
ಬೆಂಗಳೂರು(ಜೂ.22): ಭಾರತದ ಕೊಳಕು ಭಾಷೆ ಯಾವುದೆಂದು ಹುಡುಕಿದರೆ ಕನ್ನಡ ಎಂದು ತೋರಿಸಿ, ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿ ಬಳಿಕ ಕ್ಷಮೆ ಯಾಚಿಸಿದ್ದ ಗೂಗಲ್ ಈಗ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.
ಗೂಗಲ್ ಬೆನ್ನಲ್ಲೇ ಅಮೇಜಾನ್ ಉದ್ಧಟತನ, ಮಹಿಳೆಯರ ಒಳ ಉಡುಪಿನಲ್ಲಿ ಕನ್ನಡ ಧ್ವಜ!
ಮಾಧವನ್ ಹಾಗೂ ವಿಜಯ್ ಸೇತುಪತಿ ನಟಿಸಿದ್ದ ತಮಿಳಿನ ವಿಕ್ರಮ್ ವೇದಾ ಸಿನಿಮಾದಲ್ಲಿ ನಟಿಸಿರುವ ರಾಜ್‌ಕುಮಾರ್ ಎಂಬ ನಟನ ಬದಲಾಗಿ ಕನ್ನಡದ ವರನಟ ಡಾ| ರಾಜ್‌ಕುಮಾರ್ ಫೋಟೋವನ್ನು ಗೂಗಲ್ ತೋರಿಸುತ್ತಿದೆ. ಇದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಚಿತ್ರದಲ್ಲಿ ರಾಜ್‌ಕುಮಾರ್ ನಟಿಸಿರುವ ಪಾತ್ರದ ಹೆಸರು ಹಾಫ್ ಬಾಯ್ಲ್ಡ್. ಹೀಗಾಗಿ ಹೀಗಾಗಿ ಗೂಗಲ್ ವೆಬ್ ಸರ್ಚ್‌ನಲ್ಲಿ ಕಾಸ್ಟ್ ಆಫ್ ವಿಕ್ರಮ್ ವೇದಾ ಹಾಫ್ ಬಾಯ್ಲ್ಡ್ ಎಂದು ಟೈಪ್ ಮಾಡಿದರೆ ಚಿತ್ರದ ಲ್ಯಾಂಡಿಂಗ್ ಪೇಜ್‌ನಲ್ಲಿ ಕನ್ನಡದ ವರನಟ ರಾಜ್‌ಕುಮಾರ್ ಅವರ ಫೋಟೋ ತೋರಿಸುತ್ತಿದೆ.
ಕನ್ನಡಿಗರ ಕ್ಷಮೆಯಾಚಿಸಿದ ಗೂಗಲ್, ಇನ್ನುಮುಂದೆ ಹೀಗಾಗಲ್ಲ
ಹಾಫ್ ಬಾಯ್ಲ್ಡ್ ಎಂದರೆ ಅರೆಬೆಂದ ಎಂದು ಅರ್ಥ ಇರುವ ಕಾರಣ, ಆ ಆರೀತಿಯ ಪದಕ್ಕೆ ರಾಜ್‌ಕುಮಾರ್ ಪೋಟೋ ತೋರಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಾಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಗೂಗಲ್ ಸಂಸ್ಥೆ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.