ಎಫ್‌ಯುಸಿ ವೆಬ್‌ಸೈಟ್‌ನಲ್ಲಿ ರಿಲೀಸ್‌ ಆಗಲಿದೆ 'ಮೂಕಜ್ಜಿಯ ಕನಸುಗಳು'!

By Kannadaprabha News  |  First Published Sep 7, 2020, 4:28 PM IST

ಸಿನಿಮಾ ರಿಲೀಸ್‌ ಮಾಡಲು ಚಿತ್ರರಂಗದ ಮಂದಿ ಹೊಸಹೊಸ ವಿಧಾನ ಹುಡುಕಿಕೊಳ್ಳುವ ಸಂದರ್ಭದಲ್ಲಿ ನಿರ್ದೇಶಕ ಪಿ. ಶೇಷಾದ್ರಿ ಜನರಿಗೆ ಸಿನಿಮಾ ತಲುಪಿಸಲು ವಿನೂತನ ಮಾರ್ಗವೊಂದನ್ನು ಕಂಡುಹಿಡಿದಿದ್ದಾರೆ.


ದಿ ಫಿಲ್ಮ್‌ ಮೇಕರ್ಸ್‌ ಯುನೈಟೆಡ್‌ ಕ್ಲಬ್‌ ವೆಬ್‌ಸೈಟ್‌ನಲ್ಲಿ ಕೆ. ಶಿವರಾಮಕಾರಂತರ ಕೃತಿ ಆಧರಿಸಿದ ‘ಮೂಕಜ್ಜಿಯ ಕನಸುಗಳು’ ಸಿನಿಮಾ ಮರು ಬಿಡುಗಡೆ ಮಾಡಲು ವಿಶಿಷ್ಟಯೋಜನೆ ಹಾಕಿಕೊಂಡಿದ್ದಾರೆ.

- ಮೂಕಜ್ಜಿಯ ಕನಸುಗಳು ಸಿನಿಮಾ ನೋಡಲು ಬೇಡಿಕೆ ಹೆಚ್ಚಿದ್ದರಿಂದ ವೆಬ್‌ಸೈಟ್‌ನಲ್ಲಿ ಮರುಬಿಡುಗಡೆ ಮಾಡಲು ನಿರ್ಧಾರ.

Tap to resize

Latest Videos

- ಆಸಕ್ತಿ ಇರುವವರು ದಿ ಫಿಲ್ಮ್‌ ಮೇಕರ್ಸ್‌ ಯುನೈಟೆಡ್‌ ಕ್ಲಬ್‌ ವೆಬ್‌ಸೈಟ್‌ನಲ್ಲಿ 300 ರೂಪಾಯಿ ನೀಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು.

- 3000 ಮಂದಿ ಹೆಸರು ನೋಂದಾಯಿಸಿದರೆ ಅಕ್ಟೋಬರ್‌ 1ರಂದು ಎಫ್‌ಯುಸಿ ವೆಬ್‌ಸೈಟ್‌ನಲ್ಲಿ ಈ ಸಿನಿಮಾ ಲಭ್ಯವಾಗಲಿದೆ.

ಚಿತ್ರ ವಿಮರ್ಶೆ : ಮೂಕಜ್ಜಿಯ ಕನಸುಗಳು 

- ಅಂದಿನಿಂದ ಒಂದು ವರ್ಷಗಳ ಕಾಲ ಆ ಸಿನಿಮಾವನ್ನು ಎಷ್ಟುಸಲ ಬೇಕಾದರೂ ನೋಡಬಹುದು. ಯಾರಿಗೆ ಬೇಕಾದರೂ ತೋರಿಸಬಹುದು.

- ಒಂದು ವೇಳೆ 3000 ಮಂದಿ ಹೆಸರು ನೋಂದಾಯಿಸದೆ ಇದ್ದರೆ ಸಿನಿಮಾ ಬಿಡುಗಡೆ ಆಗುವುದಿಲ್ಲ. ಆಗ ಯಾರಾರು ಹೆಸರು ನೋಂದಾಯಿಸಿಕೊಂಡಿರುತ್ತಾರೋ ಅವರಿಗೆ ಹಣ ಮರಳಿಸಲಾಗುವುದು ಎಂದು ನಿರ್ದೇಶಕ ಪಿ. ಶೇಷಾದ್ರಿ ತಿಳಿಸಿದ್ದಾರೆ.

ಇದೊಂದು ವಿನೂತನ ವಿಶಿಷ್ಟಯೋಜನೆಯಾಗಿದ್ದು, ಈ ಪ್ರಯತ್ನದಲ್ಲಿ ಗೆದ್ದರೆ ಸದಭಿರುಚಿಯ ಸಿನಿಮಾ ಬಿಡುಗಡೆಗೆ ಹೊಸತಾಂದು ದಾರಿ ತೆರೆದುಕೊಳ್ಳಲಿದೆ. ಹಾಗಾಗಿ ಆಸಕ್ತರು ಈ ಸಿನಿಮಾ ನೋಡಲು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.

ಲಿಂಕ್‌-https://www.thefuc.in/content/mookajjiya-kanasugalu_demand/ 

click me!