ಆಪ್ತರನ್ನು ಕಳೆದುಕೊಂಡೆ, ಬೇರೆಯವರ ನೋಡಿ ಭಯವಾಗುತ್ತಿತ್ತು: ಸೋನು ಗೌಡ

By Asianet KannadaFirst Published Jun 22, 2021, 1:55 PM IST
Highlights

ಫ್ಯಾಮಿಲಿ ಮತ್ತು ಟೆರೆಸ್ ಗಾರ್ಡನಿಂಗ್‌ ಮಾಡುತ್ತಾ ಸಮಯ ಕಳೆಯುತ್ತಿರುವ ನಟಿ ಸೋನು ಗೌಡ, ಎರಡನೇ ಪ್ಯಾಂಡಮಿಕ್‌ನನ್ನು ಹೇಗೆ ಎದುರಿಸುತ್ತಿದ್ದಾರೆ ಎಂಬುದನ್ನು ಹಂಚಿಕೊಂಡಿದ್ದಾರೆ. 
 

ಸ್ಯಾಂಡಲ್‌ವುಡ್‌ ನಟಿ ಸೋನು ಗೌಡ ಕೊರೋನಾ ಪ್ಯಾಂಡಮಿಕ್‌ನಲ್ಲಿ ಸಹೋದರಿ ನೇಹಾ ಗೌಡ ಮತ್ತು ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ಇಲ್ಲದ ಸಮದಯಲ್ಲಿ ಟೆರೆಸ್ ಗಾರ್ಡನಿಂಗ್ ಮತ್ತು ವಿಭಿನ್ನ ಶೈಲಿಯ ರೆಸಿಪಿಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.  ಪ್ಯಾಂಡಮಿಕ್ ಡೇ ಬಗ್ಗೆ ಖಾಸಗಿ ವೆಬ್‌ಸೈಟ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

'ಮೊದಲನೇ ಅಲೆ ಹೆಚ್ಚಿನ ಸ್ಟ್ರೆಸ್ ನೀಡಿತ್ತು. ಎರಡನೇ ಅಲೆ ದೊಡ್ಡ ಪ್ರಮಾಣದಲ್ಲಿ ಹೊಡೆತ ನೀಡಿದೆ. ಕೇಸ್‌ಗಳು ಹೆಚ್ಚಾಗುತ್ತಿದೆ. ಆದರೆ ನಮ್ಮ ಬಳಿ ಸೋರ್ಸ್‌ಗಳು ಕಡಿಮೆ ಇವೆ.  ಎರಡನೇ ಅಲೆಯಲ್ಲಿ ನನ್ನ ಆಪ್ತರನ್ನು ಕಳೆದುಕೊಂಡಿರುವೆ. ಪ್ರತಿಯೊಬ್ಬರ ಮನೆಯಲ್ಲೂ ಒಬ್ಬ ಪೇಶೆಂಟ್ ಇದ್ದೇ ಇರುತ್ತಿದ್ದರು. ಬದುಕುಳಿಯುವುದಕ್ಕೆ ಹೋರಾಟ ಮಾಡಬೇಕಿತ್ತು. ಕುಟುಂಬ ರಕ್ಷಿಸುವುದಕ್ಕೆ ಹೊರಾಡ ಬೇಕಿತ್ತು. ನಮ್ಮ ಪ್ರತಿ ನಡೆಯನ್ನು ಲೆಕ್ಕ ಹಾಕಬೇಕಿತ್ತು. ಒಂದು ದಿನ ಕಳೆದು ಬದುಕಿದ್ದರೆ, ಯುದ್ಧವನ್ನು ಗೆದ್ದಂತೆ. ಇದರಿಂದ ನಾನು ಚೇತರಿಸಿಕೊಂಡು ಉತ್ತಮವಾಗಲು ಮೂರು ವಾರಗಳು ಬೇಕಾಯಿತು,' ಎಂದು ನಟಿ ಸೋನು ಮಾತನಾಡಿದ್ದಾರೆ.

'ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದಲೂ ನಾನು ಅಡುಗೆ ಮನೆಗೆ ಕಾಲಿಟ್ಟಿರಲಿಲ್ಲ. ಈ ಪ್ಯಾಂಡಮಿಕ್‌ನಲ್ಲಿ ನಾನು ಸರಿಯಾದ ಶೇಪ್‌ನಲ್ಲಿ ಚಪಾತಿ ಮಾಡುವುದನ್ನು ಕಲಿತೆ.  ಸಣ್ಣ ಪುಟ್ಟ ವಿಚಾರಗಳು ಮನಸ್ಸಿಗೆ ಖುಷಿ ಕೊಡುತ್ತಿತ್ತು. ಕೆಲಸದ ಬಗ್ಗೆ ಚಿಂತಿಸುತ್ತಿದೆ, ಬೇರೆಯವರ ಕೆಲಸ ನೋಡಿ ನನಗೆ ಭಯ ಶುರುವಾಗುತ್ತಿತ್ತು. ದಿನವಿಡೀ ಮೊಬೈಲ್‌ನಲ್ಲಿ ದಿನ ಕಳೆಯುತ್ತಿದ್ದೆ. ಮೊಬೈಲ್‌ನಿಂದ ದೂರ ಇರಬೇಕೆಂದು ಗಾರ್ಡನಿಂಗ್ ಮಾಡಲು ಶುರು ಮಾಡಿದೆ,' ಎಂದಿದ್ದಾರೆ ಸೋನು.

click me!