ಯಶ್ ನಟಿಸಿರೋ ಕೆಜಿಎಫ್ ೨ ಅಪ್‌ಡೇಟ್ಸ್ ಏನು, ನೇಶನ್ ವಾಂಟ್ಸ್ ಟು ನೋ ಅಂತ ಫ್ಯಾನ್ಸ್ ತಂಡವನ್ನು ರೋಸ್ಟ್ ಮಾಡ್ತಿದೆ. ಕೊನೆಗೂ ಅಭಿಮಾನಿಗಳ ಬೇಡಿಕೆಗೆ ಮಣಿದು ಅಪ್‌ಡೇಟ್ ಕೊಡಲು ಕೆಜಿಎಫ್ ಟೀಮ್ ಮುಂದಾಗಿದೆ. ಸೋ ಟ್ರೈಲರ್ ಮೊದಲಾ, ಸಾಂಗ್ ಮೊದಲಾ.. ಅಂತ ಕೇಳ್ತಿರೋ ಫ್ಯಾನ್ಸ್‌ಗೆ ಟೀಮ್ ಕೊಟ್ಟ ಉತ್ತರ ಏನು?
ಕೆಜಿಎಫ್ (KGF) ದೇಶಾದ್ಯಂತ ಸಂಚಲನ ಮೂಡಿಸಿ ಜಯಭೇರಿ ಬಾರಿಸಿರುವ ಚಿತ್ರ. ಯಶ್ (Yash), ಶ್ರೀನಿಧಿ ಶೆಟ್ಟಿ, ಅನಂತ್‌ನಾಗ್ (Ananthnag) ಮುಖ್ಯಪಾತ್ರದಲ್ಲಿರುವ ಈ ಚಿತ್ರ 2018ರಲ್ಲಿ ಬಿಡುಗಡೆಯಾಗಿ ವಿಶ್ವದ ಗಮನ ಸೆಳೆಯಿತು. ಸುಮಾರು 250 ಕೋಟಿ ರೂಪಾಯಿ ಗಳಿಕೆ ಮಾಡಿದ ಮೊದಲ ಕನ್ನಡ ಸಿನಿಮಾ ಅನ್ನೋ ಹೆಗ್ಗಳಿಕೆಯೂ ಈ ಚಿತ್ರಕ್ಕೆ ಸಿಕ್ತು. ಪ್ರಶಾಂತ್ ನೀಲ್ (Prashant Neel) ಚಿತ್ರದ ನಿರ್ದೇಶಕ. ವಿಜಯ್ ಕಿರಗಂದೂರು (Vijay kiraganduru) ಹೊಂಬಾಳೆ ಫಿಲಂಸ್ (Hombale Films) ಬ್ಯಾನರ್‌ನಡಿ ಈ ಸಿನಿಮಾ ನಿರ್ಮಿಸಿದ್ದಾರೆ. ಈ ಚಿತ್ರದ ಯಶಸ್ಸಿನಿಂದ ಸ್ಫೂರ್ತಿ ಪಡೆದ ಕೆಜಿಎಫ್ ಟೀಮ್ ಅದರ ಸೀಕ್ವಲ್ ತರಲು ಮುಂದಾಯ್ತು. ಹಾಗೆ ರೆಡಿಯಾದ ಚಿತ್ರ 'ಕೆಜಿಎಫ್ 2' ಬರುವ ಏಪ್ರಿಲ್ ತಿಂಗಳ 14ನೇ ತಾರೀಕಿಗೆ ಬಿಡುಗಡೆ ಕಾಣುತ್ತಿದೆ. ಇದರಲ್ಲೂ ಯಶ್, ಶ್ರೀನಿಧಿ ನಾಯಕ ನಾಯಕಿಯಾಗಿ ಮಿಂಚಿದ್ದರೆ, ಬಾಲಿವುಡ್ ನಟರಾದ ಸಂಜಯ್ ದತ್ತ್ (Sanjay Dutt), ರವೀನಾ ಟಂಡನ್ (Raveen Tandon) ಮುಖ್ಯ ಪಾತ್ರಗಳಲ್ಲಿದ್ದಾರೆ.
We know the wait has been exasperating. But, we are very excited to see the eagerness of our beloved fans to get a glimpse of KGF: Chapter 2. What do you want to see first?
Let the KGF army decide the next move!
ಎಲ್ಲಾ ಸರಿಯಾಗಿದ್ದರೆ ಈ ಚಿತ್ರ ಕಳೆದ ವರ್ಷವೇ ಬಿಡುಗಡೆ ಆಗಬೇಕಿತ್ತು. ಆದರೆ ಕೋವಿಡ್‌ನಿಂದ ಚಿತ್ರದ ಬಿಡುಗಡೆ ಮುಂದಕ್ಕೆ ಹೋಯ್ತು. ಇದೀಗ ಚಿತ್ರದ ಬಿಡುಗಡೆಗೆ ಕೊನೆಗೂ ಶುಭ ಘಳಿಗೆ ಕೂಡಿ ಬಂದಿದೆ. ಸಿನಿಮಾ ರಿಲೀಸ್ ದಿನಾಂಕವನ್ನು ಟೀಮ್ ಘೋಷಿಸಿ ಸುಮಾರು ಏಳೆಂಟು ತಿಂಗಳು ಕಳೆದಿವೆ. ಸಾಮಾನ್ಯ ಹಾಗೆ ಡೇಟ್ ಅನೌನ್ಸ್ ಮಾಡಿದ ಮೇಲೆ ಲಿರಿಕಲ್ ಸಾಂಗ್, ಟೀಸರ್ ಇತ್ಯಾದಿ ಹೊರಬಿಡೋದು ರೂಢಿ. ಆದರೆ ಈ ತಂಡ ಒಂದು ಟೀಸರ್ ರಿಲೀಸ್ ಮಾಡಿ ಕ್ಷಣ ಮಾತ್ರದಲ್ಲಿ ಕೋಟ್ಯಂತರ ವೀಕ್ಷಣೆ ದಾಖಲೆ ಮಾಡಿದ್ದು ಬಿಟ್ಟರೆ ಮತ್ಯಾವ ಅಪ್‌ಡೇಟ್ಸ್‌ಅನ್ನೂ ಫ್ಯಾನ್ಸ್ ಗೆ ನೀಡಿಲ್ಲ. ಹೀರೋ ಯಶ್ ಬರ್ತ್ ಡೇ ಇದ್ದಾಗಲಾದರೂ ಅಪ್‌ಡೇಟ್ಸ್ ಸಿಗಬಹುದು ಅಂದುಕೊಂಡರೆ ಸಿಂಪಲ್ಲಾಗಿ ಏನೋ ಪೋಸ್ಟರ್ ರೆಡಿ ಮಾಡಿ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ.
Ek Love Ya Film Review: ಪ್ರೀತಿಯ ಮತ್ತೊಂದು ಆಯಾಮ
ಆದರೆ ಫ್ಯಾನ್ಸ್ ಸುಮ್ಮನೆ ಬಿಟ್ಟಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಟೀಮ್ ಮೇಲೆ ಅಪ್ ಡೇಟ್ಸ್ ಕೊಡಿ ಅಂತ ಒತ್ತಡ ಹಾಕ್ತನೇ ಇದ್ರು. ಸಿನಿಮಾ ಟೀಮ್‌ನವರು ರೆಸ್ಪಾನ್ಸೇ ಮಾಡದಿದ್ದಾಗ ರೊಚ್ಚಿಗೆದ್ದು ಪ್ರಧಾನಿ ಅವರೇ ಕೇಳುವಂತೆ ಅವರ ಲೆಟರ್ ಹೆಡ್‌ನಲ್ಲಿ ರಿಕ್ವೆಸ್ಟ್ ಕಳಿಸಿದ್ದು ಭಾರೀ ಸುದ್ದಿಯಾಯ್ತು. ಇಷ್ಟೆಲ್ಲ ಆದ್ಮೇಲೆ ಕೆಜಿಎಫ್ ೨ ಟೀಮ್ ಎಚ್ಚೆತ್ತುಕೊಂಡಂತಿದೆ. ಅದೀಗ ಅಪ್ ಡೇಟ್ಸ್ ನೀಡಲು ಮುಂದಾಗಿದೆ.
KGF Chapter 2 ಇದೇ ಏಪ್ರಿಲ್ 14 ಕ್ಕೆ ಕೆಜಿಎಫ್ 2 ವಿಶ್ವದಾದ್ಯಂತ ತೆರೆಗೆ
ಸಾಮಾನ್ಯ ಚಿತ್ರವಾಗಿದ್ದರೆ ಮೊದಲು ಟೀಸರ್, ಲಿರಿಕಲ್ ಹಾಡು ಇತ್ಯಾದಿ ರಿಲೀಸ್ ಮಾಡಿ ಟ್ರೈಲರ್ ಬಿಡುಗಡೆ ಮಾಡೋದು ವಾಡಿಕೆ. ಆದರೆ ಕೆಜಿಎಫ್ ೨ ಟೀಮ್‌ನವರು ಎಲ್ಲದರಲ್ಲೂ ಡಿಫರೆಂಟ್. ಅವರು ಈ ಫಾರ್ಮ್ಯಾಟ್ ಮುರಿದು ಹೊಸದೇನಾದ್ರೂ ಕೊಡ್ತಾರ ಅನ್ನೋ ನಿರೀಕ್ಷೆ ಇತ್ತು. ಆದರೆ ಟೀಮ್‌ನವರು ಈ ಆಯ್ಕೆಯನ್ನು ಅಭಿಮಾನಿಗಳಿಗೇ ಬಿಟ್ಟಿದ್ದಾರೆ. ಕೆಜಿಎಫ್ ೨ನಲ್ಲಿ ಮೊದಲು ಯಾವ ಅಪ್‌ಡೇಟ್ ಬಯಸುತ್ತೀರಿ, ಟ್ರೈಲರ್ ಮೊದಲು ಬಿಡುಗಡೆ ಮಾಡೋದಾ, ಸಾಂಗ್ ಬೇಕಾ ಅಥವಾ ಸರ್ಪೈಸ್ ಆಗಿ ಏನಾದ್ರೂ ಕೊಡಬೇಕಾ ಅಂತ ಟ್ವಿಟ್ಟರ್ ನಲ್ಲಿ ಪೋಲಿಂಗ್ ಶುರು ಮಾಡಿದೆ.
ಬರಗೆಟ್ಟ ಫ್ಯಾನ್ಸ್‌ಟ್ರೈಲರೇ (railer) ಫಸ್ಟ್ ಬಿಡಿ ಅಂತ ಓಟ್ ಮಾಡುತ್ತಿದ್ದಾರೆ. ಅತೀ ಹೆಚ್ಚಿನ ಅಭಿಮಾನಿಗಳ ಮತ ಟ್ರೈಲರ್ ರಿಲೀಸ್‌ಗೇ ಇದೆ. ಸೋ ಹೀಗಾಗಿ ಸದ್ಯದಲ್ಲೇ ಟ್ರೈಲರ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಸಿನಿಮಾ ರಿಲೀಸ್ ದಿನವೂ ಹೆಚ್ಚು ದೂರವಿಲ್ಲ. ಇನ್ನು 49 ದಿನಗಳಲ್ಲಿ ಸಿನಿಮಾ ಬಿಗ್ ಸ್ಕ್ರೀನ್ ಮೇಲೆ ಅಬ್ಬರಿಸಲಿದೆ. ಈ ಲೆಕ್ಕದಲ್ಲಿ ಸಿನಿಮಾ ಇನ್ನಾದರೂ ಪ್ರಚಾರ ಶುರು ಮಾಡಬೇಕಿದೆ. ಈ ಚಿತ್ರ ಬರುವ ಕಾರಣ 'ಲಾಲ್ ಸಿಂಗ್ ಚಡ್ಡಾ' (Lal Singh Chadda) ದಂಥಾ ಅಮೀರ್ ಖಾನ್ (Amir Khan) ಸಿನಿಮಾವೇ ಮುಂದಕ್ಕೆ ಹೋಗಿದೆ. ಹೀಗಿರುವಾಗ ಜನರ ನಿರೀಕ್ಷೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದನ್ನು ಸಿನಿಮಾ ಟೀಮ್ ಬಳಸಿಕೊಂಡರೆ ಅವರಿಗೇ ಉತ್ತಮ. ಸೋ, ಟೀಮ್‌ನ ಮುಂದಿನ ಅಪ್‌ಡೇಟ್ಸ್ ಏನಿರುತ್ತೆ ಅನ್ನೋದೇ ಸದ್ಯದ ಕುತೂಹಲ.
Ramya: ಸೈಕಲಾಜಿಕಲ್ ಥ್ರಿಲ್ಲರ್ 'ಬ್ಲಾಂಕ್' ಸಿನಿಮಾದ ಟ್ರೇಲರ್ ಮೆಚ್ಚಿಕೊಂಡ ಮೋಹಕ ತಾರೆ!