
ಇತ್ತೀಚಿಗೆ ಕನ್ನಡದ ನಟ ಹರ್ಷಿಕಾ ಪೂಣಚ್ಚ ಬಾಲಿವುಡ್ ನಟ ಗೋವಿಂದ್ ಅವರನ್ನು ಭೇಟಿ ಮಾಡಿದ್ದಾರೆ. ಚಿತ್ರವೊಂದರ ಚಿತ್ರೀಕರಣದ ವೇಳೆ ಇಬ್ಬರೂ ಒಟ್ಟಿಗೆ ಸಮಯ ಕಳೆಯುವಾಗ, ಡಾ.ರಾಜ್‌ಕುಮಾರ್ ಚಿತ್ರದ ಹಾಡೊಂದನ್ನು ಹಾಡಿದ್ದಾರೆ. ಗೋವಿಂದ ಕನ್ನಡ ಭಾಷೆ ಬಗ್ಗೆ ಹೊಂದಿರುವ ಪ್ರೀತಿ ಮೆಚ್ಚಿ ಅಭಿಮಾನಿಗಳು ಈ ವಿಡಿಯೋವನ್ನು ಎಲ್ಲೆಡೆ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ತಾಯಿಗಾಗಿ ಪ್ರೀತಿಸಿದ ನಟಿಯ ಬಿಟ್ಟ ಬಾಲಿವುಡ್ ನಟ ಗೋವಿಂದ!
'ಹಾಯ್ ಗೈಯ್ಸ್ ಇವತ್ತು ನನ್ನ ಜೊತೆ ತುಂಬಾ ಸ್ಪೆಷಲ್ ವ್ಯಕ್ತಿ ಇದ್ದಾರೆ. ನೀವು ನೋಡಿದ್ರೆ ಶಾಕ್ ಆಗ್ಬಿಡ್ತೀರಾ, ಶಾಕ್ ಆಗ್ಬೇಕು ಅಂತಲೇ ಅವರ ಪಕ್ಕ ಕೂತಿದ್ದೀನಿ. ಇವಾಗ ಅವ್ರು ನಿಮಗಾಗಿ ಒಂದು ಕನ್ನಡ ಹಾಡನ್ನು ಹಾಲಿದ್ದಾರೆ,' ಎಂದು ಹೇಳುವ ಮೂಲಕ ದಿ ಲೆಜೆಂಡ್ ಗೋವಿಂದ ಅವರನ್ನು ಹರ್ಷಿಕಾ ಪರಿಚಯಿಸಿಕೊಟ್ಟಿದ್ದಾರೆ.
ಹರ್ಷಿಕಾ ಇಟ್ಟ ಬೇಡಿಕೆಯಂತೆ ಡಾ. ರಾಜ್‌ಕುಮಾರ್ ಅವರ 'ಎಂದೆಂದೂ ನಿನ್ನನು ಮರೆತು ಬದುಕಿರಲಾರೆ..' ಹಾಡನ್ನು ಹಾಡಿದ್ದಾರೆ. ಗೋವಿಂದ್ ಜೊತೆ ಹರ್ಷಿಕಾ ಕೂಡ ಧ್ವನಿ ಸೇರಿಸಿದ್ದಾರೆ. ಏನಾದರೂ ತಪ್ಪ ಹಾಡಿದರೆ ದಯವಿಟ್ಟು ಕ್ಷಮಿಸಿ ಎಂದು ಗೋವಿಂದ್ ಹೇಳಿದ್ದಾರೆ.
ತಂದೆ ನೆನೆದು ಕಣ್ಣೀರಿಟ್ಟ ನಟಿ ಹರ್ಷಿಕಾ; 'ಗೊತ್ತಾಗಿದ್ರೆ ಅವ್ರು ಜತೆ ಸಮಯ ಕಳೆಯುತ್ತಿದ್ದೆ'
ಈ ಹಿಂದೆಯೂ ಇಂಡಿಯನ್ ಐಡಲ್ ಸಂಗೀತ ಕಾರ್ಯಕ್ರಮದಲ್ಲಿ ಗೋವಿಂದ್ ಭಾಗಿಯಾಗಿದ್ದಾಗ ಕನ್ನಡಿಗನನ್ನು ವೇದಿಕೆಯ ಮೇಲೆ ಕಂಡು ಸಂತಸ ವ್ಯಕ್ತ ಪಡಿಸಿದ್ದರು. ರಾಜ್‌ಕುಮಾರ್ ಅಭಿನಯದ ಎರಡು ಕನಸು ಚಿತ್ರದ 'ಎಂದೆಂದೂ ನಿನ್ನನು ಮರೆತು' ಹಾಡನ್ನು ಆಗಲೂ ಹಾಡಿದ್ದರು. ಗೋವಿಂದ ಅವರ ಕನ್ನಡ ಪ್ರೀತಿಗೆ ಕನ್ನಡಿಗರ ಹೃದಯ ಗೆದ್ದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.