Duniya Vijay: ಮತ್ತೊಂದು ರಕ್ತಸಿಕ್ತ ಅಧ್ಯಾಯಕ್ಕೆ ಆಕ್ಷನ್ ಕಟ್ ಹೇಳಲು ಸಜ್ಜಾದ 'ಸಲಗ'

Suvarna News   | Asianet News
Published : Feb 25, 2022, 10:01 PM IST
Duniya Vijay: ಮತ್ತೊಂದು ರಕ್ತಸಿಕ್ತ ಅಧ್ಯಾಯಕ್ಕೆ ಆಕ್ಷನ್ ಕಟ್ ಹೇಳಲು ಸಜ್ಜಾದ 'ಸಲಗ'

ಸಾರಾಂಶ

'ಸಲಗ' ಯಶಸ್ಸಿನ ಬಳಿಕ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟು ಮತ್ತೊಂದು ರಕ್ತಸಿಕ್ತ ಅಧ್ಯಾಯಕ್ಕೆ ದುನಿಯಾ ವಿಜಯ್ ಸಜ್ಜಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫಸ್ಟ್‌ಲುಕ್ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಕೊರೋನಾ ವೈರಸ್ (Coronavirus) ಎರಡನೇ ಅಲೆ ಬಳಿಕ ಬಿಡುಗಡೆಯಾದ ಕನ್ನಡದ ಮೊದಲ ಸ್ಟಾರ್​ ಸಿನಿಮಾ 'ಸಲಗ' (Salaga) ಮಾಡಿದ ಸದ್ದು ಅಷ್ಟಿಷ್ಟಲ್ಲ. ಈ ಚಿತ್ರದಲ್ಲಿ ದುನಿಯಾ ವಿಜಯ್​ (Duniya Vijay) ನಟಿಸುವ ಜೊತೆಗೆ, ಆ್ಯಕ್ಷನ್​ ಕಟ್​ ಕೂಡ ಹೇಳಿ ಸೈ ಎನಿಸಿಕೊಂಡಿದ್ದಾರೆ. ಈ ಮೂಲಕ ಮೊದಲ ನಿರ್ದೇಶನದಲ್ಲೇ ಅವರು ಗೆದ್ದು ಬೀಗಿದ್ದರು. ಮಾತ್ರವಲ್ಲದೇ ಇತ್ತೀಚೆಗೆ ಚಿತ್ರತಂಡ ಈ ಚಿತ್ರದ ಯಶಸ್ಸನ್ನು ಸಂಭ್ರಮಿಸಿತ್ತು. ಸ್ಯಾಂಡಲ್​ವುಡ್‌ನ ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ (Shivarjkumar) ಅವರು ಸಕ್ಸಸ್​ ಮೀಟ್​ಗೆ ಆಗಮಿಸಿ ಈ ತಂಡಕ್ಕೆ ಶುಭಕೋರಿದ್ದರು. ಇದೀಗ 'ಸಲಗ' ಯಶಸ್ಸಿನ ಬಳಿಕ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟು ಮತ್ತೊಂದು ರಕ್ತಸಿಕ್ತ ಅಧ್ಯಾಯಕ್ಕೆ ದುನಿಯಾ ವಿಜಯ್ ಸಜ್ಜಾಗಿದ್ದಾರೆ.

ಹೌದು! ಮೊದಲ ಬಾರಿಗೆ ನಟ ದುನಿಯಾ ವಿಜಯ್ ನಿರ್ದೇಶನ ಮಾಡಿ ಅಭಿನಯಿಸಿರುವ 'ಸಲಗ' ಚಿತ್ರ ಕಳೆದ ಅಕ್ಟೋಬರ್ 14ಕ್ಕೆ ಬಿಡುಗಡೆ ಆಗಿ ಹಿಟ್ ಆಗಿತ್ತು. ಈ ಚಿತ್ರದಲ್ಲಿ ರೌಡಿಸಂನ ಕಥೆಯನ್ನು ತೆರೆಮೇಲೆ ದುನಿಯಾ ವಿಜಯ್ ತೋರಿಸಿದ್ದರು. ಈ ಸಿನಿಮಾ ಬಗ್ಗೆ ಎಲ್ಲ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿ, ಅನೇಕ ಸೆಲೆಬ್ರಿಟಿಗಳು ಈ ಚಿತ್ರವನ್ನು ಹಾಡಿ ಹೊಗಳಿದ್ದರು. ಹಾಗಾಗಿ ಈ ಯಶಸ್ಸಿನಿಂದ ವಿಜಯ್​ ಅವರ ಕಾನ್ಫಿಡೆನ್ಸ್ ಮತ್ತಷ್ಟು​ ಹೆಚ್ಚಿದ್ದು, ಇದೀಗ ಹೊಸ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ. ಈ ಬಗ್ಗೆ ದುನಿಯಾ ವಿಜಯ್ ಸಾಮಾಜಿಕ ಜಾಲತಾಣದಲ್ಲಿ (Social Media) ಫಸ್ಟ್‌ಲುಕ್ (First Look) ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ನಂದಮೂರಿ ಚಿತ್ರದಲ್ಲಿ ವಿಲನ್‌; ಪಾತ್ರದ ಬಗ್ಗೆ ರಿವೀಲ್ ಮಾಡಿದ Duniya Vijay!

ದುನಿಯಾ ವಿಜಯ್ ಟ್ವೀಟ್ಟರ್‌ನಲ್ಲಿ (Twitter) 'ತಮ್ಮ ನಟನೆಯ 28ನೇ ಸಿನಿಮಾದ ಫಸ್ಟ್‌ಲುಕ್ ಪೋಸ್ಟರನ್ನು ಶೇರ್ ಮಾಡಿಕೊಂಡಿದ್ದು, 'ಮತ್ತೊಮ್ಮೆ ನಿಮ್ಮ ಆಶೀರ್ವಾದದೊಂದಿಗೆ' ಎಂದು ಬರೆದುಕೊಂಡಿದ್ದಾರೆ. ಕೃಷ್ಣ ಸಾರ್ಥಕ್​ ಹಾಗೂ ಜಗದೀಶ್​ ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹೊಸ ಪೋಸ್ಟರ್​ನಲ್ಲಿ ಕೈ ಹಾಗೂ ಯಮಹಾ ಆರ್​ಎಕ್ಸ್​ 100 ಬೈಕ್​ ತೋರಿಸಲಾಗಿದೆ. ಪೋಸ್ಟರ್​ನಲ್ಲಿರುವ ದುನಿಯಾ ವಿಜಯ್ ಕೈ ರಕ್ತಸಿಕ್ತವಾಗಿದೆ. ಇದರಿಂದ ಇದು ಕೂಡ ರೌಡಿಸಂ ಕಥೆ ಎಂಬುದು ಸ್ಪಷ್ಟವಾಗಿದ್ದು, ಈ ಮೂಲಕ ಸಿನಿಮಂದಿಯ ಕುತೂಹಲ ಹೆಚ್ಚಿಸಿದ್ದಾರೆ. ಸದ್ಯ (Mahashivratri) ಮಹಾಶಿವರಾತ್ರಿಯಂದು ಹೊಸ ಸಿನಿಮಾದ ಟೈಟಲ್ (Title)​ ಘೋಷಣೆ ಆಗುವ ಸಾಧ್ಯತೆ ಇದೆ.



ಸಂಗೀತ ನಿರ್ದೇಶಕ ಚರಣ್‌ ರಾಜ್‌ (Charan Raj),  ದುನಿಯಾ ವಿಜಯ್‌ ಅವರ ಹೊಸ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಲಿದ್ದು, ಸೇನಾ ಕ್ಯಾಮೆರಾ ಕೈಚಳಕ, ಮಾಸ್ತಿ (Maasthi) ಸಂಭಾಷಣೆ ಬರೆಯವ ಸಾಧ್ಯತೆಯಿದೆ. ಇನ್ನು ಇತ್ತೀಚೆಗಷ್ಟೇ ನಡೆದ 'ಸಲಗ' ಸಿನಿಮಾ ಸಕ್ಸಸ್​ ಮೀಟ್​ನಲ್ಲಿ ದುನಿಯಾ ವಿಜಯ್ ವೇದಿಕೆಯ ಮೇಲೆ ಭಾವುಕರಾಗಿ ಕಣ್ಣೀರು ಹಾಕಿದ್ದರು. 'ದೇವರಾಣೆ ಸತ್ಯ ಹೇಳುತ್ತೇನೆ. 'ಸಲಗ' ಸಿನಿಮಾವನ್ನು ನಿರ್ಮಿಸುವಂತೆ ಕೆ.ಪಿ.ಶ್ರೀಕಾಂತ್ (KP Srikanth) ಅವರನ್ನು ಕೇಳಲು ಹೋದಾಗ ನನ್ನ ಬಳಿ ಕೇವಲ 40 ರೂಪಾಯಿ ಇತ್ತು'. ಇಂದಿಗೂ ಆ 40 ರೂಪಾಯಿಯನ್ನು ಫೋಟೋ ತೆಗೆದು ಫ್ರೇಂ ಹಾಕಿಸಿ ಇಟ್ಟುಕೊಂಡಿದ್ದೇನೆ ಎಂದು ದುನಿಯಾ ವಿಜಯ್​ ಹೇಳಿದ್ದರು. 

ಕರಿಯಾ ಅಂತ ಒಪ್ಕೊಬೇಕು, ಹೆದರ್ಕೊಂಡ್ರೆ ಹೆದರಿಸುತ್ತಾರೆ ಅದಿಕ್ಕೆ ಎದ್ರಾಕೊಳ್ಳಿ: Duniya Vijay

ಸದ್ಯ ದುನಿಯಾ ವಿಜಯ್ ಟಾಲಿವುಡ್‌ನಲ್ಲಿ (Tollywood) ಬ್ಯುಸಿಯಾಗಿದ್ದು, ನಂದಮೂರಿ ಬಾಲಕೃಷ್ಣ (Nandamuri Balakrishna) ನಟನೆಯ ಹೊಸ ಸಿನಿಮಾದಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಇನ್ನೂ ಈ ಚಿತ್ರಕ್ಕೆ ಶೀರ್ಷಿಕೆ ಇಟ್ಟಿಲ್ಲ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಗೋಪಿಚಂದ್​ ಮಲಿನೇನಿ (Gopichand Malineni) ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. ಇದು ನಂದಮೂರಿ ಬಾಲಕೃಷ್ಣ ನಟಿಸಲಿರುವ 107ನೇ ಸಿನಿಮಾವಾಗಿದ್ದು, ಅವರಿಗೆ ನಾಯಕಿಯಾಗಿ ಶ್ರುತಿ ಹಾಸನ್​ (Shruti Hassan) ಕಾಣಿಸಿಕೊಳ್ಳಲಿದ್ದಾರೆ.  ರಾಯಲಸೀಮಾ ಹಿನ್ನೆಲೆಯಲ್ಲಿ ಚಿತ್ರ ಮೂಡಿ ಬರಲಿದ್ದು, ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ಇನ್ನುಳಿದ ಪಾತ್ರವರ್ಗಗಳ ಬಗ್ಗೆ ಮಾಹಿತಿ ಹೊರಬೀಳಬೇಕಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ