
ಬೆಂಗಳೂರು(ಜೂ. 22) ಅಪಘಾತದಿಂದ ನಿಧನಹೊಂದಿದ ರಾಷ್ಟ್ರ ಪ್ರಶಸ್ತಿ ವಿಜೇತ ನಟ ದಿವಂಗತ ಸಂಚಾರಿ ವಿಜಯ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಂದಂತಿಗಳ ಬಗ್ಗೆ ವಿಜಯ್ ಅಣ್ಣ ಸ್ಪಷ್ಟನೆ ನೀಡಿದ್ದಾರೆ.
ಸಂಚಾರಿ ವಿಜಯ್ ಹಿನ್ನೆಲೆ ಮತ್ತು ಕುಟುಂಬದ ಬಗ್ಗೆ ವದಂತಿಗಳು ಹರಿದಾಡುತ್ತಿದ್ದವು. ರಾಷ್ಟ್ರ ಪ್ರಶಸ್ತಿ ವಿಜೇತ ನಟನ ಬಗ್ಗೆ ಹರಿದಾಡುತ್ತಿರೋ ಸುದ್ದಿಗಳ ಬಗ್ಗೆ ವಿಜಯ್ ಕುಟುಂಬದವರು ಸ್ಪಷ್ಟನೆ ನೀಡಿದ್ದಾರೆ.
ಸಂಚಾರಿ ವಿಜಯ್ ಬೈಕ್ ಅಪಘಾತವಾಗಿದ್ದು ಹೇಗೆ?
ನಮ್ಮ ಕುಟುಂಬಕ್ಕೆ ಆಗುತ್ತಿರುವ ನೋವನ್ನು ಅರ್ಥ ಮಾಡಿಕೊಂಡು, ಚರ್ಚೆಗಳನ್ನು ಇಲ್ಲಿಗೆ ನಿಲ್ಲಿಸಿ ಎಂದು ಕೇಳಿದ ಸಂಚಾರಿ ವಿಜಯ್ ಸಹೋದರ ವಿರುಪಾಕ್ಷ ಬಸವರಾಜಯ್ಯ ಮನವಿ ಮಾಡಿಕೊಂಡಿದ್ದಾರೆ. ನಮ್ಮ ತಂದೆ ತಾಯಿ ಇಬ್ಬರು ಕಲಾವಿದರು ಎಂಬುದನ್ನು ತಿಳಿಸಿದ್ದಾರೆ.
ವಿಜಯ್ ನಿಧನದ ಬಳಿಕ ಯಾಕೆ ಈಗ ಚರ್ಚೆ ಮಾಡುತ್ತಿದ್ದೀರಿ.? ಜಾತಿ ವಿಚಾರವನ್ನು ಎಳೆದು ತರುವುದು ಯಾಕೆ? ನಮ್ಮ ಕುಟುಂಬಕ್ಕೆ ಆಗುತ್ತಿರುವ ನೋವನ್ನು ಅರ್ಥ ಮಾಡಿಕೊಂಡು, ಚರ್ಚೆಗಳನ್ನು ಇಲ್ಲಿಗೆ ನಿಲ್ಲಿಸಿ ಎಂದು ಕೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.