ನಾಗತಿಹಳ್ಳಿ ಸಿನಿಮಾ ಶಾಲೆಯಲ್ಲಿ ನಟ ರಿಷಿ ಜೊತೆ ಮಾತುಕತೆ..!

Suvarna News   | Asianet News
Published : Mar 24, 2021, 12:15 PM ISTUpdated : Mar 24, 2021, 12:35 PM IST
ನಾಗತಿಹಳ್ಳಿ ಸಿನಿಮಾ ಶಾಲೆಯಲ್ಲಿ ನಟ ರಿಷಿ ಜೊತೆ ಮಾತುಕತೆ..!

ಸಾರಾಂಶ

ಟೆಂಟ್ ಸಿನಿಮಾ - ನಾಗತಿಹಳ್ಳಿ ಸಿನಿಮಾ ಶಾಲೆಯಲ್ಲಿ ಸ್ಯಾಂಡಲ್‌ವುಡ್ ನಟ | ಯುವ ನಟ ರಿಷಿ ಜೊತೆ ಮಾತುಕತೆ

ಟೆಂಟ್ ಸಿನಿಮಾ - ನಾಗತಿಹಳ್ಳಿ ಸಿನಿಮಾ ಶಾಲೆಯಲ್ಲಿ ಸ್ಯಾಂಡಲ್‌ವುಡ್ ನಟ ರಿಷಿ ವಿಶೇಷ ಭಾಷಣ ಮಾಡಲಿದ್ದಾರೆ. ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಟ ರಿಷಿ ಜೊತೆ ಮಾತುಕತೆ ನಡೆಯಲಿದೆ.

ವಿದ್ಯಾರ್ಥಿಗಳು ಸೇರಿ ಬಹಳಷ್ಟು ಜನರು ಟೆಂಟ್ ಸಿನಿಮಾದಲ್ಲಿ ಹಲವು ಕೋರ್ಸ್‌ಗಳನ್ನು ಕಲಿಯುತ್ತಾರೆ. ಇಲ್ಲಿ ನಟನೆ, ನಿರ್ದೇಶನ, ಚಿತ್ರಕಥೆ, ಸಂಭಾಷಣೆ, ಸಿನಿಮಾ ನಿರ್ಮಾಣ ಸೇರಿ ಸಿನಿಮಾಗೆ ಸಂಬಂಧಿಸಿದ ಹಲವು ವಿಚಾರಗಳಲ್ಲಿ  ಆಸಕ್ತರಿಗೆ ತರಬೇತಿ ನೀಡಲಾಗುತ್ತದೆ.

ರವಿ ಬೆಳಗೆರೆ ಮಾಡಿದ್ದೆಲ್ಲವೂ ಏಕವ್ಯಕ್ತಿ ಸಾಹಸ: ನಾಗತಿಹಳ್ಳಿ ಚಂದ್ರಶೇಖರ್

ಬೇಸಗೆ ಸಮಯದಲ್ಲಿ ಮಕ್ಕಳಿಗಾಗಿ ಮತ್ತು ಇತರ ವಯೋಮಾನದವರಿಗಾಗಿಯೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದೀಗ ವಿಶೇಷವಾಗಿ ಏ.04 ಭಾನುವಾರದಂದು ಬೆಳಗ್ಗೆ 9.45ಕ್ಕೆ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.

ಮೂಲತಃ ಬೆಂಗಳೂರಿನವರಾದ ನಟ ರಿಷಿ ಸ್ಯಾಂಡಲ್ವುಡ್‌ನಲ್ಲಿ ಪ್ರತಿಭಾನ್ವಿತ ಯುವ ನಟರಲ್ಲಿ ಒಬ್ಬರು. ಆಪರೇಷನ್ ಅಲಮೇಲಮ್ಮ, ಕವಲುದಾರಿ, ಸಾರ್ವಜನಿಕರಿಗೆ ಸುವರ್ಣಾವಕಾಶ, ಶ್ರೀ ಭರತ ಬಾಹುಬಲಿ, ಆಟಗಾರ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ
ಯಶ್- ರಾಧಿಕಾ ಪುತ್ರಿಗೆ 7 ವರ್ಷಗಳ ಸಂಭ್ರಮ: ಹುಟ್ಟುಹಬ್ಬದ ಕ್ಯೂಟ್​ ಫೋಟೋಗಳು ಇಲ್ಲಿವೆ