
ಸ್ಯಾಂಡಲ್‌ವುಡ್ (Sandalwood) ಡಿಫರೆಂಟ್ ಡೈರೆಕ್ಟರ್ ಪ್ರೇಮ್ (Jogi Prem) ಮತ್ತು ಕ್ರೇಜಿ ಕ್ವೀನ್ ರಕ್ಷಿತಾ (Rakshitha) ಅವರ ಲವ್ ಸ್ಟೋರಿ (love story) ಇಡೀ ಕರ್ನಾಟಕಕ್ಕೆ ಗೊತ್ತು. ಆರಂಭದಲ್ಲಿ ರಕ್ಷಿತಾ ಆಯ್ಕೆಯನ್ನು ಹಿಯಾಳಿಸುತ್ತಿದ್ದ ಜನರು, ಈಗ ವಾ..ಪ್ರೇಮ್ ಅವರೇ ಪರ್ಫೆಕ್ಟ್ ಜೋಡಿ ಎನ್ನುತ್ತಿದ್ದಾರೆ. ಏಕ್ ಲವ್ ಯಾ ಸಿನಿಮಾ ಮೂಲಕ ರಕ್ಷಿತಾ ತಮ್ಮ ಸಹೋದರ ರಾಣಾನ ಚಿತ್ರರಂಗಕ್ಕೆ ಎಂಟ್ರಿ ಕೊಡ್ಸಿದ್ದಾರೆ, ಅದಕ್ಕೆ ಭಾವ ಪ್ರೇಮ್ ಅವರೇ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗ ಪ್ರೇಮ್‌ನ ನಿರ್ದೇಶಕರು ಎಂದು ಕರೆಯುತ್ತಿದ್ದ ರಾಣಾ ಬಾಲ್ಯದಲ್ಲಿ ಅಂಕಲ್ ಎನ್ನುತ್ತಿದ್ದರಂತೆ. ಪ್ರೇಮ್‌ನ ಮೊದಲು ಭೇಟಿಯಾಗಿದ್ದ ಘಟನೆ ಬಗ್ಗೆ ಹಂಚಿಕೊಂಡಿದ್ದಾರೆ.
ರಾಣಾ ಮಾತು:
'ನಾನು ಪ್ರೇಮ್ ಅವರನ್ನು ಮೊದಲು ಭೇಟಿಯಾದಾಗ, 6 ಅಥವಾ 7ನೇ ಕ್ಲಾಸ್‌ನಲ್ಲಿದ್ದೆ. ಅಕ್ಕ ಪ್ರೇಮ್ ಅವರನ್ನು ಮೊದಲು ಊಟಕ್ಕೆ ಕರೆದುಕೊಂಡು ಬಂದಿದ್ದು. ಬಾಗಿಲು ತೆಗೆದು ನೋಡಿ, ನಾನು ಫುಲ್ ಶಾಕ್ ಆಗಿದ್ದೆ. ಆ ವಯಸ್ಸಿನಲ್ಲಿಯೇ ನಾವು ಯಾರನ್ನೇ ನೋಡಿದರೂ ಅಂಕಲ್ ಎಂದು ಕರೆಯುತ್ತಿದ್ವಿ. ಆಗ ಅವರಿಗೂ ಅಂಕಲ್ (Uncle) ಅಂತ ಹೇಳಿದೆ. ಅಕ್ಕ ಮತ್ತೆ ಆ್ಯಂಗಲ್ ಮೀಟ್ ಮಾಡಿ ಎಷ್ಟು ತಿಂಗಳು ಅಥವಾ ವರ್ಷ ಆಗಿತ್ತೋ ಗೊತ್ತಿಲ್ಲ. ಆದರೆ ನಾನು ಊಟ ಮಾಡುವಾಗ ಮೊಸರು ಎಲ್ಲಾ ಹಾಕ್ಕೊಂಡು ತಿನ್ನುತ್ತಾ ಇದ್ದೆ. ಅಕ್ಕ ಲುಕ್ ಕೊಟ್ಟಳು. ಡೀಸೆಂಟ್ ಆಗಿ ತಿನ್ನು ಅಂದ್ಲು. ನಮ್ಮ ಡೈರೆಕ್ಟರ್ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ,' ಎಂದು ರಾಣಾ ಖಾಸಗಿ ಸಂದರ್ಶನದಲ್ಲಿ ಅಕ್ಕ-ಭಾವನ ಲವ್ ಬಗ್ಗೆ ಮಾತನಾಡಿದ್ದಾರೆ.
ರಕ್ಷಿತಾ ಮದುವೆ:
'ಮನೆಗೆ ಕರೆದುಕೊಂಡು ಬಂದಿದ್ದಾರೆ ಅಂದ್ರೆ ಏನೋ ಇದೆ ಅಂತ ಗೊತ್ತಾಯ್ತು. ಅಮ್ಮ ಅಪ್ಪ ಎಲ್ಲಾ ಮಾತನಾಡಿಸುತ್ತಿದ್ದರು, ಏನೋ ನಡೆಯುತ್ತಿದೆ. ಬೇರೆ ಲೆವೆಲ್‌ನಲ್ಲಿ ಇದೆ ಆದರೆ ನನಗೆ ಮಾತ್ರ ಗೊತ್ತಿಲ್ಲ ಅಂತ. ಅವರು ಮನೆಗೆ ಬರುವುದು ಜಾಸ್ತಿ ಆಯ್ತು. ಆಮೇಲೆ ಕನ್ಫರ್ಮ್ ಆಯ್ತು. ಎರಡು ಮೂರು ತಿಂಗಳು ಆದ್ಮೇಲೆ ನಿಶ್ಚಿತಾರ್ಥದ (Engagement) ಮಾತು ಬಂದು. ಅವರು ಎಂಗೇಜ್‌ಮೆಂಟ್ ಈಗಲೂ ನೆನಪಿದೆ. ನಿಶ್ಚಿತಾರ್ಥ ಆಗಿ ಒಂದು ವರ್ಷ ಆದ್ಮೇಲೆ ಮದುವೆಯೂ ಆದ್ರು. ಆಗಲೇ ಅವರು ಫಿಕ್ಸ್ ಆಗಿದ್ರು. ಮದುವೆ ಆದ್ಮೇಲೆ ಸಿನಿಮಾ ಮಾಡಲ್ಲ ಅಂತ. ಅದಕ್ಕೆ ಆ ಒಂದು ವರ್ಷ ಗ್ಯಾಪಲ್ಲಿ ಸಿನಿಮಾ ಮುಗಿಸಿದ್ದರು,' ಎಂದು ರಾಣಾ ಹೇಳಿದ್ದಾರೆ.
'ಅಕ್ಕನ ಮದುವೆ ಸಮಯದಲ್ಲಿ ಅದೆಷ್ಟೋ ನಿರ್ದೇಶಕರು (Directors) ಮನೆಗೆ ಬಂದು ಇದೊಂದು ಸೈನ್ ಮಾಡಿ ಈ ಸಿನಿಮಾ ಮಾಡಿಕೊಡು ಅಂತ ಹೇಳ್ತಿದ್ರು. ಎಷ್ಟೋ ಸಿನಿಮಾ ಮುಟ್ಟಿಲ್ಲ ಅಕ್ಕ. ಒಂದು ವರ್ಷ ಆದ್ಮೇಲೆ ಮದುವೆ ಆದ್ರು. ನಮ್ಮ ಅಕ್ಕನ ಕ್ಯಾರೆಕ್ಟರ್ ಹೇಗೆ ಅಂದ್ರೆ ನೋ ಫಿಲ್ಟರ್. ಅವರ ಗಂಡ ಜೊತೆಗೂ ನೋ ಫಿಲ್ಟರ್. ಎಲ್ಲಾರ ಜೊತೆ ಒಂದೇ ರೀತಿ ಇರ್ತಾಳೆ. ನಮ್ಮ ನಿರ್ದೇಶಕರು ಗೊತ್ತು ಅಲ್ವಾ ತುಂಬಾನೇ ಸಾಫ್ಟ್. ಅವರ ಕೆಮಿಸ್ಟ್ರಿ ಸೂಪರ್ ಆಗಿದೆ. ನೋಡುವವರಿಗೆ ಕ್ಯೂಟ್ ಅನ್ಸುತ್ತೆ,' ಎಂದಿದ್ದಾರೆ ರಾಣಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.