು ತಪ್ಪದೆ ಪಾಲಿಸುತ್ತಾರೆ. ಜಗ್ಗಣ್ಣನ ಸಲಹೆ ಪಡೆದುಕೊಂಡು ತಮ್ಮ ಕೆಲಸವನ್ನು ಮುಂದುವರೆಸುತ್ತಾರೆ. ಚಂದನವಕ್ಕೆ ಡ್ರಗ್ಸ್ ನಂಟು ಇರುವ ವಿಚಾರ ಕೇಳಿ ಅಸಮಾಧಾನ ವ್ಯಕ್ತ ಪಡಿಸಿದ್ದ ಜಗ್ಗೇಶ್ ಇದೀಗ ಕನ್ನಡದ ಹೆಣ್ಣು ಮಕ್ಕಳನ್ನು ಹೊಗಳಿದ್ದಾರೆ. 

'ಬಿಜೆಪಿ ಬೈದಿದ್ದ ಯುವಕ' ಶೇರ್ ಮಾಡಿಕೊಂಡಿದ್ದ ಜಗ್ಗೇಶ್‌ಗೆ ಸಂಕಷ್ಟ 

ಜಗ್ಗೇಶ್ ಟ್ಟೀಟ್:

'ಕನ್ನಡ ಚಿತ್ರರಂಗದ ನಲ್ಮೆಯ ಕನ್ನಡದ ಹೆಣ್ಣು ಮಕ್ಕಳು ನಮ್ಮತನ ಉಳಿಸಿಕೊಂಡು ನಮ್ಮ ಕಾಲದಿಂದ ಬದುಕಿದ್ದಾರೆ ಪಾಪ! ಕನ್ನಡ್ ಸ್ವಲ್ಪ ಗೊತ್ತಿದೆ ಎನ್ನುತ್ತಾ ಉತ್ತರದಿಂದ ಬಂದು ನಮ್ಮವರ ಮೋಡಿ ಮಾಡಿದವರೆ ನಮ್ಮ ಚಿತ್ರರಂಗದ ಮಾನ ಹರಾಜು ಹಾಕುತ್ತಿರುವುದು. ಇನ್ನು ಮೇಲಾದರು ನಮ್ಮವರು ನಮ್ಮವರಿಗೆ ಜೈ ಅನ್ನುವ! ಕನ್ನಡದವರು ಕನ್ನಡಿಗರಿಗೆ ಕೈ ಎತ್ತಿ ಸಾಕು' ಎಂದು ಬರೆದುಕೊಂಡು ನಮಸ್ಕರಿಸುವ ಎಮೋಜಿ ಪಕ್ಕದಲ್ಲಿ ಹಾಕಿದ್ದಾರೆ.

 

ಕನ್ನಡಚಿತ್ರರಂಗದ ನಲ್ಮೆಯ ಕನ್ನಡದ ಹೆಣ್ಣುಮಕ್ಕಳು ನಮ್ಮತನ ಉಳಿಸಿಕೊಂಡು ನಮ್ಮ ಕಾಲದಿಂದ ಬದುಕಿದ್ದಾರೆ ಪಾಪ!
ಕನ್ನಡ್ ಸ್ವಲ್ಪಗೊತ್ತಿದೆ ಎನ್ನುವ ಉತ್ತರದಿಂದ ಬಂದು ನಮ್ಮವರ
ಮೋಡಿ ಮಾಡಿದವರೆ ನಮ್ಮಚಿತ್ರರಂಗದ ಮಾನ ಹರಾಜು ಹಾಕುತ್ತಿರುವುದು!ಇನ್ನುಮೇಲಾದರು ನಮ್ಮವರು ನಮ್ಮವರಿಗೆ ಜೈಅನ್ನುವ!ಕನ್ನಡದವರು ಕನ್ನಡಿಗರಿಗೆ ಕೈಎತ್ತಿ
ಸಾಕು🙏🙏✌👍..!!

— ನವರಸನಾಯಕ ಜಗ್ಗೇಶ್ (@Jaggesh2)

ಅಷ್ಟೆ ಅಲ್ಲದೆ ತಾವು ಚಿತ್ರರಂಗದಲ್ಲಿ ನಡೆದು ಬಂದ ಪ್ರಾಮಾಣಿಕ ಬದುಕಿನ ಬಗ್ಗೆ ಬರೆದುಕೊಂಡಿದ್ದಾರೆ. '1980 ನವೆಂಬರ್‌ 17ಕ್ಕೆ ಚಿತ್ರರಂಗಕ್ಕೆ  ಬಂದವ ನಾನು ಭಯದಿಂದ ಬೆಳದು ದಡ್ಡ ಮುಟ್ಟಿರುವೆ. ಹೈ ಸ್ಟೀಡ್‌ ಕೈ ಬಿಟ್ಟು ಗಾಡಿ ಓಡಿಸದವರು.  ಅರ್ಧ ರಾತ್ರೀಲಿ ಛತ್ರಿ ಹಿಡಿದವರು ಒಂದೇ ರಾತ್ರಿ ಬೆಟ್ಟ ಹತ್ತಿ ಹಳ್ಳಕ್ಕೆ ಬಿದ್ದವರು. ಏಷ್ಟೆ ಬೆಳೆದರು ತಲೆ ಬಾಗಿ ಬಾಳಿದವರು ನೋಡಿ ಬದುಕು ಕಲಿತವ ನಾನು. ದೇವರ ಕೈ ಹಿಡಿದರೆ ಮಹಾರಾಜ ಕೈ ಬಿಟ್ರೆ ಬಿಕ್ಷುಕ. ನಶ್ವರ ಜಗತ್ತು  ಎಚ್ಚರ' ಎಂದಿದ್ದಾರೆ.

ಸಂಯುಕ್ತಾ ಹೆಗ್ಡೆ ಪರ ನಿಂತ ಜಗ್ಗೇಶ್; ಕವಿತಾ ರೆಡ್ಡಿಗೆ ಟಾಂಗ್? 

 

1980ನವಂಬರ್17ಕ್ಕೆ ಸಿನಿಮಾರಂಗಕ್ಕೆ ಬಂದವ ನಾನು!
ಭಯದಿಂದ ಬೆಳೆದು ದಡ ಮುಟ್ಟಿರುವೆ!
ಹೈಸ್ಪೀಡು!ಕೈಬಿಟ್ಟು ಗಾಡಿ ಓಡ್ಸದವರು!ಅರ್ಧರಾತ್ರೀಲಿ ಛತ್ರಿ ಹಿಡಿದವರು!ಒಂದೆರಾತ್ರಿ ಬೆಟ್ಟ ಹತ್ತಿ ಹಳ್ಳಕ್ಕೆ ಬಿದ್ದವರು!
ಏಷ್ಟೆಬೆಳೆದರು ತಲೆಬಾಗಿ ಬಾಳಿದವರ ನೋಡಿ ಬದುಕು ಕಲಿತವ ನಾನು!
ದೇವರು ಕೈಹಿಡಿದರೆ ಮಹಾರಾಜ!
ಕೈಬಿಟ್ರೆ ಬಿಕ್ಷುಕ!ನಶ್ವರಜಗ ಎಚ್ಚರ!

— ನವರಸನಾಯಕ ಜಗ್ಗೇಶ್ (@Jaggesh2)

ನಟ ಜಗ್ಗೇಶ್ ಹೇಳುತ್ತಿರುವ ಮಾತು ನೂರಕ್ಕೆ ನೂರು ಸತ್ಯ. ಮೊದಲು ನಮ್ಮ ಕನ್ನಡದ ಹೆಣ್ಣು ಮಕ್ಕಳಿಗೆ ಅವಕಾಶ ನೀಡಿ, ಅವರಿಗೂ ಪ್ರೋತ್ಸಾಹಿಸೋಣ.

click me!