ಮಂತ್ರಾಲಯಕ್ಕೆ ಭೇಟಿ ಕೊಟ್ಟ ಹರಿಪ್ರಿಯಾ; ಶ್ರೀ ಸುಬುಧೇಂದ್ರ ತೀರ್ಥರಿಂದ ಸನ್ಮಾನ ಗೌರವ!

Suvarna News   | Asianet News
Published : Mar 24, 2021, 12:24 PM ISTUpdated : Mar 24, 2021, 12:44 PM IST
ಮಂತ್ರಾಲಯಕ್ಕೆ ಭೇಟಿ ಕೊಟ್ಟ ಹರಿಪ್ರಿಯಾ; ಶ್ರೀ ಸುಬುಧೇಂದ್ರ ತೀರ್ಥರಿಂದ ಸನ್ಮಾನ ಗೌರವ!

ಸಾರಾಂಶ

ನಟಿ ಹರಿಪ್ರಿಯಾ ಮಂತ್ರಾಲಯದ ಗುರು ರಾಯರ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಇಂದು ತುಂಬಾ ವಿಶೇಷವಾದ ದಿನವೆಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.   

ಚಂದನವನದ ಸುಂದರಿ ಹರಿಪ್ರಿಯಾ ರಾಯರ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡು, ಇಂದು ವಿಷೇಶವಾದ ದಿನವೆಂದು ಬರೆದುಕೊಂಡಿದ್ದಾರೆ. 

'ಶ್ರೀ ಸುಬುಧೇಂದ್ರ ತೀರ್ಥರು ಸನ್ಮಾನ ಮಾಡಿ ಗೌರವಿಸಿದ್ದಾರೆ.  ರಾಘವೇಂದ್ರ ಸ್ವಾಮಿ ಜನ್ಮದಿನದಂದು ಸನ್ಮಾನ ಮಾಡಿಸಿಕೊಳ್ಳುವುದಕ್ಕಿಂತ ಮತ್ತೇನು ವಿಶೇಷತೆ ಬೇಕು. ದರ್ಶನ ಅದ್ಭುತವಾಗಿತ್ತು. ಅವರ ಆತಿಥ್ಯ ಮತ್ತು ಅಲ್ಲಿನ ವೈಬ್ಸ್‌ ಅದ್ಭುತ,' ಎಂದು ಬರೆದುಕೊಂಡಿದ್ದಾರೆ.

ಮಂತ್ರಾಲಯ ರಾಯರ ದರ್ಶನ ಪಡೆದು ಗೋಶಾಲೆಗೆ ಭೇಟಿ ಕೊಟ್ಟ ನಟ ದರ್ಶನ್; ಫೋಟೋಗಳಿವು!

ಕೆಲವು ದಿನಗಳ ಹಿಂದೆ ರಾಬರ್ಟ್‌ ವಿಜಯ ಯಾತ್ರೆ ಪ್ರಯುಕ್ತ ದರ್ಶನ್‌ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು  ರಾಯರ ಪವಾಡದ ಬಗ್ಗೆ ಮಾತನಾಡಿದ್ದರು.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಹರಿಪ್ರಿಯಾ ಸದ್ಯ ಪೆಟ್ರೋಮ್ಯಾಕ್ಸ್ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ರಿಷಬ್ ಶೆಟ್ಟಿ ಜೊತೆ ಬೆಲ್ ಬಾಟಮ್ 2 ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲದೇ ಉಪೇಂದ್ರ ಜೊತೆಗೆ ಕೌಟುಂಬಿಕ ಚಿತ್ರಕತೆಯೊಂದಕ್ಕೂ ಸಹಿ ಮಾಡಿದ್ದಾರೆ ಎಂಬ ಸುದ್ದಿಯೂ ಕೇಳಿ ಬಂದಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ
ಯಶ್- ರಾಧಿಕಾ ಪುತ್ರಿಗೆ 7 ವರ್ಷಗಳ ಸಂಭ್ರಮ: ಹುಟ್ಟುಹಬ್ಬದ ಕ್ಯೂಟ್​ ಫೋಟೋಗಳು ಇಲ್ಲಿವೆ